ನವದೆಹಲಿ: ಈ ಸಲದ ಕೇಂದ್ರ ಬಜೆಟ್ನಲ್ಲಿ ಕರ್ನಾಟಕದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ₹3,085 ಕೋಟಿ ಹಾಗೂ ಜೋಡಿ ಹಳಿಗಳ ನಿರ್ಮಾಣಕ್ಕೆ ₹1,534 ಕೋಟಿ ಮೀಸಲಿಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಒಬಿ, ಆರ್ಯುಬಿ ನಿರ್ಮಾಣಕ್ಕೆ ಸಂಪೂರ್ಣ ಮೊತ್ತವನ್ನು ರೈಲ್ವೆ ಇಲಾಖೆಯೇ ಭರಿಸುತ್ತದೆ. ರಾಜ್ಯದಲ್ಲಿ ₹52,900 ಕೋಟಿ ಮೊತ್ತದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದರು.

‘ಅಮೃತ ಯೋಜನೆಯಡಿ ₹2,110 ಕೋಟಿ ವೆಚ್ಚದಲ್ಲಿ ರಾಜ್ಯದ 61 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಒಂಬತ್ತು ನಿಲ್ದಾಣಗಳ ಕಾಮಗಾರಿ ಮುಗಿದಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ಕಣ್ಣಿನ ಪೊರೆ ತೆಗೆಸಿಕೊಳ್ಳಬೇಕು. ಸಣ್ಣತನದ ರಾಜಕೀಯ, ಸ್ಯಾಡಿಸ್ಟ್ ಬುದ್ಧಿ ಬಿಟ್ಟು ಕೆಲಸ ಮಾಡಬೇಕು. ಕೇಂದ್ರದ ಜತೆಗೂಡಿ ರಾಜ್ಯ ಸರ್ಕಾರ ಕೆಲಸ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.