ಹುಬ್ಬಳ್ಳಿ: 'ದೇಶೆಪ್ರೇಮಿಗಳ ಸಂಘಟನೆಯಾದ ಆರ್.ಎಸ್.ಎಸ್. ಅನ್ನು ನಿಷೇಧಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸುತ್ತಿರುವುದು ದುರ್ದೈವದ ಸಂಗತಿ. ಅವರು ಈ ಮಟ್ಟಕ್ಕೆ ಇಳಿಯಬಾರದಿತ್ತು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪಿಎಫ್ಐ ನಿಷೇಧಿಸಿರುವ ಕುರಿತು ವಿರೋಧ ವ್ಯಕ್ತಪಡಿಸಿ, ಸಮರ್ಥನೆ ಮಾಡಿಕೊಳ್ಳಲು ಕಾಂಗ್ರೆಸ್'ನಲ್ಲಿ ಯಾವ ಆಧಾರಗಳೂ ಇಲ್ಲ. ಈ ಹಿಂದೆ ಸಿದ್ಧರಾಮಯ್ಯನವರೇ ಪಿಎಫ್ಐ ಸಂಘಟನೆ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದರು. ಆರ್.ಎಸ್.ಎಸ್. ದೇಶಪ್ರೇಮಿಗಳ ಸಂಘಟನೆ. ಬಡ ಮಕ್ಕಳಿಗೆ ಹಲವಾರು ಸಂಸ್ಥೆಗಳನ್ನು ಕಟ್ಟಿದೆ. ಪ್ರವಾಹ, ಸಂಕಷ್ಟಗಳು ಎದುರಾದಾಗ ಸಂತ್ರಸ್ತರ ನೆರವಿಗೆ ನಿಂತು ಕೆಲಸ ಮಾಡುತ್ತದೆ. ಇಂತಹ ಸಂಘಟನೆಯನ್ನು ನಿಷೇಧಿಸಬೇಕೆನ್ನುವ ಆಗ್ರಹ ಸರಿಯಲ್ಲ' ಎಂದರು.

'ಎಐಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆಂತರಿಕ ವಿಚಾರ. ಮೊದಲ ಬಾರಿಗೆ ಅವರು ಚುನಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಒಂದಷ್ಟು ಗೊಂದಲ ಏರ್ಪಟ್ಟಿರಬಹುದು' ಎಂದು ಹೇಳಿದರು.

ಇವುಗಳನ್ನೂ ಓದಿ

ಆರ್ಎಸ್ಎಸ್ಗೂ, ಪಿಎಫ್ಐಗೂ ಹೋಲಿಕೆ ಅಕ್ಷಮ್ಯ ಅಪರಾಧ: ಸಿ.ಟಿ. ರವಿ

ಸಿದ್ದರಾಮಯ್ಯಗೆ ತಲೆಕೆಟ್ಟಿದೆ, ಅವರ ಪಾಪದ ಕೂಸು ಪಿಎಫ್ಐ: ಯಡಿಯೂರಪ್ಪ ಆಕ್ರೋಶ

ಪಿಎಫ್ಐ– ಕಾಂಗ್ರೆಸ್ಗೆ ಯಾವುದೇವ್ಯತ್ಯಾಸವಿಲ್ಲ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಪಿಎಫ್ಐ ಕಾಂಗ್ರೆಸ್ನ ಪಾಪದ ಕೂಸಾದರೆ ಆರ್ಎಸ್ಎಸ್ ಏನು?:ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.