ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಣವ್ ಮೊಹಂತಿಗೆ ಹೆಚ್ಚುವರಿ ಹೊಣೆ

Published 11 ಜನವರಿ 2024, 17:20 IST
Last Updated 11 ಜನವರಿ 2024, 17:20 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ತನಿಖಾ ಇಲಾಖೆಯಲ್ಲಿ (ಸಿಐಡಿ) ಹೊಸತಾಗಿ ಸೃಷ್ಟಿಸಿರುವ ಎಡಿಜಿಪಿ (ಸೈಬರ್, ಎಕನಾಮಿಕ್ಸ್ ಆ್ಯಂಡ್‌ ನಾರ್ಕೋಟಿಕ್ಸ್) ಹುದ್ದೆಯ ಹೊಣೆಯನ್ನು ಹಿರಿಯ ಐಪಿಎಸ್‌ ಅಧಿಕಾರಿ ಪ್ರಣವ್ ಮೊಹಂತಿ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಸದ್ಯ ಪೊಲೀಸ್‌ ಕಂಪ್ಯೂಟರ್‌ ವಿಂಗ್‌ನ ಎಡಿಜಿಪಿ ಆಗಿರುವ ಮೊಹಂತಿ ಅವರಿಗೆ ಈ ಹೊಸ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅಲ್ಲದೆ, ಯಾವುದೇ ವಿಳಂಬ ಮಾಡದೆ ಹುದ್ದೆಗೆ ಸೇರುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT