ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಎಲ್ಲ ಶಾಲೆಗಳ ಆಡಳಿತ ಮಂಡಳಿಗಳು ತಾವು ನಿಗದಿಪಡಿಸುವ ಶುಲ್ಕದ ವಿವರ, ವಿದ್ಯಾರ್ಥಿಗಳ ದಾಖಲಾತಿ, ವಸೂಲಾದ ಶುಲ್ಕದ ಮಾಹಿತಿಯನ್ನು ಪೋಷಕರಿಗೆ ಲಭ್ಯವಾಗುವಂತೆ ಸಾರ್ವತ್ರಿಕವಾಗಿ ಪ್ರಕಟಿಸುವುದು ಕಡ್ಡಾಯ. ಯಾವುದೇ ಶಾಲೆ ನಿಯಮಗಳನ್ನು ಪಾಲಿಸದೇ ದೂರು ದಾಖಲಾದಲ್ಲಿ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ನಿಯಮಗಳ ಅಡಿಯಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದ್ದಾರೆ.