ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯು ಪರೀಕ್ಷೆ–3: ಜೂನ್‌ 7 ನೋಂದಣಿ ಆರಂಭ

Published 5 ಜೂನ್ 2024, 14:15 IST
Last Updated 5 ಜೂನ್ 2024, 14:15 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಮೂರನೇ ಪರೀಕ್ಷೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಜೂನ್‌ 7ರಿಂದ ಆರಂಭವಾಗಲಿದೆ.

ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಮೊದಲ, ಎರಡನೇ ಪರೀಕ್ಷೆ ಬರೆದು ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಫಲಿತಾಂಶವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಮೂರನೇ ಪರೀಕ್ಷೆಗೆ ಹಾಜರಾಗಬಹುದು.

ಇದೇ ಮೊದಲ ಬಾರಿ ಒಂದು ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳು ಮೂರು ಪರೀಕ್ಷೆಗಳನ್ನು ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಪ್ರಥಮ ಪರೀಕ್ಷೆ ಬರೆದಿದ್ದ 6.80 ಲಕ್ಷ ವಿದ್ಯಾರ್ಥಿಗಳಲ್ಲಿ 5.52 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಶೇಕಡ 81.15ರಷ್ಟು ಫಲಿತಾಂಶ ದೊರೆತಿತ್ತು.  

ದ್ವಿತೀಯ ಪಿಯು ಪರೀಕ್ಷೆ–2 ಬರೆದಿದ್ದ 1.48 ಲಕ್ಷ ವಿದ್ಯಾರ್ಥಿಗಳಲ್ಲಿ 52,505 ತೇರ್ಗಡೆಯಾಗಿದ್ದರು. ಒಟ್ಟಾರೆ ಶೇ 35.25 ಫಲಿತಾಂಶ ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT