ಬೆಂಗಳೂರು: ‘ರಸ್ತೆ ಗುಂಡಿಗಳ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಮಾತ್ರ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನಿವಾಸ ಇರುವ ರಸ್ತೆಯಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಎಂಬುದನ್ನು ಮಾಧ್ಯಮದವರು ಪರಿಶೀಲಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ದೆಹಲಿಗೆ ಹೋಗಿದ್ದ ನಾನು ಅಲ್ಲಿ ಒಂದು ಸುತ್ತು ಹಾಕಿ ಬಂದೆ. ದೆಹಲಿಯಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಎಂಬುದನ್ನು ನೀವೆಲ್ಲ ಪರಿಶೀಲಿಸಬೇಕು’ ಎಂದರು.

‘ರಸ್ತೆ ಗುಂಡಿ ಇಡೀ ದೇಶದಾದ್ಯಂತ ಇರುವ ಸಮಸ್ಯೆ. ಕೇವಲ ಕರ್ನಾಟಕದ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ’ ಎಂದ ಅವರು, ‘ಎಲ್ಲ ಕಡೆಯೂ ಈ ಸಮಸ್ಯೆಯಿದೆ ಎಂದು ದೊಡ್ಡ ದೊಡ್ಡ ಐಟಿ ಕಂಪನಿಗಳು ಸೇರಿದಂತೆ ಎಲ್ಲರಿಗೂ ಹೇಳುತ್ತಿದ್ದೇನೆ. ರಸ್ತೆಗುಂಡಿ ಮುಚ್ಚುವ ವಿಚಾರವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಬಿಜೆಪಿ ಕಾಲದಿಂದಲೂ ರಸ್ತೆಗಳನ್ನು ಚೆನ್ನಾಗಿ ಮಾಡಿಕೊಂಡು ಬಂದಿದ್ದರೆ ಇಂತಹ ಪರಿಸ್ಥಿತಿ ಏಕೆ ಬರುತ್ತಿತ್ತು? ಅವರು ಯಾರೂ ಮಾಡಲಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಅವರು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದರು.

‘ಜಿಬಿಎ ವ್ಯಾಪ್ತಿಯಲ್ಲಿ ಪಾಲಿಕೆವಾರು 200 ಗುಂಡಿಗಳಂತೆ ಪ್ರತಿದಿನ 1 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಮಳೆಯ ನಡುವೆಯೂ ನಾವು ಕೆಲಸದಲ್ಲಿ ತೊಡಗಿದ್ದೇವೆ’ ಎಂದೂ ಹೇಳಿದರು.

‘ಜನರು ಮೂಲಸೌಕರ್ಯ ಕೇಳಬಾರದೇ?’: ಬಿ.ವೈ.ವಿಜಯೇಂದ್ರ

‘ಮೂಲಸೌಕರ್ಯ ಒದಗಿಸಿ ಎಂದು ಜನರು ಅವರು ಆಯ್ಕೆ ಮಾಡಿದ ಸರ್ಕಾರವನ್ನು ಕೇಳಬಾರದೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸದ ಮುಂದಿನ ರಸ್ತೆಯಲ್ಲೂ ಗುಂಡಿಗಳಿವೆ ಎಂದ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಯಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ರಸ್ತೆಗುಂಡಿಗಳ ಬಗ್ಗೆ ಕೇಳಿದಾಗಲೆಲ್ಲಾ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಸಿಡಿಮಿಡಿಗೊಂಡು ಬೆದರಿಕೆ ಹಾಕುತ್ತಾರೆ ಇಲ್ಲವೇ ಬೇರೆ ನಗರಗಳಿಗೆ ಹೋಲಿಸಿ ಪಲಾಯನ ಮಾಡುತ್ತಾರೆ’ ಎಂದು ಟೀಕಿಸಿದ್ದಾರೆ. ‘ಬೆಂಗಳೂರಿನ ಸಂಚಾರ ದಟ್ಟಣೆಯು ಜನರ ಅತ್ಯಮೂಲ್ಯವಾದ ಉತ್ಪಾದಕ ಸಮಯವನ್ನು ಕಸಿಯುತ್ತಿದ್ದು ಅವರ ಆಕ್ರೋಶ ಹೆಚ್ಚಿಸುತ್ತಿದೆ. ವಿಶೇಷ ಸವಲತ್ತು–ವಿನಾಯತಿಗಳಿಗಾಗಿ ಅಲ್ಲ ಬದಲಿಗೆ ರಸ್ತೆ ಮೂಲಸೌಕರ್ಯ ಇಲ್ಲ ಎಂದು ಕಂಪನಿಗಳು ಬೆಂಗಳೂರು ತೊರೆಯುತ್ತಿವೆ’ ಎಂದಿದ್ದಾರೆ.

‘ಡಿಕೆಶಿ ಮನೆ ಮುಂದೆ ಗುಂಡಿ ಮಾಡಿಸಿಕೊಳ್ಳಲಿ’: ಸಿ.ಸಿ.ಪಾಟೀಲ

‘ಶಿವಕುಮಾರ್ ಅವರು ತಮ್ಮ ಮನೆ ಮುಂದೆ ಹೊಂಡ ಮಾಡಿಕೊಳ್ಳಲಿ. ಬೇಕಿದ್ದರೆ ಕೆರೆಯನ್ನೂ ಮಾಡಿಸಿಕೊಳ್ಳಲಿ’ ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ ಹೇಳಿದರು. ‘ಪ್ರಧಾನಿ ಮನೆ ಮುಂದೆ ಗುಂಡಿ ಇದೆ’ ಎಂಬ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ‘ಏನು ಕೇಳಿದ್ರೂ ಮೋದಿ ಮಾಡಿಲ್ಲ ನೀವು (ಬಿಜೆಪಿ) ಇದ್ದಾಗ ಮಾಡಿಲ್ಲ ಎಂದು ಹೇಳುವ ಚಾಳಿ ಬೆಳೆಸಿಕೊಂಡಿದ್ದಾರೆ. ನಾವು ಇದ್ದಾಗ ಮಾಡಿಲ್ಲ ಎಂದು ಹೇಳುವುದಕ್ಕೆ ನೀವು ಅಧಿಕಾರಕ್ಕೆ ಬಂದಿದ್ದೀರಾ. ಹೀಗೆ ಹೇಳಿ ಎಂದು ಜನ ನಿಮಗೆ ಮತ ಕೊಟ್ಟಿದ್ದಾರಾ? ರಾಜ್ಯದಲ್ಲಿ ನಡೆಯುತ್ತಿರುವುದು ಗುಂಡಿಗಳನ್ನು ನಡೆಸೋ ಸರ್ಕಾರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.