ಬೆಂಗಳೂರು: ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ಥಾನದಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಆರ್ಎಸ್ಎಸ್ ಸೂಚನೆ ನೀಡಬೇಕು ಎಂಬ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿಯವರ ನಿವೃತ್ತಿ ಕುರಿತು ಪ್ರಸ್ತಾಪಿಸಿದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ‘ಮೋದಿಯವರು ಟ್ರಂಪ್ ಅವರ ಹಿಂಬಾಲಕರಾಗಿರುವುದು ಭಾರತದ ಪ್ರಜಾಪ್ರಭುತ್ವ ಮತ್ತು ಬಿಜೆಪಿಗೆ ಅಪಾಯಕಾರಿ. ಹಾಗಾಗಿ, ಅವರು ನಿವೃತ್ತಿ ತೆಗೆದುಕೊಳ್ಳುವಂತೆ ಆರ್ಎಸ್ಎಸ್ ಮತ್ತು ಬಿಜೆಪಿಯ ಸಾಮಾನ್ಯ ಸಭೆ ಸೂಚನೆ ನೀಡಬೇಕು’ ಎಂದು ಪೋಸ್ಟ್ ಮಾಡಿದ್ದರು.

ಸುಬ್ರಮಣಿಯನ್ ಸ್ವಾಮಿಯವರ ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ‘ದೇಶ ಈಗಾಗಲೇ ಬಯಸುತ್ತಿರುವುದನ್ನು ಬಿಜೆಪಿ ಸಂಸದರು ಕೂಡ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
.ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ.ಭಾರತ ಮಾತೆಗೆ ದ್ರೋಹ ಬಗೆದ ಮೋದಿ ಎಂದು ಘೋಷಿಸೋಣವೇ?: ಸುಬ್ರಮಣಿಯನ್ ಸ್ವಾಮಿ.
ಮುಂದುವರೆದು, ‘ನರೇಂದ್ರ ಮೋದಿಯವರು ಪ್ರಧಾನಿಯಾಗಿ ವಿಫಲರಾಗಿದ್ದಾರೆ ಮತ್ತು ಮುಜುಗರಕ್ಕೀಡಾಗಿದ್ದಾರೆ. ದೇಶವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ನೋಂದಣಿಯಾಗದ, ಅನಿಯಂತ್ರಿತ ಸಂಘಟೆನೆಯಾಗಿರುವ ಆರ್ಎಸ್ಎಸ್ ಏಕೆ ಬರಬೇಕು’? ಎಂದು ಪ್ರಶ್ನಿಸಿದ್ದಾರೆ.

‘ಬಿಜೆಪಿ ಪಕ್ಷವು ಆರ್ಎಸ್ಎಸ್ ಜೊತೆಗಿನ ಸಖ್ಯವನ್ನು ಬಿಟ್ಟು ಬಂದರೆ ಪ್ರಾದೇಶಿಕ ಪಕ್ಷವಾಗಿಯೂ ಅರ್ಹತೆ ಪಡೆಯುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.