ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಿರುವ 2019ರ ಕ್ಯಾಲೆಂಡರ್ನಲ್ಲಿ ಆಗಸ್ಟ್ ತಿಂಗಳವರೆಗೆ ಮಾತ್ರ ಮುದ್ರಣವಾಗಿದೆ. ಈ ಕ್ಯಾಲೆಂಡರ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.30ರಂದು ಬಿಡುಗಡೆ ಮಾಡಿದ್ದರು.

ನಾಲ್ಕು ತಿಂಗಳ ವಿವರಗಳು ಇಲ್ಲದ ಕ್ಯಾಲೆಂಡರ್ಗಳನ್ನೇ ಭಕ್ತರು ಹಾಗೂ ಸ್ಥಳೀಯರಿಗೆ ಪ್ರಾಧಿಕಾರವು ₹ 20ಕ್ಕೆ ಮಾರಾಟ ಮಾಡುತ್ತಿದೆ.

ಪ್ರಾಧಿಕಾರವು ಪ್ರತಿ ವರ್ಷ ಕ್ಯಾಲೆಂಡರ್ ಮುದ್ರಿಸಿ ಮಾರಾಟ ಮಾಡುತ್ತದೆ. ದೇವಾಲಯದಲ್ಲಿ ನಡೆಯುವ ಉತ್ಸವಗಳು, ಪೂಜಾ ಸಮಯ, ವಿವಿಧ ಸೇವೆಗಳ ವಿವರಗಳು ಇದರಲ್ಲಿ ಇವೆ. ಹೀಗಾಗಿ, ತಪ್ಪನ್ನು ಸರಿಪಡಿಸಿ ಹೊಸದಾಗಿ ಕ್ಯಾಲೆಂಡರ್ ವಿತರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.

ಇದು ಮುದ್ರಣದೋಷದ ಪ್ರಮಾದ. ಮುಂದೆ ಮುದ್ರಣಗೊಳ್ಳಲಿರುವ ಕ್ಯಾಲೆಂಡರ್ಗಳಲ್ಲಿ ಈ ಸಮಸ್ಯೆ ಆಗದು. ದೋಷಪೂರಿತ ಕ್ಯಾಲೆಂಡರ್ ಖರೀದಿಸಿದವರಿಗೆ ಹೊಸ ಕ್ಯಾಲೆಂಡರ್ ವಿತರಿಸಲಾಗುವುದು
- ಕೆ.ಎಂ.ಗಾಯತ್ರಿ, ಪ್ರಾಧಿಕಾರದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.