ಸಂಸದರ ನಡೆಗೆ ಮುಖಂಡರ ಅಸಮಾಧಾನ ಬಹಿರಂಗ: ಪಾಸ್ಗೆ ಶಿಫಾರಸು ವಿಚಾರದಲ್ಲಿ ಪ್ರತಿಕ್ರಿಯಿಸದ ಪ್ರತಾಪ

ಮೈಸೂರು: ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಅವರಿಗೆ ಪಾಸ್ ನೀಡುವಂತೆ ಶಿಫಾರಸು ಮಾಡಿದ ವಿಚಾರದಲ್ಲಿ ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಅವರನ್ನು ಈ ಭಾಗದ ಬಿಜೆಪಿ ಮುಖಂಡರು ಬೆಂಬಲಿಸಿಲ್ಲ. ಇದು, ಮುಂಬರುವ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ, ಸಂಸದರು ಒಬ್ಬಂಟಿಯಾದರೇ ಎಂಬ ಚರ್ಚೆಗೆ ಗ್ರಾಸವಾಗಿದೆ.

ಅವರನ್ನು ಬೆಂಬಲಿಸಿ ಅಥವಾ ಸಮರ್ಥಿಸಿಕೊಂಡು ಲೋಕಸಭಾ ಕ್ಷೇತ್ರದ ಪ್ರಭಾವಿ ನಾಯಕರಾರೂ ಹೇಳಿಕೆ ನೀಡಿಲ್ಲ. ಕೆಲವು ಅಭಿಮಾನಿಗಳು, ಕಾರ್ಯಕರ್ತರು ಹಾಗೂ 2ನೇ ಹಂತದ ಮುಖಂಡರಷ್ಟೆ ಬೆಂಬಲಿಸಿದ್ದಾರೆ.

ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕರಾದ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಅಪ್ಪಚ್ಚು ರಂಜನ್, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಜೇಂದ್ರ, ಮಾಜಿ ಸಂಸದ ಸಿ.ಎಚ್. ವಿಜಯಶಂಕರ್, ಮುಖಂಡರಾದ ಎಚ್.ವಿ. ರಾಜೀವ್, ಸಿದ್ದರಾಜು ಸೇರಿದಂತೆ ಪ್ರಮುಖ ನಾಯಕರಾರೂ ಧ್ವನಿ ಎತ್ತದಿರುವುದು ಅಚ್ಚರಿಗೂ ಕಾರಣವಾಗಿದೆ. ವಿವಾದದ ನಡುವೆ ಪ್ರತಾಪ ಏಕಾಂಗಿಯಾದರೇ ಎಂಬ ಪ್ರಶ್ನೆ ಮೂಡಲೂ ಇದು ಪುಷ್ಟಿ ನೀಡಿದೆ.
.ಸಂಸತ್ತಿನ ಭದ್ರತಾ ಲೋಪ ಪ್ರಕರಣ: ಭಗತ್ ಸಿಂಗ್ ಗ್ರೂಪ್ನಲ್ಲಿದ್ದ ಆರೋಪಿಗಳು.ಸಂಸತ್ ಭದ್ರತಾ ಲೋಪ ಪ್ರಕರಣ: ಸೂರಪ್ಪ ಗೊತ್ತಿಲ್ಲವೆಂದಿದ್ದ ಮನೋರಂಜನ್ ಪೋಷಕರು!.
ಕಾರಣವೇನು?:

ಮಾಜಿ ಶಾಸಕ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ ಅವರೊಂದಿಗೆ ಸಂಸದರ ಸಂಬಂಧ ಅಷ್ಟಕಷ್ಟೆ ಎನ್ನುವಂತಿದೆ. ಇದು ಹಿಂದಿನಿಂದಲೂ ಇದ್ದು, ಮನಸ್ತಾಪ ಆಗಾಗ ಸ್ಫೋಟಗೊಂಡ ನಿದರ್ಶನಗಳೂ ಇವೆ. ಅಲ್ಲದೇ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಂಸದರು ತಮ್ಮ ಕ್ಷೇತ್ರ ಬಿಟ್ಟು, ನೆರೆಯ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಪರವಾಗಿಯೇ ಹೆಚ್ಚು ಪ್ರಚಾರ ನಡೆಸಿದ್ದರು.

