ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಈ ರಾಜ್ಯ ಕಂಡ ಮುಖ್ಯಮಂತ್ರಿಗಳಲ್ಲಿ ಅತಿ ಹೆಚ್ಚು ಸಾಲದ ಹೊರೆ ಹೊರಿಸಿದ ಕೀರ್ತಿ ಇವರಿಗೇ ಸಲ್ಲುತ್ತದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ‘ಇವರ ಅವಧಿಯಲ್ಲಿ ₹4.91 ಲಕ್ಷ ಕೋಟಿ ಸಾಲ ಮಾಡಿದ್ದು, ಒಟ್ಟು ಸಾಲದಲ್ಲಿ ಶೇ 63ರಷ್ಟು ಪಾಲು ಇವರದೇ’ ಎಂದರು.

‘ಸಾಲದ ಮೊತ್ತವನ್ನು ₹1 ಲಕ್ಷ ಕೋಟಿ ಗಡಿ ದಾಟಿಸಿ, ₹1.16 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. ಪ್ರತಿಯೊಬ್ಬ ಕನ್ನಡಿಗನ ಮೇಲೆ ₹1 ಲಕ್ಷ ಸಾಲದ ಹೊರೆ ಹೊರಿಸಿದ್ದಾರೆ. 2021–22ರಲ್ಲಿ ನಮ್ಮ ಸರ್ಕಾರ ಇದ್ದಾಗ ಕೋವಿಡ್ ಇತ್ತು. ಆಗ ಲಾಕ್ಡೌನ್ ಕಾರಣ ಸರ್ಕಾರಕ್ಕೆ ಯಾವುದೇ ಆದಾಯ ಇರಲಿಲ್ಲ. ಆಗ ಅನಿವಾರ್ಯವಾಗಿ ₹80,641 ಕೋಟಿ ಸಾಲ ತೆಗೆದುಕೊಳ್ಳಬೇಕಾಯಿತು. ಅದರ ನಂತರದ ವರ್ಷ ಸಾಲದ ಪ್ರಮಾಣ ಇಳಿಕೆ ಆಯಿತು. ಅಂದರೆ ₹44,549 ಕೋಟಿ ಮಾತ್ರ ಪಡೆದದ್ದು. ಆದರೆ, 2023–24ರಲ್ಲಿ ಸಿದ್ದರಾಮಯ್ಯ ಸರ್ಕಾರ ₹90,280 ಕೋಟಿ, 2024–25 ರಲ್ಲಿ ₹1.07 ಲಕ್ಷ ಕೋಟಿ ಮತ್ತು ಈಗ ₹1.16 ಲಕ್ಷ ಕೋಟಿ ಸಾಲ ಪಡೆಯಲು ಮುಂದಾಗಿದೆ. ಈ ವರ್ಷ ಕಳೆದ ವರ್ಷಕ್ಕಿಂತ ಶೇ 15ರಷ್ಟು ಹೆಚ್ಚು ಸಾಲ ಪಡೆಯಲು ಅವಕಾಶ ಕಲ್ಪಿಸಿಕೊಂಡಿದ್ದಾರೆ. ಅಲ್ಲದೆ, ಸರ್ಕಾರದ ಹೊಣೆಗಾರಿಕೆ 2022–23ರಲ್ಲಿ ₹5.23 ಲಕ್ಷ ಕೋಟಿ ಇದ್ದದ್ದು, 2025–26ರಲ್ಲಿ 7.65 ಲಕ್ಷ ಕೋಟಿಗೆ ಏರಿಕೆ ಆಗಿದೆ. 3 ವರ್ಷಗಳಲ್ಲಿ ₹2.41 ಲಕ್ಷ ಕೋಟಿ ಹೆಚ್ಚಳವಾಗಿದೆ’ ಎಂದು ಅಶೋಕ ಹೇಳಿದರು.

