ಬೆಂಗಳೂರು: ‘ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ಪಕ್ಷವು ಶೂನ್ಯ ಸಹಿಷ್ಣುತೆ ಹೊಂದಿದೆ. ಆರೋಪಗಳು ಸಾಬೀತಾದಾಗ ಅದು ಅಪರಾಧವಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಪ್ರಧಾನಮಂತ್ರಿಯವರೂ ಮೈ ನಹೀ ಖಾವೂಂಗಾ, ನ ಖಾನೆ ದೂಂಗಾ ಎಂದಿದ್ದಾರೆ. ಅದೇ ವಿಚಾರಧಾರೆ ಪಕ್ಷದ್ದು’ ಎಂದರು.

ವಿಶ್ವನಾಥ್ ಅವರ ಆರೋಪದ ಕುರಿತು ಪ್ರಶ್ನಿಸಿದಾಗ, ‘ನನಗೆ ಪ್ರಾಥಮಿಕ ಮಾಹಿತಿಯೂ ಇಲ್ಲದೆ ತೀರ್ಪು ನೀಡಲು ಅಸಾಧ್ಯ. ಈ ವಿಷಯದ ಬಗ್ಗೆ ಅಧ್ಯಯನ ಮಾಡದೇ ಮಾತನಾಡಲು ಸಾಧ್ಯವಿಲ್ಲ’ ಎಂದರು. ‘ನಮ್ಮ ಪಕ್ಷ ಗೆದ್ದು ಬರಲು ಎಲ್ಲ ಮಠಾಧೀಶರ ಆಶೀರ್ವಾದ ಕಾರಣ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆಯೂ ಅವರ ಬೆಂಬಲ ಮತ್ತು ಆಶೀರ್ವಾದವೂ ಬೇಕು. ಆದರೆ, ನಮ್ಮ ಪಕ್ಷಕ್ಕೆ ಜಾತಿ ಇಲ್ಲ. ಜಾತಿ ಕೇಂದ್ರಿತ ಪಕ್ಷವೂ ಅಲ್ಲ. ಪಕ್ಷಕ್ಕೆ ಸಿದ್ಧಾಂತವೇ ಮುಖ್ಯ. ಅದರಿಂದಲೇ ಪಕ್ಷ ಬೆಳೆದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.