ಅಯೋಧ್ಯೆಯಲ್ಲಿ ಜ.22ರಂದು ರಾಮಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಭಾರತಕ್ಕೆ ಶುಭ ಹಾರೈಸಿರುವ ನ್ಯೂಜಿಲೆಂಡ್‌ನ ಸಚಿವ ಡೇವಿಡ್ ಸೇಮೌರ್ ‘ಜೈ ಶ್ರೀರಾಮ್’ ಎಂಬ ಘೋಷಣೆಯನ್ನೂ ಹೇಳಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಪ್ರತಿಯೊಬ್ಬರಿಗೂ ನಾನು ಶುಭ ಕೋರಲು ಬಯಸುತ್ತೇನೆ. 500 ವರ್ಷಗಳ ನಂತರ ಭಾರತೀಯರ ಕನಸು ನನಸಾಗುತ್ತಿದೆ. ಮೋದಿಯವರ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಶತಕೋಟಿ ಜನರ ಕನಸು ನನಸಾಗಿದೆ’ ಎಂದಿರುವ ಡೇವಿಡ್, ರಾಮಮಂದಿರಕ್ಕೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದರೊಂದಿಗೆ, ದಿನದ ಪ್ರಮುಖ ವಿದ್ಯಮಾನಗಳು ಈ ವಿಡಿಯೊದಲ್ಲಿ.