ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಪ್ರಜಾವಾಣಿ‘ ರಸಪ್ರಶ್ನೆ ಸ್ಪರ್ಧೆ–2024: ಆರ್ಮಿ ಪಬ್ಲಿಕ್ ಸ್ಕೂಲ್ ಚಾಂಪಿಯನ್

Published : 16 ಡಿಸೆಂಬರ್ 2024, 20:33 IST
Last Updated : 16 ಡಿಸೆಂಬರ್ 2024, 20:33 IST
ಫಾಲೋ ಮಾಡಿ
Comments
ವಿಜೇತರ ಅಭಿಪ್ರಾಯಗಳು
‘ಪ್ರಜಾವಾಣಿ’ ಪತ್ರಿಕೆಯಲ್ಲಿನ ಜಾಹೀರಾತು ನೋಡಿ ರಸಪ್ರಶ್ನೆಯಲ್ಲಿ ಪಾಲ್ಗೊಂಡೆವು. ನಿಜಕ್ಕೂ ಖುಷಿ ನೀಡಿತು. ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶ್ನಾವಳಿಗಳು ಉತ್ತಮವಾಗಿದ್ದವು. ಪ್ರಾಥಮಿಕ ಹಂತದಲ್ಲಿ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಿದೆವು. ಕ್ವಿಜ್ ಮಾಸ್ಟರ್‌ ಆಕರ್ಷಕವಾಗಿ ಸ್ಪರ್ಧೆ ನಡೆಸಿಕೊಟ್ಟರು.
–ನಿಯತಿ ಜೊಇಸ್, ರಿದಂ ಶ್ರೀವಾಸ್ತವ್ – ಪ್ರಥಮ ಸ್ಥಾನ ಪಡೆದವರು
ವಿದ್ಯಾರ್ಥಿಗಳಿಗೆ ಜ್ಞಾನ ಬೆಳೆಸಿಕೊಳ್ಳಲು ಈ ರಸಪ್ರಶ್ನೆ ಸುವರ್ಣಾವಕಾಶ. ಪ್ರತಿಯೊಂದು ಪ್ರಶ್ನೆಗೆ ಯೋಚಿಸಿ ತಾಳ್ಮೆಯಿಂದ ಉತ್ತರಿಸಿದೆವು. ನಮ್ಮ ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ವೇದಿಕೆ ದೊರಕಿತು. ಕೆಲವು ಪ್ರಶ್ನೆಗಳು ಕಠಿಣವಾಗಿತ್ತು. ನಿತ್ಯ ದಿನಪತ್ರಿಕೆಗಳನ್ನು ಓದುತ್ತಿದ್ದೆವು.
–ಮಾನಸಿ ಷಾ, ಬೃಂದಾ ಸತ್ಯಪ್ರಿಯ – ದ್ವಿತೀಯ ಸ್ಥಾನ ಪಡೆದವರು‌
ಕಳೆದ ವರ್ಷ ನಮ್ಮ ಶಾಲೆ ಚಾಂಪಿಯನ್ ಆಗಿತ್ತು. ಈ ವರ್ಷ ಪ್ರಥಮ ಸ್ಥಾನ ಪಡೆಯುವ ಅವಕಾಶ ಇತ್ತು. ಸ್ವಲ್ಪದರಲ್ಲಿಯೇ ದ್ವಿತೀಯ ಸ್ಥಾನ ತಪ್ಪಿತ್ತು. ತೃತೀಯ ಸ್ಥಾನ ಪಡೆದಿರುವುದು ಖುಷಿ ನೀಡಿದೆ. ಮತ್ತಷ್ಟು ಪ್ರಯತ್ನ ಹಾಕಬೇಕಿತ್ತು. ಕಠಿಣ ಪ್ರಶ್ನೆಗಳಿದ್ದವು.
–ಜೆ. ಚಿನ್ಮಯ್‌, ಎಸ್. ಚಿರಾಗ್ – ತೃತೀಯ ಸ್ಥಾನ ಪಡೆದವರು
ಪೈಪೋಟಿ ನೀಡಿದ ಸರ್ಕಾರಿ ಶಾಲೆ ಮಕ್ಕಳು
‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್ ರಾಜ್ಯದಲ್ಲಿಯೇ ವಿಶೇಷವಾದದ್ದು. ಸರ್ಕಾರಿ ಶಾಲೆ ಮಕ್ಕಳು ಸಹ ಖಾಸಗಿ ಶಾಲೆಯ ಮಕ್ಕಳಿಗೆ ಪೈಪೋಟಿ ನೀಡಿದರು. ಎಲ್ಲಾ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಕಠಿಣ ಮತ್ತು ಸುಲಭ ಪ್ರಶ್ನೆಗಳಿದ್ದವು. ವರ್ಷದಿಂದ ವರ್ಷಕ್ಕೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ.
–ಮೇಘವಿ ಮಂಜುನಾಥ್, ಕ್ವಿಜ್ ಮಾಸ್ಟರ್
ವಿಜೇತರಿಗೆ ಉಚಿತ ಪ್ರವೇಶ: ಸರ್‌ಎಂವಿ ಪಿಯು ಕಾಲೇಜು
ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಪ್ರಥಮ ಪಿಯುಗೆ ಉಚಿತವಾಗಿ ಪ್ರವೇಶ ನೀಡಲಾಗುವುದು ಎಂದು ದಾವಣಗೆರೆ ಸರ್ ಎಂ.ವಿ. ಪಿಯು ಕಾಲೇಜಿನ ನಿರ್ದೇಶಕ ಜೆ. ಪದ್ಮನಾಭ ಘೋಷಿಸಿದರು. ಅಲ್ಲದೇ ವಲಯಮಟ್ಟದಲ್ಲಿ ಚಾಂಪಿಯನ್‌ಗಳಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಆರು ತಂಡಗಳ ಸದಸ್ಯರಿಗೆ ತಲಾ ₹ 1 ಲಕ್ಷ ಸ್ಕಾಲರ್‌ಶಿಪ್‌ ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT