ತುಮಕೂರು: ತೋಟಗಾರಿಕೆ ಬೆಳೆಗಳಿಗೆ ಅಂಗೈನಲ್ಲೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಅವಕಾಶವನ್ನು ಜಿಲ್ಲಾ ತೋಟಗಾರಿಕೆ ಇಲಾಖೆ ರೈತರಿಗೆ ಕಲ್ಪಿಸಿಕೊಟ್ಟಿದ್ದು,ಅದಕ್ಕಾಗಿ ‘ರೈತ ಸೇತು’ ಆ್ಯಪ್ ಅನ್ನು ಇದೇ ಮೊದಲ ಬಾರಿಗೆ ತಂತ್ರಜ್ಞರ ನೆರವು ಪಡೆದು ಇಲಾಖೆಯು ಅಭಿವೃದ್ಧಿಪಡಿಸಿದೆ.

ಈ ಆ್ಯಪ್ನಲ್ಲಿ ನೋಂದಣಿ ಮಾಡಿಕೊಂಡುರೈತರು ತಮ್ಮ ಉತ್ಪನ್ನಗಳನ್ನುಮಧ್ಯವರ್ತಿ ಇಲ್ಲದೆ ನೇರವಾಗಿ ಆನ್ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ. ವರ್ತಕರೂ ರೈತರಿಂದಲೇ ನೇರವಾಗಿ ಖರೀದಿಸಲು ಇದು ಸಹಕಾರಿಯಾಗಲಿದೆ.

ಹಣ್ಣು, ತರಕಾರಿ, ಹೂವು,ಮಸಾಲೆ ಪದಾರ್ಥಗಳು, ಸಿರಿಧಾನ್ಯ, ಎಣ್ಣೆ ಕಾಳುಗಳು, ಜೈವಿಕ ಗೊಬ್ಬರ, ತೆಂಗಿನ ಉತ್ಪನ್ನಗಳು ಹಾಗೂ ತೋಟಗಾರಿಕೆ ಬೆಳೆಗಳಿಂದ ಸಂಸ್ಕರಿಸಿದ ಉತ್ಪನ್ನಗಳ ಮಾರಾಟಕ್ಕೆ ವೇದಿಕೆಯಾಗಿದೆ. ರೈತ ಹಲವು ವರ್ತಕರನ್ನು ಹಾಗೂ ವರ್ತಕ ಹಲವುರೈತರನ್ನು ಏಕ ಕಾಲ ದಲ್ಲಿ ಸಂಪರ್ಕಿಸಬಹುದು. ಬೆಳೆಕಟಾವಿಗೆ ಮುನ್ನ ಮಾರುಕಟ್ಟೆಸೃಷ್ಟಿಸಿಕೊಳ್ಳಲು ನೆರವಾಗಲಿದೆ.

ರೈತರು ಏನು ಮಾಡಬೇಕು?: ರೈತರು ಮೊದಲಿಗೆ ‘ರೈತ ಸೇತು’ ಆ್ಯಪ್ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ಸಹಿತ ನೋಂದಣಿ ಮಾಡಿಕೊಂಡು, ಕೆಲ ಪ್ರಾಥಮಿಕ ಮಾಹಿತಿ ದಾಖಲಿಸಬೇಕು. ಎಷ್ಟು ಪ್ರದೇಶದಲ್ಲಿ ಬೆಳೆ (ಹಣ್ಣು, ತರಕಾರಿ, ಹೂ ಇತ್ಯಾದಿ) ಬೆಳೆಯಲಾಗಿದೆ, ಕಟಾವು ಯಾವಾಗ, ಎಷ್ಟು ಇಳುವರಿ ಬರಬಹುದು, ಬಣ್ಣ, ಗಾತ್ರ, ತಳಿ, ಮಾದರಿ ಮೊದಲಾದ ವಿವರ
ಗಳನ್ನು ನಮೂದಿಸಬೇಕು.

