ಬೆಂಗಳೂರು: ‘ರಾಜ್ಯಪಾಲರ ಅಧಿಕಾರ, ಹೊಣೆಗಾರಿಕೆ ಮತ್ತು ಕಾರ್ಯಗಳನ್ನು ಕಿತ್ತು ಮತ್ತೊಬ್ಬರ ಕೈಗೆ ಕೊಡುವ ಈ ತಿದ್ದುಪಡಿಯು ಅನಗತ್ಯ ಸಂಘರ್ಷ ಮತ್ತು ಒಡಕು ಸೃಷ್ಟಿಸುವ ಯತ್ನವಾಗಿದೆ...’

ತಮ್ಮ ಅಧಿಕಾರವನ್ನು ಕಿತ್ತುಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಹರಿಹಾಯ್ದಿರುವ ಪರಿ ಇದು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ನೇಮಕ ಸಂಬಂಧ ರಾಜ್ಯಪಾಲರಿಗೆ ಇರುವ ಅಧಿಕಾರವನ್ನು ರದ್ದುಪಡಿಸಿ, ಮುಖ್ಯಮಂತ್ರಿಗೆ ನೀಡುವ ಉದ್ದೇಶ ಹೊಂದಿರುವ ‘ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ–2024’ ಅನ್ನು ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಮರಳಿಸಿದ್ದಾರೆ. ‘ಇದು ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಏಕೈಕ ಉದ್ದೇಶ ಹೊಂದಿದೆ’ ಎಂದು ಕಟು ಪದಗಳಲ್ಲಿ ಅವರು ತಿವಿದಿದ್ದಾರೆ.

ರಾಜ್ಯ ಸರ್ಕಾರದ ನಡೆಯನ್ನು ‘ದುಸ್ಸಾಹಸ ಮತ್ತು ಈ ತಿದ್ದುಪಡಿ ಮಸೂದೆಯು ಅಸಾಂವಿಧಾನಿಕ. ಕಾಯ್ದೆಗೆ ತರಲು ಉದ್ದೇಶಿಸಿದ ತಿದ್ದುಪಡಿಯು ದಾರಿ ತಪ್ಪಿಸುವಂತಿದೆ’ ಎಂದು ರಾಜ್ಯಪಾಲರು ಪ್ರತಿಪಾದಿಸಿದ್ದಾರೆ.

‘ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಸಚಿವರು ಮತ್ತು ಇಲಾಖೆಗಳ ಅಧಿಕಾರಿಗಳು ಇಷ್ಟು ವರ್ಷ ಇತ್ತ ಗಮನ ನೀಡಿಯೇ ಇಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ದೀರ್ಘಕಾಲದಿಂದ ಖಾಲಿ ಇದೆ. ಸರ್ಕಾರ ಯಾವುದೇ ಕಾರಣ ಇಲ್ಲದೇ ನೇಮಕ ಪ್ರಕ್ರಿಯೆಯನ್ನು ಸ್ಥಗಿತವಾಗಿ ಇರಿಸಿದೆ. ಆದರೆ ಅದಕ್ಕೆಲ್ಲಾ ಕಾರಣ ಏನು ಎಂಬುವುದು ನಿಚ್ಚಳವಾಗಿದೆ’ ಎಂದೂ ಟೀಕಿಸಿದ್ದಾರೆ.

‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಅಭಿವೃದ್ಧಿಯ ಮೇಲ್ವಿಚಾರಣೆಯನ್ನು ರಾಜ್ಯಪಾಲ ನಡೆಸುತ್ತಾರೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಅವರ ಪಾತ್ರವನ್ನು ಇಡೀ ದೇಶದಲ್ಲೇ ಒಪ್ಪಿಕೊಳ್ಳಲಾಗಿದೆ. ಈ ಸಂಪ್ರದಾಯವು ಮುಂದುವರಿಯಬೇಕು’ ಎಂದಿದ್ದಾರೆ.

ಈ ಸಂಬಂಧ ನಾಲ್ಕು ಪುಟಗಳ ದೀರ್ಘ ಪತ್ರವನ್ನು ರಾಜ್ಯಪಾಲರು ಬರೆದಿದ್ದಾರೆ.

‘ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ಆದೇಶ ಮತ್ತು ಅಭಿಪ್ರಾಯಗಳೊಂದಿಗೆ ಸೂಕ್ತ ಕ್ರಮಕ್ಕಾಗಿ ಆಡಳಿತ ಇಲಾಖೆಗೆ ಕಡತವನ್ನು ಹಿಂದಿರುಗಿಸಲಾಗಿದೆ’ ಎಂದು ಪತ್ರದ ಕೊನೆಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಉಲ್ಲೇಖಿಸಿದ್ದಾರೆ.

ಅನಂತ ಸಮಸ್ಯೆಗಳೇ ಸಿ.ಎಂ.ಗೆ ಹೊರೆ: ಗೆಹಲೋತ್

‘ರಾಜ್ಯದ ಆಡಳಿತ ಅಭಿವೃದ್ಧಿ ಕಾರ್ಯಗಳು ಮತ್ತು ಅನಂತ ಸಮಸ್ಯೆಗಳು ಮುಖ್ಯಮಂತ್ರಿಗೆ ಈಗಾಗಲೇ ಹೊರೆಯಾಗಿ ಕುಳಿತಿವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರಾಜ್ಯಪಾಲರು ತಿದ್ದುಪಡಿ ಮಸೂದೆ ಮುಖ್ಯಮಂತ್ರಿಯವರ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹೀಗಿರುವಾಗ ಮಸೂದೆಯ ಉದ್ದೇಶವನ್ನು ಈಡೇರಿಸಲು ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯಪಾಲರ ಪತ್ರದ ಒಕ್ಕಣೆ ಹೀಗಿದೆ:

