ಹೊಸಪೇಟೆ (ವಿಜಯನಗರ): ಬಳ್ಳಾರಿ ಸಹಿತ ಮೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲು ಭಾನುವಾರ ಸಂಜೆ ಇಲ್ಲಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಿಗ್ಗೆ ಬಾಗಲಕೋಟೆಯತ್ತ ತೆರಳಿದರು.

ಇಲ್ಲಿನ ರೈಲು ನಿಲ್ದಾಣ ರಸ್ತೆಯ ರಾಯಲ್ ಆರ್ಕಿಡ್ ಹೋಟೆಲ್ನಲ್ಲಿ ತಂಗಿದ್ದ ಮೋದಿ ಅವರು ಬೆಳಿಗ್ಗೆ 11.05ರ ವೇಳೆಗೆ ಹೋಟೆಲ್ನಿಂದ ಸಮೀಪದ ಹೆಲಿಪ್ಯಾಡ್ನತ್ತ ತೆರಳಿದರು.

ಭಟ್ರಹಳ್ಳಿ ಆಂಜನೇಯ ದೇವಸ್ಥಾನ ಬಳಿಯಲ್ಲಿನ ಹೆಲಿಪ್ಯಾಡ್ನಲ್ಲಿ ಮೂರು ಹೆಲಿಕಾಪ್ಟರ್ಗಳು ತಂಗಿದ್ದವು. ಪ್ರಧಾನಿ ಅವರು ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಬಾಗಲಕೋಟೆಯತ್ತ ತೆರಳಿದರು.

ಭಾನುವಾರ ರಾಜ್ಯದ ಮೂರು ಕಡೆ ಪ್ರಚಾರ ಭಾಷಣ ಮುಗಿಸಿಕೊಂಡು ಸಂಜೆ 5.50ಕ್ಕೆ ಹೊಸಪೇಟೆಗೆ ಬಂದಿದ್ದ ಮೋದಿ, ಇಲ್ಲಿನ ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.