ಬೆಂಗಳೂರು: ನಗರದ ದಯಾನಂದ ಸಾಗರ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಚೆನ್ನೈನ ಚೆಟ್ಟಿನಾಡ್ ವಿದ್ಯಾಶ್ರಮದ ಎ.ಎಲ್. ಅನಿರುದ್ಧ್ ಮತ್ತು ಸುಮೇಧ್ ಚಟರ್ಜಿ ಅವರ ತಂಡ ಮೊದಲ ಬಹುಮಾನ ಪಡೆದಿದೆ.

ವರ್ಬ್ಯಾಟಲ್ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಎಚ್‌ಡಿಎಫ್‌ಸಿ ಎರ್ಗೋ, ದಯಾನಂದ ಸಾಗರವಿವಿ ಮತ್ತು ಜೆನ್‌ವರ್ಕ್ಸ್ ಸಂಸ್ಥೆ ಸಹಯೋಗ ನೀಡಿದ್ದವು. ಅಂತಿಮ ಹಣಾಹಣಿಗೆ ಮುನ್ನ ಜ. 18ರಿಂದ ಹಲವು ಲೀಗ್ ಸುತ್ತುಗಳು ನಡೆದಿದ್ದವು.

ವಿಜೇತರು: ಚೆಟ್ಟಿನಾಡ್ ವಿದ್ಯಾಶ್ರಮ ತಂಡ ಮೊದಲ ಬಹುಮಾನ ಜತೆ ₹ 2 ಲಕ್ಷ ನಗದು ಬಹುಮಾನ ಪಡೆಯಿತು. ತಂಡದ ತರಬೇತುದಾರರಾದ ಎಸ್.ಗೋಮತಿ ಅವರಿಗೆ ₹ 20 ಸಾವಿರ ನಗದು ಬಹುಮಾನ ನೀಡಲಾಯಿತು.

ಚೆನ್ನೈನ ಪಿಎಸ್‌ಬಿಬಿ ಮಿಲೆನಿಯಂ ಸ್ಕೂಲ್‌ನ ಧನುಶ್ರೀ ಜಯರಾಮನ್ ಮತ್ತು ಸರವಣ್ ವಿ.ಎಸ್., ಎಸ್‌ಬಿಒಎ ಸ್ಕೂಲ್ ಮತ್ತು ಜ್ಯೂನಿಯರ್ ಕಾಲೇಜಿನ ಆರ್. ಜಸ್ಸಿಂ ಖಲೀಲ್ ಹಾಗೂ ಧ್ರುವ ನಾಯರ್ ಅವರ ತಂಡ ಎರಡನೇ ಸ್ಥಾನ ಪಡೆದವು. ಈ ತಂಡಗಳಿಗೆ ತಲಾ ₹ 50 ಸಾವಿರ ನಗದು ಬಹುಮಾನ ನೀಡಲಾಯಿತು.

ಈ ಸ್ಪರ್ಧೆಯ ಮೊದಲ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಗೆದ್ದವರಿಗೆ ರಾಷ್ಟ್ರಮಟ್ಟದ ಸ್ಪರ್ಧೆ ಒಳ್ಳೆಯ ವೇದಿಕೆ ಒದಗಿಸಿದೆ ಎಂದು ವರ್ಬ್ಯಾಟಲ್‌ನ ದೀಪಕ್ ತಿಮ್ಮಯ ಅಭಿಮಾನದಿಂದ ಹೇಳಿದರು. ಲೇಖಕಿ ಸುಮಾ ಪೊನ್ನಮ್ಮ, ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿಖಿಲ್ ಕನೇಕಲ್, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಕಾರ್ಯತಂತ್ರ ಮತ್ತು ಯೋಜನಾ ವಿಭಾಗದ ನಿರ್ದೇಶಕ ಕ್ರಿಸ್ಟೊ ವಿ. ಜೋಸೆಫ್ ತೀರ್ಪುಗಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.