ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಂದು ಔಷಧ ಅಂಗಡಿಗಳ ಬಂದ್‌

Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ‘ಇ–ಫಾರ್ಮಸಿ’ ವ್ಯವಸ್ಥೆ ವಿರೋಧಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಇದೇ 28 ರಂದು ಔಷಧ ಅಂಗಡಿಗಳ ಬಂದ್‌ಗೆ ಕರೆ ನೀಡಿದೆ.

ಆಲ್‌ ಇಂಡಿಯಾ ಆರ್ಗನೈಜೇಷನ್‌ ಆಫ್‌ ಕೆಮಿಸ್ಟ್‌ ಎಂಡ್‌ ಡ್ರಗಿಸ್ಟ್ಸ್‌ ಸಂಸ್ಥೆ ಈ ಬಂದ್‌ಗೆ ಕರೆ ಕೊಟ್ಟಿದೆ. ಕರ್ನಾಟಕದ ಸಂಘ ಕೂಡ ಇದಕ್ಕೆ ಬೆಂಬಲ ಸೂಚಿಸಿದೆ.

‘ಇ–ಫಾರ್ಮಸಿ (ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮತ್ತು ವಿತರಣೆ) ವ್ಯವಸ್ಥೆಯನ್ನು ತರಾತುರಿಯಲ್ಲಿ ಜಾರಿಗೆ ತರುವ ಕೇಂದ್ರ ಸರ್ಕಾರದ ನೀತಿಯಿಂದ ಗ್ರಾಹಕರು ವಂಚನೆಗೆ ಒಳಗಾಗುತ್ತಾರೆ. ಈ ನೀತಿ ವಿರೋಧಿಸಿ ನಡೆಸಲಿರುವ ಬಂದ್‌ ದಿನ ರಾಜ್ಯದಲ್ಲಿರುವ 27 ಸಾವಿರ ಔಷಧ ಮಳಿಗೆಗಳು ತೆರೆಯುವುದಿಲ್ಲ’ ಎಂದು ಸಂಘದ ಉಪಾಧ್ಯಕ್ಷ ದೇವಿದಾಸ್‌ ಪಿ.ಪ್ರಭು ಹೇಳಿದರು.

ಸೆ. 27ರ ಮಧ್ಯರಾತ್ರಿಯಿಂದ ಸೆ. 28ರ ರಾತ್ರಿವರೆಗೂ ಬಂದ್ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT