ಬೆಂಗಳೂರು: 'ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ್, 'ಪ್ರಧಾನಿ ಮೋದಿಯವರ ಅಮೃತಕಾಲದಲ್ಲಿ, ಸರ್ಕಾರದ ಮುಂದೆ ಮಂಡಿಯೂರಿದರೆ ಮತ್ತು ವಿಶ್ವಗುರುವನ್ನು ಪೂಜಿಸಿದರೆ ಎಲ್ಲವೂ ಯಥೋಚಿತ. ಯಾರಾದರೂ ಧ್ವನಿ ಎತ್ತಲು ನಿರ್ಧರಿಸಿದ ಕೂಡಲೇ, ಅವರನ್ನು ವಿಚಾರಣೆ ಅಥವಾ ಜಾಮೀನು ಇಲ್ಲದೆ ಜೈಲಿಗೆ ಹಾಕಲಾಗುತ್ತದೆ' ಎಂದು ಟೀಕಿಸಿದ್ದಾರೆ.

'ಏತನ್ಮಧ್ಯೆ, ನಮ್ಮ ಸಂವಿಧಾನ ಮತ್ತು ಸಿಜೆಐ ಅವರನ್ನು ಅವಮಾನಿಸುವವರಿಗೆ ಆರ್ಎಸ್ಎಸ್ ಬೆಂಬಲ ಹಾಗೂ ಬಿಜೆಪಿಯಿಂದ ರಕ್ಷಣೆ ನೀಡಲಾಗುತ್ತದೆ' ಎಂದು ದೂರಿದ್ದಾರೆ.

ಈ ಸಂಬಂಧ ರಾಕೇಶ್ ಕಿಶೋರ್ ಅವರನ್ನು ಬಿಜೆಪಿ, ಆರ್ಎಸ್ಎಸ್ ಬೆಂಬಲಿಸುತ್ತಿರುವುದು ಸೇರಿದಂತೆ ಅಂಕಿಅಂಶವನ್ನು ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ.
.ಶೂ ಎಸೆಯಲು ಯತ್ನ; ನಮಗಿದು ಮುಗಿದ ಅಧ್ಯಾಯ: ಸಿಜೆಐ ಗವಾಯಿ.ಸಂಪಾದಕೀಯ | ಸಿಜೆಐ ಅವಮಾನಿಸುವ ಪ್ರಯತ್ನ: ದ್ವೇಷ–ಅಸಹನೆಯ ಕೊಳಕು ಕೃತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.