ಬೆಳೆಯ ಚಿತ್ರ ಅಥವಾ ವಿಡಿಯೊತೆಗೆದು ಅಪ್ಲೋಡ್ ಮಾಡುವ ಅವಕಾಶಗಳಿವೆ. ಪ್ರಮುಖವಾಗಿ ಬೆಲೆ ನಿಗದಿಯ ಅವಕಾಶವೂ ರೈತರಿಗೆ ಇರುತ್ತದೆ. ಮಾರುಕಟ್ಟೆಯನ್ನು ಅಂದಾಜಿಸಿ ಬೆಲೆ ನಮೂದಿಸಿ ಸೇವ್ ಮಾಡಿದರೆ ಅವರ ಕೆಲಸ ಮುಗಿಯಿತು.

ಈ ಆ್ಯಪ್ನಲ್ಲಿ ಈ ವಿವರಗಳನ್ನು ಗಮನಿಸುವ ವರ್ತಕರು ಕಾಲಕಾಲಕ್ಕೆ ರೈತರನ್ನು ಸಂಪರ್ಕಿಸಿ ವ್ಯವಹರಿಸುತ್ತಾರೆ. ಅಗತ್ಯವಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಉತ್ಪನ್ನಗಳ ಗುಣಮಟ್ಟ ಪರಿಶೀಲಿಸಿ ಮಾತುಕತೆ ನಡೆಸಬಹುದು. ರೈತರು, ವರ್ತಕರಿಗೆ ಪರಸ್ಪರ ಒಪ್ಪಿಗೆಯಾದ ನಂತರ ಮಾರಾಟ– ಕೊಳ್ಳುವ ಪ್ರಕ್ರಿಯೆ ಮುಂದುವರಿಸಬಹುದು.

ಮಾಹಿತಿಗೆ ಮೊಬೈಲ್ 94489 99217 ಸಂಪರ್ಕಿಸಬಹುದು.

ಕನ್ನಡದಲ್ಲೂ ಮಾಹಿತಿ:ನ್ನಡ ಹಾಗೂ ಇಂಗ್ಲಿಷ್ನಲ್ಲಿ ವಿವರ ಲಭ್ಯ. ಮಾಹಿತಿ ನಮೂದಿಸುವುದು ಸರಳವಾಗಿದೆ. ‘ರೈತ ಸೇತು’ ಆ್ಯಪ್ನಲ್ಲಿ ಎಪಿಎಂಸಿ ಧಾರಣೆಯ ವಿವರಗಳು ಲಭ್ಯವಾಗುತ್ತವೆ. ಮಾರುಕಟ್ಟೆಯ ಆಗುಹೋಗುಗಳನ್ನು ಗಮನಿಸಿ ರೈತರು ತಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಿ ಮಾರಾಟ ಮಾಡಬಹುದು. ಇದರ ಆಧಾರದ ಮೇಲೆ ವರ್ತಕರು ಮಾತುಕತೆ ನಡೆಸಿ ಖರೀದಿಸಲು ನೆರವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಪ್ರಯತ್ನವಾಗಿ ಜಿಲ್ಲೆಯ ಮಟ್ಟಿಗೆ ಆ್ಯಪ್ ಬಳಕೆಯಾಗಲಿದೆ. ಮುಂದೆ ಹೊರ ಜಿಲ್ಲೆ ಹಾಗೂ ರಾಜ್ಯಮಟ್ಟಕ್ಕೂ ವಿಸ್ತರಿಸಬಹುದು. ಹೊರಗಿನವರೂ ಜಿಲ್ಲೆಗೆಬಂದು ಖರೀದಿಸಲು ಸಹಕಾರಿಯಾಗಿದೆ. ಇಲ್ಲಿ ಮಧ್ಯವರ್ತಿಗಳ ಪಾತ್ರ ಇರುವು ದಿಲ್ಲ. ರೈತರ ಬಳಿ ಸ್ಮಾರ್ಟ್ ಫೋನ್ ಇಲ್ಲದಿದ್ದರೂ ಸ್ನೇಹಿತರು, ಸಂಬಂಧಿಕರು, ಸೇವಾ ಸಿಂಧು ಕೇಂದ್ರಗಳ ನೆರವು ಪಡೆದು ವಿವರ ನಮೂದಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.