ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯಲ್ಲಿ ಯುವತಿಯೊಬ್ಬಳು ನಗ್ನಳಾಗಿ ಸ್ಕೂಟರ್ ಚಲಾಯಿಸಿದ ವಿಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗಳವಾರ ರಾತ್ರಿ 10.30ರ ಸುಮಾರಿಗೆ ನಗ್ನ ಯುವತಿಯು ಯುವಕನೊಬ್ಬನ ಜೊತೆ ಸ್ಕೂಟರ್ ಏರಿ ಕ್ಲಬ್ ರಸ್ತೆ ಬಳಿ ಬಂದರು. ನಂತರ ಯುವಕನನ್ನು ಕೆಳಗಿಳಿಸಿ ತಾನೇ ಓಡಿಸಿಕೊಂಡು ಹೋದರು. ನಗರದ ಪ್ರಮುಖ ಬೀದಿಗಳಾದ ಕ್ಲಬ್ ರಸ್ತೆ, ವಿಶ್ವೇಶ್ವರಯ್ಯ ನಗರ, ಹನುಮಾನ ನಗರ ಸುತ್ತ ಸುತ್ತಾಡಿ, ಹಿಂಡಲಗಾ ಮಾರ್ಗದತ್ತ ತೆರಳಿ ಕಣ್ಮರೆಯಾದರು ಎಂದು ಹೇಳಲಾಗುತ್ತಿದೆ.

ಡ್ರಗ್ಸ್ ಸೇವಿಸಿರುವ ಶಂಕೆ

‘ಯುವತಿಯು ಸ್ಥಳೀಯರಾಗಿರಲಿಕ್ಕಿಲ್ಲ. ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಹೊರರಾಜ್ಯದಿಂದ ಬಂದಿರುವಂತಹ ಯುವತಿಯಾಗಿರಬಹುದು. ಡ್ರಗ್ಸ್ ಸೇವಿಸಿ ಅಥವಾ ಬಾಜಿ ಕಟ್ಟಿದ್ದಕ್ಕೆ ಇಂತಹ ಕೃತ್ಯ ಮಾಡಿರಬಹುದು’ ಎಂದು ವಾಟ್ಸ್ ಆ್ಯಪ್ ಗ್ರುಪ್‌ಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ವಿಡಿಯೊ ಪರಿಶೀಲಿಸಲಾಗುತ್ತಿದೆ;

‘ವಿಡಿಯೊ ನೋಡಿದ್ದೇನೆ. ಇದು ಬೆಳಗಾವಿಯಲ್ಲಿಯೇ ನಡೆದಿದೆಯೋ ಅಥವಾ ಬೇರೆ ನಗರದಲ್ಲಿ ನಡೆದಿದೆಯೋ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಸ್ಕೂಟರ್ ನಂಬರ್ ಸ್ಪಷ್ಟವಾಗಿಲ್ಲ. ಆದರೂ, ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.