‘2017ರಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನಲ್ಲಿ ‘ಸರ್ಕಾರ ಸಾಲ ಸಿಗುತ್ತದೆ ಎಂದು ಸಾಲ ತೆಗೆದುಕೊಳ್ಳಬಾರದು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ತೆಗೆದುಕೊಳ್ಳಬೇಕೇ ಹೊರತು ಸಾಮರ್ಥ್ಯವಿಲ್ಲದೇ ತೆಗೆದುಕೊಳ್ಳಬಾರದು. ತೆಗೆದುಕೊಂಡ ಸಾಲವನ್ನು ಆಸ್ತಿ ಸೃಜನೆಗೆ ಬಳಸಬೇಕು’ ಎಂದು ಹೇಳಿದ್ದರು. ಈಗ ಇವರು ಪಡೆಯುತ್ತಿರುವ ಸಾಲ ಆಸ್ತಿ ಸೃಜನೆ ಮತ್ತು ಅಭಿವೃದ್ಧಿಗಾಗಿ ಬಳಸುತ್ತಿಲ್ಲ. ಉಚಿತಗಳಿಗೆ ಬಳಸುತ್ತಿದ್ದಾರೆ’ ಎಂದು ತಿವಿದರು.

ಕಳೆದ ವರ್ಷವೂ ಬಜೆಟ್ನಲ್ಲಿ ತೆರಿಗೆ ಹೊರೆ ಇಲ್ಲ ಎಂದರು. ಆಕರ್ಷಕ ಯೋಜನೆಗಳನ್ನು ಪ್ರಕಟಿಸಿ, ಮಾಧ್ಯಮಗಳಲ್ಲಿ ಅದ್ಭುತ ಬಜೆಟ್ ಎಂದು ಹೊಗಳಿಸಿಕೊಂಡರು. ಆ ನಂತರ ಒಂದರ ಮೇಲೆ ಮತ್ತೊಂದು ಬೆಲೆ ಏರಿಕೆ ಮಾಡಿದರು. ಬೆಲೆ ಏರಿಕೆಯಿಂದ ಆದಾಯ ಸಂಗ್ರಹವಾಗಿದೆ. ಈ ಮೂಲದಿಂದ ₹41 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡಿದರು. ಈ ವರ್ಷವೂ ಸಾರ್ವಜನಿಕರಿಗೆ ತೆರಿಗೆ ಏರಿಕೆಯ ಮಾರಿ ಹಬ್ಬ ಕಾದಿದೆ ಎಂದರು.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ ಮೀಸಲಿಟ್ಟ ಅನುದಾನದಲ್ಲಿ ಶೇ 30ರಷ್ಟನ್ನು ಅನ್ಯ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯ ಮೂಲ ಉದ್ದೇಶಕ್ಕೆ ಸರ್ಕಾರವೇ ಕೊಡಲಿ ಪೆಟ್ಟು ಹಾಕುತ್ತಿದೆ ಎಂದು ದೂರಿದರು.

ಅಶೋಕ ಅವರು ಚರ್ಚೆ ಆರಂಭಿಸುವಾಗ ಒಂದಿಬ್ಬರು ಸಚಿವರು ಬಿಟ್ಟರೆ ಯಾರೂ ಇರಲಿಲ್ಲ. ಅಧಿಕಾರಿಗಳ ಗ್ಯಾಲರಿಯಲ್ಲೂ ಹಣಕಾಸು ಇಲಾಖೆ ಅಧಿಕಾರಿಗಳು ಇರಲಿಲ್ಲ. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಮುಖ್ಯಮಂತ್ರಿ ಮತ್ತು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಇರಬೇಕು. ಯಾರೂ ಇಲ್ಲ ಎಂದು ಗದ್ದಲ ಎಬ್ಬಿಸಿದರು. ಸ್ವಲ್ಪ ಹೊತ್ತಿನಲ್ಲೇ ಮುಖ್ಯಮಂತ್ರಿ ಬಂದು ಕುಳಿತರು.

‘ಗೃಹಲಕ್ಷ್ಮಿ: ಪರಿಶಿಷ್ಟರಿಗೆ ₹4 ಸಾವಿರ ಕೊಡಿ’

