ಬೆಂಗಳೂರು: ಏಕಸ್ ಇನ್ಫ್ರಾ ಕಂಪನಿಯು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ‘ಪ್ಲಗ್ ಆ್ಯಂಡ್ ಪ್ಲೇ’ ಮಾದರಿಯ ಎಫ್ಎಂಸಿಜಿ ಉತ್ಪನ್ನಗಳ ತಯಾರಿಕಾ ಪಾರ್ಕ್ನ ಕಾರ್ಯಾಚರಣೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಚಾಲನೆ ನೀಡಿದರು.

ನಗರದ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಏಕಸ್ ಮತ್ತು ಎಫ್ಕೆಸಿಸಿಐ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಈ ಪಾರ್ಕ್ನ ಕಾರ್ಯಾಚರಣೆಗೆ ಚಾಲನೆ ಮಾತನಾಡಿದ ಸಚಿವರು, ಎಫ್ಎಂಸಿಜಿ (ತ್ವರಿತ ಬಿಕರಿ ಗ್ರಾಹಕ ಉತ್ಪನ್ನಗಳು) ತಯಾರಿಕೆಗೆ ಪೂರಕವಾದ ಉದ್ಯಮಗಳ ಸ್ಥಾಪನೆಗೆ ಇದು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದೆ’ ಎಂದರು.

ಪ್ಲಗ್ ಅಂಡ್ ಪ್ಲೇ ಮಾದರಿಯ ಮೂಲಸೌಕರ್ಯ ಇರುವುದರಿಂದ ಪೂರಕ ಉದ್ದಿಮೆಗಳು ನೇರವಾಗಿ ಕಾರ್ಯಾಚರಣೆಯಲ್ಲಿ ತೊಡಗಬಹುದು ಎಂದು ಸಚಿವರು ತಿಳಿಸಿದರು.

‘ಈ ನೂತನ ಉತ್ಪಾದನಾ ವ್ಯವಸ್ಥೆಯು ಎಫ್ಎಂಸಿಜಿ ಉತ್ಪಾದನಾ ಪ್ರಮಾಣ ಮತ್ತು ಉತ್ಪಾದನಾ ಘಟಕಗಳ ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಆ ಮೂಲಕ ಉತ್ಪಾದನಾ ಘಟಕಗಳು ರಫ್ತು ಹೆಚ್ಚಳಕ್ಕೆ ಪೂರಕವಾಗಿ ಈ ಭಾಗದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ. ಈ ಭಾಗದ ಸುಮಾರು 400 ಕಿಲೋಮೀಟರ್ ಸುತ್ತಳತೆಯಲ್ಲಿನ ಉತ್ಪಾದನಾ ಘಟಕಗಳು ದೇಶದ ಎಫ್ಎಂಸಿಜಿ ಸರಕುಗಳ ಪೈಕಿ ಶೇ 35ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಹೊಂದಿವೆ. ಈ ಹಿನ್ನೆಲೆಯಲ್ಲಿ ಇಕಾಸ್ ಇನ್ಫ್ರಾ ಸಂಸ್ಥೆ (ಎಇಕ್ಯೂಯುಎಸ್ ಇನ್ಫ್ರಾ) ಈ ನೂತನ ವ್ಯವಸ್ಥೆ ಈ ಭಾಗದಲ್ಲಿ ಈ ಕೈಗಾರಿಕೆಗಳ ಬಲವರ್ಧನೆ ನಿಟ್ಟಿನಲ್ಲಿ ದೊಡ್ಡ ಪಾತ್ರವಹಿಸಲಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಹೊಸ ಉಪಕ್ರಮವು, ಕೈಗಾರಿಕಾ ಮೂಲಸೌಕರ್ಯ ಸೃಷ್ಟಿಸುವ ಮೂಲಕ ಈ ಭಾಗದ ಸಾಮಾಜಿಕ ಪ್ರಗತಿಗೆ ಮತ್ತು ಸಾವಿರಾರು ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಉತ್ತರ ಕರ್ನಾಟಕದ ಭಾಗದ ಅಭಿವೃದ್ಧಿಗೆ ಇದು ಬಹುದೊಡ್ಡ ಕೊಡುಗೆಯಾಗಲಿದೆ’ ಎಂದರು.

ಹುಬ್ಬಳ್ಳಿಯಲ್ಲಿನ ಈ ಸೌಲಭ್ಯವು ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಹಾಯವಾಗಲಿದೆ. ಜತೆಗೆ ಇದರಿಂದ ಸುಸ್ಥಿರ ಬೆಳವಣಿಗೆಯ ಮಾದರಿ ಸೃಷ್ಟಿ ಆಗಲಿದೆ’ ಎಂದೂ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.