ಬದಲಾವಣೆ ತರುವ ಪ್ರಾಮಾಣಿಕ ಉದ್ದೇಶಕ್ಕಿಂತಲೂ ಅಧಿಕಾರ ಕಿತ್ತುಕೊಳ್ಳುವ ಯತ್ನವಾಗಿದೆ

ಸರ್ಕಾರವು ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದರೂ ಅವುಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಗಮನಹರಿಸದ ಕಾರಣ ಅವು ಅನಾಥ ಆಗಿವೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಸ್ಥಾಪನೆ ಆದಂದಿನಿಂದ ಈವರೆಗೆ ಒಬ್ಬನೇ ಒಬ್ಬ ಕಾಯಂ ಉಪನ್ಯಾಸಕನನ್ನು ಹೊಂದಿಲ್ಲ ಏಕೆ?

ಸಂವಿಧಾನದ ವಿಧಿ 254 ಸುಪ್ರೀಂ ಕೋರ್ಟ್ನ ತೀರ್ಪುಗಳು ಯುಜಿಸಿ ನಿಯಮಾವಳಿಗಳ ಪ್ರಕಾರ ವಿಶ್ವವಿದ್ಯಾಲಯಗಳ ವಿಷಯದಲ್ಲಿ ರಾಜ್ಯಪಾಲರದ್ದೇ ಪರಮಾಧಿಕಾರ

ಕುಲಪತಿ ನೇಮಕವು ಕ್ರಮಬದ್ಧವಾಗದೆ ಅನರ್ಹರು ನೇಮಕವಾದರೆ ಕಾನೂನು ತೊಡಕು ಸೃಷ್ಟಿ ಆಗಬಹುದು

‘ಮೈಸೂರು ಅಭಿವೃದ್ದಿ ಪ್ರಾಧಿಕಾರ ಮಸೂದೆ’ಯೂ ವಾಪಸ್

‘ಮೈಸೂರು ಅಭಿವೃದ್ಧಿ ಪ್ರಾಧಿಕಾರ’ ರಚನೆಗಾಗಿ ರಾಜ್ಯ ಸರ್ಕಾರ ರೂಪಿಸಿದ ‘ಮೈಸೂರು ಅಭಿವೃದ್ದಿ ಪ್ರಾಧಿಕಾರ ಮಸೂದೆ –2024’ಕ್ಕೆ ಸ್ಪಷ್ಟನೆ ಕೇಳಿರುವ ರಾಜ್ಯಪಾಲರು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ‘ಮುಡಾಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಆಯೋಗ ಇ.ಡಿ ಮತ್ತು ಲೋಕಾಯುಕ್ತ ತನಿಖೆ ನಡೆಯುತ್ತಿದ್ದು ಹಲವು ಪ್ರಕರಣಗಳೂ ನ್ಯಾಯಾಲಯಗಳಲ್ಲಿವೆ. ಇಂತಹ ಸಂದರ್ಭದಲ್ಲಿ ಹೊಸ ಸ್ವರೂಪ ಕೊಡುವುದು ಸಮಂಜಸವೇ? ಎಲ್ಲ ತನಿಖೆಗಳು ಮುಕ್ತಾಯವಾದ ಬಳಿಕ ಕಾಯ್ದೆ ರೂಪಿಸುವುದು ಸೂಕ್ತ’ ಎಂದಿರುವ ಅವರು ಈ ಎಲ್ಲ ಅಂಶಗಳಿಗೆ ಸ್ಪಷ್ಟೀಕರಣದೊಂದಿಗೆ ಕಡತವನ್ನು ಮತ್ತೆ ಸಲ್ಲಿಸಿ ಎಂದು ನಿರ್ದೇಶನ ನೀಡಿದ್ದಾರೆ.

‘ಮೈಸೂರು ಅಭಿವೃದ್ದಿ ಪ್ರಾಧಿಕಾರ ಮಸೂದೆಯ ಜೊತೆಗೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ಕ್ಕೆ ತಿದ್ದುಪಡಿಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಈ ವಿಚಾರದಲ್ಲಿ ಸ್ಪಷ್ಟತೆ ತರಲು ಎರಡನ್ನೂ ಒಮ್ಮೆಗೆ ಮಾಡುವುದು ಸೂಕ್ತ. ಅಲ್ಲದೆ ಮೈಸೂರು ಪಾರಂಪರಿಕ ಮಹತ್ವ ಕಾಪಾಡಲು ಪ್ರಾಧಿಕಾರದಡಿ ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿಯನ್ನೂ ರಚಿಸಲಾಗುವುದು ಎಂದೂ ತಿಳಿಸಲಾಗಿದೆ. ಈ ಮಧ್ಯೆ ಚಾಮುಂಡೇಶ್ವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ –2024ರ ಮಾರ್ಚ್ನಲ್ಲಿ ರೂಪಿಸಲಾಗಿದೆ. ಮೈಸೂರು ನಗರದ ವ್ಯಾಪ್ತಿಯಲ್ಲಿಯೇ ಈ ಕ್ಷೇತ್ರ ಬರುವುದರಿಂದ ಈಗ ಪ್ರಸ್ತಾಪಿಸಿದ ಮಸೂದೆಯು ಅದರ ವ್ಯಾಪ್ತಿಗೇ ಬರುವುದಿಲ್ಲವೇ’ ಎಂದು ರಾಜ್ಯಪಾಲ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.