ಬೆಂಗಳೂರು: ‘ಮತ ಕಳ್ಳತನ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಕುರಿತು ಲಿಖಿತ ಉತ್ತರ ನೀಡಲಾಗುವುದು’ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಹೇಳಿದ್ದಾರೆ.

ಈ ಕುರಿತು ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿಗೆ ಸಮಯ ಕೋರಿತ್ತು. ಆ. 8ರಂದು ಮಧ್ಯಾಹ್ನ 1ರಿಂದ 3 ರವರೆಗೆ ಸಮಯ ನಿಗದಿಮಾಡಲಾಗಿದ್ದು, ಅವರು ಕೋರುವ ಮಾಹಿತಿ ಒದಗಿಸಲಾಗುವುದು’ ಎಂದಿದ್ದಾರೆ.

‘ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 1960ರ ಮತದಾರರ ನೋಂದಣಿ ನಿಯಮಗಳು, ಭಾರತ ಚುನಾವಣಾ ಆಯೋಗವು ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು, 1950ರ ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಈಗಾಗಲೇ 2024 ನವೆಂಬರ್ನ ಮತದಾರರ ಕರಡು ಪಟ್ಟಿ, 2025ನೇ ಜನವರಿಯಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಪಕ್ಷದ ಜತೆಗೆ ಹಂಚಿಕೊಳ್ಳಲಾಗಿದೆ. ಈ ಕುರಿತು ಕಾಂಗ್ರೆಸ್ ಯಾವುದೇ ಮೇಲ್ಮನವಿ ಸಲ್ಲಿಸಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಚುನಾವಣಾ ನಡವಳಿಕೆ, ಚುನಾವಣಾ ಫಲಿತಾಂಶಗಳನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಬಹುದು. ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ಲಗತ್ತಿಸಲಾದ ಘೋಷಣೆ, ಪ್ರಮಾಣ ವಚನಕ್ಕೆ ಸಹಿ ಹಾಕಿ, ಅಂತಹ ಮತದಾರರ ಹೆಸರುಗಳ ಜತೆಗೆ ಹಿಂತಿರುಗಿಸಬಹುದು’ ಎಂದೂ ಅವರು ಹೇಳಿದ್ದಾರೆ.
.ಜಯ ಸಾಧಿಸಲು ಬಿಜೆಪಿಗೆ ಚುನಾವಣಾ ಆಯೋಗ ಸಹಾಯ: ಮತಗಳ್ಳತನಕ್ಕೆ ದಾಖಲೆ ನೀಡಿದ ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.