ಬೆಳಗಾವಿ: ‘ನಾನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷನಿದ್ದಾಗ ಕೊಟ್ಟಿರುವ ವರದಿಯಲ್ಲಿ ವಾಣಿಜ್ಯ ಆಸ್ತಿಗೆ ಸಂಬಂಧಿಸಿ 2,500 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದೇವೆ. ಆದರೆ, ರೈತರಿಗೆ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ’ ಎಂದು ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿ ಅವಧಿಯಲ್ಲೇ ರೈತರಿಗೆ ಹೆಚ್ಚಿನ ನೋಟಿಸ್ ಕೊಡಲಾಗಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಅಧಿಕಾರ ಅವಧಿಯಲ್ಲಿ ನಾವು ಕೊಟ್ಟಿರುವ ನೋಟಿಸ್ಗೂ, ರೈತರಿಗೂ ಸಂಬಂಧವೇ ಇಲ್ಲ’ ಎಂದರು.

ತಾವು ನಡೆಸುತ್ತಿರುವ ವಕ್ಫ್ ವಿರುದ್ಧದ ಹೋರಾಟ ನಿಲ್ಲಿಸಲು ಬಿಜೆಪಿ ಹೈಕಮಾಂಡ್ ಮೂಲಕ ಒತ್ತಡ ಹಾಕುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಅದು ಸುಳ್ಳು. ಕೇಂದ್ರ ಜಂಟಿ ಸದನ ಸಮಿತಿ ಅಧ್ಯಕ್ಷರೇ ವರದಿ ಸಲ್ಲಿಸಲು ಹೇಳಿದ್ದಾರೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಹೋರಾಟ ಮಾಡಿ, ಮಾಹಿತಿ ಸಂಗ್ರಹಿಸಬೇಕಿದೆ. ನಮ್ಮ ವರದಿ ಬಗ್ಗೆ ಸಮಿತಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ವಕ್ಫ್ ಮಂಡಳಿ ಅಡಿಟ್ ಅನ್ನು ಜಂಟಿ ಸದನ ಸಮಿತಿ ಪೂರ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆ ಮಂಡಳಿ ಆರಂಭವಾದ ದಿನದಿಂದ ಈವರೆಗಿನ ಅಡಿಟ್ ಮಾಡಿದರೆ, ಅಲ್ಲಿ ಏನೇನು ನಡೆದಿದೆ ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.

‘ಪಕ್ಷದಲ್ಲಿನ ಅಸಮಾಧಾನಿತ ನಾಯಕರ ವಿರುದ್ಧ ವಿಜಯೇಂದ್ರ ಜಿದ್ದಿಗೆ ಬಿದ್ದಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ರೀತಿ ನಮ್ಮೊಂದಿಗೆ ಜಿದ್ದಿಗೆ ಬೀಳುವುದಕ್ಕಿಂತ, ತಮಗೆ ಕೊಟ್ಟಿರುವ ಜವಾಬ್ದಾರಿಯುತ ಸ್ಥಾನ ಗಟ್ಟಿ ಮಾಡಿಕೊಂಡು ಹೋಗುವ ಅಗತ್ಯವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.