ಪರಿಶಿಷ್ಟ ಜಾತಿ ಮತ್ತು ವರ್ಗದವರು ಸಾಮಾನ್ಯ ವರ್ಗದವರಿಗೆ ಹೋಲಿಸಿದಾಗ ಸಾಮಾಜಿಕವಾಗಿ
ಮತ್ತು ಶೈಕ್ಷಣಿಕವಾಗಿ 10 ವರ್ಷಗಳಷ್ಟು ಹಿಂದೆ ಇರುತ್ತಾರೆ. ಹೀಗಾಗಿ ಯಾವುದೇ ಯೋಜನೆ ಅಡಿ ನೆರವು
ನೀಡುವಾಗ ಸಾಮಾನ್ಯ ವರ್ಗ ಮತ್ತು ಪರಿಶಿಷ್ಟರಿಗೆ ಸಮ ಪ್ರಮಾಣದಲ್ಲಿ ನೆರವು ನೀಡುವುದು ಸರಿಯಲ್ಲ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ ₹2,000 ನೀಡಿದರೆ, ಪರಿಶಿಷ್ಟರಿಗೆ ₹4,000 ನೀಡಬೇಕು ಎಂದು ಅಶೋಕ ಆಗ್ರಹಿಸಿದರು.

‘ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇ 14ರಷ್ಟು ಇದೆ, ಆದ್ದರಿಂದ ಮುಸ್ಲಿಮರಿಗೆ ₹60 ಸಾವಿರ ಕೋಟಿ ಕೊಡಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಜಮೀರ್ ಅವರ ಮಾನದಂಡ ಅನುಸರಿಸುವುದಾದರೆ ಶೇ 24ರಷ್ಟು ಜನಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ₹98,701 ಕೋಟಿ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಕೇಂದ್ರದ ಸಾಲ ₹200 ಲಕ್ಷ ಕೋಟಿ ದಾಟಿದೆ: ಸಿಎಂ

‘ಕೇಂದ್ರದ ಸಾಲ ಸುಮಾರು ₹200 ಲಕ್ಷ ಕೋಟಿ ಮೀರಿದೆ. ಆ ಬಗ್ಗೆ ಏಕೆ ಮಾತನಾಡುವುದಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಸಾಲದ ಬಗ್ಗೆ ಅಶೋಕ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದಮುಖ್ಯಮಂತ್ರಿ, ‘ಕೇಂದ್ರ ಸರ್ಕಾರ ಸಾಲ ಮಾಡಿಲ್ಲವೇ? ಎಷ್ಟು ಸಾಲ ಮಾಡಿದೆ? ಮೋದಿಯವರು ಸಾಲ ಮಾಡಿಲ್ಲವೇ’ ಎಂದು ಕೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ ಅವರು, ‘ಕೇಂದ್ರ ಸರ್ಕಾರ ಮಾತ್ರ ಅಲ್ಲ, ಜಗತ್ತಿನ ಎಲ್ಲ ರಾಷ್ಟ್ರಗಳೂ ಸಾಲ ಮಾಡುತ್ತವೆ. ಮಾಡಿದ ಸಾಲ ಹೇಗೆ ಖರ್ಚು ಮಾಡಲಾಗುತ್ತದೆ ಎನ್ನುವುದು ಮುಖ್ಯ. ಕೇಂದ್ರ ಸರ್ಕಾರ ಸಾಲ ಮಾಡಿದ್ದರಲ್ಲಿ ದೇಶ ವ್ಯಾಪಿ ಮೂಲ ಸೌಕರ್ಯಕ್ಕಾಗಿ, ಸ್ವತ್ತುಗಳ ನಿರ್ಮಾಣಕ್ಕೆ ಬಳಸುತ್ತಿದೆ. ನೀವು ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

‘ನಾವು ಇಲ್ಲಿ ಚರ್ಚೆ ಮಾಡುತ್ತಿರುವುದು ರಾಜ್ಯ ಬಜೆಟ್ ಬಗ್ಗೆಯೇ ಹೊರತು ಕೇಂದ್ರದ ಬಜೆಟ್ ಬಗ್ಗೆ ಅಲ್ಲ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಲ್ಲಿಗೆ ಬರುವುದಿಲ್ಲ. ಕೇಂದ್ರ ಸರ್ಕಾರವನ್ನು ಟೀಕೆ ಮಾಡಬೇಕು ಅಂತ ಇದ್ದರೆ ಸಂಸದರಾಗಿ ಸಂಸತ್ತಿಗೆ ಹೋಗಿ’ ಎಂದು ಅಶೋಕ ಸಲಹೆ ನೀಡಿದರು. ಈ ಹಂತದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.