ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಿಗೆ ಹಾನಿ ಮಾಡುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳೇ ಹೊರತು ಜನರಲ್ಲ. ಕಳೆದ ಕೆಲವು ವರ್ಷಗಳಲ್ಲಿ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳು ಅರಣ್ಯ ನಾಶಕ್ಕೆ ಕಾರಣವಾಗಿವೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಅಕ್ಷಮ್ಯ. ಇದರ ವಿರುದ್ಧ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸುತ್ತೇವೆ.
-ರವೀಂದ್ರ ರೇಡ್ಕರ್, ಸಂಸ್ಥಾಪಕ ಅಧ್ಯಕ್ಷ, ಸಂಜೀವಿನಿ ಸೇವಾ ಟ್ರಸ್ಟ್
ಹುಲಿ ಯೋಜನೆ ಮಾರ್ಗಸೂಚಿಗಳ ಪ್ರಕಾರ ವನವಾಸಿಗಳು ಸ್ಥಳಾಂತರಗೊಂಡು ಬಿಟ್ಟುಹೋದ ಅರಣ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ. ಕರಡು ಯೋಜನೆಯ ಲೋಪದೋಷ ಗುರುತಿಸಿ ಎನ್‌ಟಿಸಿಎಗೆ ದೂರು ಸಲ್ಲಿಸುತ್ತೇವೆ.