ಬೆಂಗಳೂರು: ‘ಹಿಂದೂಗಳಿಗಷ್ಟೇ ಆರ್ಎಸ್ಎಸ್ಗೆ ಪ್ರವೇಶ’ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ನಗರದ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕಾರ್ಯಕ್ರಮದ ಭಾಗವಾಗಿ ಭಾನುವಾರ ಆಯೋಜಿಸಲಾಗಿದ್ದ ಪ್ರಶ್ನೋತ್ತರದಲ್ಲಿ, ‘ಮುಸ್ಲಿಮರು ಆರ್ಎಸ್ಎಸ್ಗೆ ಬಂದರೆ ಸೇರಿಸಿಕೊಳ್ಳುತ್ತೀರಾ’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.

‘ಹಿಂದೂಗಳಷ್ಟೇ ಆರ್ಎಸ್ಎಸ್ಗೆ ಬರಬೇಕು. ‘ಭಾರತೀಯರೆಲ್ಲರೂ ಹಿಂದೂ’ ಎಂದು ಭಾವಿಸುವವರನ್ನು ನಾವು ಹಿಂದೂ ಎಂದು ಪರಿಗಣಿಸುತ್ತೇವೆ. ಆದರೆ, ಮುಸ್ಲಿಮರು, ಕ್ರೈಸ್ತರು, ಬ್ರಾಹ್ಮಣರು, ಹಿಂದೂಗಳಲ್ಲಿನ ಇತರ ಜಾತಿಯವರೆಂದು ಬರುವವರಿಗೆ ಆರ್ಎಸ್ಎಸ್ಗೆ ಪ್ರವೇಶವಿಲ್ಲ. ಶಾಖೆಗೆ ಬರುವವರು ಈ ಎಲ್ಲ ‘ಪ್ರತ್ಯೇಕತಾ ಭಾವ’ವನ್ನು ಹೊರಗಿಟ್ಟು ಬರಬೇಕು’ ಎಂದರು.

‘ಭಾರತದಲ್ಲಿ ನಿಜವಾಗಿಯೂ ಜಾತೀಯತೆ ಇಲ್ಲ. ಇರುವುದು ಜಾತಿ ಕುರಿತ ಗೊಂದಲ ಮಾತ್ರ. ಅದನ್ನೂ ರಾಜಕೀಯ ಲಾಭಕ್ಕಾಗಿ ಸೃಷ್ಟಿಸಲಾಗಿದೆ. ಶಾಖೆಗೆ ಬರುವವರ ಜಾತಿ, ಧರ್ಮವನ್ನು ನಾವು ಲೆಕ್ಕಹಾಕುವುದಿಲ್ಲ. ಅವರನ್ನು ಹಿಂದೂ ಎಂದೇ ಪರಿಗಣಿಸುತ್ತೇವೆ’ ಎಂದರು.

‘ದೇಶ ವಿಭಜನೆ ಏಕಾಯಿತು’ ಎಂದು ಸಭಿಕರು ಕೇಳಿದ ಪ್ರಶ್ನೆಗೆ, ‘ಅದಕ್ಕೆ ಹಲವಾರು ತಾತ್ಕಾಲಿಕ ಕಾರಣಗಳು ಇರಬಹುದು. ಆದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗಿತ್ತು ಅಥವಾ ಹಿಂದೂ ಭಾವ ಕುಗ್ಗಿತ್ತು ಎಂಬುದೇ ವಿಭಜನೆಗೆ ನಿಜವಾದ ಕಾರಣ’ ಎಂದು ಉತ್ತರಿಸಿದರು.

ಸನಾತನ ಧರ್ಮವೇ ಹಿಂದೂ ರಾಷ್ಟ್ರ. ಸನಾತನ ಧರ್ಮದ ಏಳಿಗೆಯಾಗುತ್ತಿದೆ ಅಂದರೆ ಭಾರತವು ಏಳಿಗೆಯಾಗುತ್ತಿದೆ ಎಂದು ಅರ್ಥ
ಮೋಹನ್ ಭಾಗವತ್ ಆರ್ಎಸ್ಎಸ್ ಸರಸಂಘ ಚಾಲಕ

‘ನೋಂದಣಿ ಏಕೆ ಮಾಡಿಕೊಳ್ಳಬೇಕು?’

ಆರ್ಎಸ್ಎಸ್ ನೋಂದಣಿ ಆಗದೇ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಆರ್ಎಸ್ಎಸ್ ಸ್ಥಾಪನೆಯಾಗಿದ್ದು 1925ರಲ್ಲಿ. ಆಗ ಬ್ರಿಟಿಷರ ಬಳಿ ನೋಂದಣಿ ಮಾಡಿಸಬೇಕಿತ್ತೇ? ಸ್ವಾತಂತ್ರ್ಯ ಬಂದ ನಂತರ ನೋಂದಣಿ ಕಡ್ಡಾಯವಾಗಿರಲಿಲ್ಲ. ಆರ್ಎಸ್ಎಸ್ಗೆ ಈಗಲೂ ನೋಂದಣಿ ಬೇಕಿಲ್ಲ. ನೋಂದಣಿ ಏಕೆ ಮಾಡಿಕೊಳ್ಳಬೇಕು’ ಎಂದು ಮೋಹನ್ ಭಾಗವತ್ ಪ್ರಶ್ನಿಸಿದರು. ‘ನಮ್ಮನ್ನು ಮೂರು ಬಾರಿ ನಿಷೇಧಿಸಲು ಯತ್ನಿಸಲಾಗಿದೆ. ಅಂದರೆ ಸರ್ಕಾರವು ನಮ್ಮ ಇರುವಿಕೆಯನ್ನು ಗುರುತಿಸಿದೆ ಎಂದಲ್ಲವೇ. ನಮಗೆ ಹೊರಗಿನಿಂದ ಯಾವುದೇ ಹಣ ಬರುವುದಿಲ್ಲ. ವರ್ಷಕ್ಕೊಮ್ಮೆ ಸ್ವಯಂಸೇವಕರು ಗುರುದಕ್ಷಿಣಿ ನೀಡುತ್ತಾರೆ. ಅದನ್ನೂ ಸಮರ್ಪಣೆ ಎಂದು ಪರಿಗಣಿಸಲಾಗುತ್ತದೆ. ಆದಾಯ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ಸೂಚಿಸಿತ್ತು. ಅಂದಿನಿಂದ ನಾವೂ ಆದಾಯ ತೆರಿಗೆ ಪಾವತಿಸುತ್ತಿದ್ದೇವೆ’ ಎಂದರು.