‘ಸಂಸದರು ನಮ್ಮ ಪರ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ತೋರಲಿಲ್ಲ ಎಂಬ ಅಸಮಾಧಾನ ಬಿಜೆಪಿಯ ಪರಾಜಿತ ಅಭ್ಯರ್ಥಿಗಳಲ್ಲಿದೆ. ಅದರಿಂದಾಗಿಯೇ ಬಹುತೇಕರು ಅವರ ಪರ ಮಾತನಾಡಲು ಒಲವು ತೋರುತ್ತಿಲ್ಲ’ ಎನ್ನುತ್ತವೆ ಪಕ್ಷದ ಮೂಲಗಳು. ಇದರೊಂದಿಗೆ, ಸಂಸದರ ನಡೆಯ ಬಗ್ಗೆ ಮುಖಂಡರ ಅಸಮಾಧಾನವೂ ಬಹಿರಂಗಗೊಂಡಿದೆ.

ಹಳಸಿದ ಸಂಬಂಧ:

‘ಭದ್ರತಾ ಲೋಪದ ಪ್ರಕರಣ ನಡೆದು ಹಲವು ದಿನಗಳಾದರೂ ಪ್ರಮುಖ ನಾಯಕರಾರೂ ದನಿ ಎತ್ತದಿರುವುದು, ಸಂಸದರು ಹಾಗೂ ನಾಯಕರ ನಡುವಿನ ಸಂಬಂಧ ಹಳಸಿರುವುದನ್ನು ತೋರಿಸುತ್ತದೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ.

ಈ ನಡುವೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಸಂಸದರನ್ನು ಬೆಂಬಲಿಸಿ, ‘ಸಂಸದರ ರಾಜೀನಾಮೆ ಕೇಳುವುದು ಸರಿಯಲ್ಲ’ ಎಂದಿದ್ದಾರೆ! ಇಂತಹ ಹೇಳಿಕೆಗಳು ಬಿಜೆಪಿ ನಾಯಕರಿಂದ ಹೊರಬಿದ್ದಿಲ್ಲ. ಈ ಬಗ್ಗೆ ಫೇಸ್ಬುಕ್ ಮೊದಲಾದ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಚರ್ಚೆಯಾಗುತ್ತಿದೆ.

‘ಅಸಮಾಧಾನ ಕಾರಣ’

‘ಇದು ಗಂಭೀರ ಸೂಕ್ಷ್ಮ ವಿಷಯವಾದ್ದರಿಂದ ನಾಯಕರು ಪ್ರತಿಕ್ರಿಯಿಸುತ್ತಿಲ್ಲ. ಕೆಲವು ವಿಷಯಗಳಲ್ಲಿ ಸಂಸದರು ಎಲ್ಲರೊಂದಿಗೂ ಸೌಹಾರ್ದದಿಂದ ನಡೆದುಕೊಂಡಿಲ್ಲ. ಎಲ್ಲ ಸಮಾಜದವರನ್ನೂ ಜೊತೆಗೇ ಕರೆದೊಯ್ಯುವಲ್ಲಿ ವಿಫಲವಾಗಿದ್ದಾರೆ. ಎಲ್ಲವನ್ನೂ ನಾನೇ ಮಾಡಿದ್ದು ಎನ್ನುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಬಿಟ್ಟರೆ ಬೇರೆಯವರ ಪರ ಹೆಚ್ಚಿನ ಪ್ರಚಾರ ನಡೆಸಲಿಲ್ಲ. ಹೀಗಾಗಿ ಅವರ ಬೆಂಬಲಕ್ಕೆ ನಿಲ್ಲಲು ಮುಖಂಡರು ಮನಸ್ಸು ಮಾಡುತ್ತಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು. ಈ ನಡುವೆ ಪ್ರತಿ ವಿಷಯಕ್ಕೂ ಪ್ರತಿಕ್ರಿಯಿಸುವ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಸಂಸದರು ತಮ್ಮ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ಬಗ್ಗೆ ಈವರೆಗೂ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯೆಗೆ ಸಂಸದರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.