ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Abhinaya Saraswati | ಸರೋಜಾದೇವಿಗೆ ಗಣ್ಯರ ಕಂಬನಿ

Published : 14 ಜುಲೈ 2025, 23:38 IST
Last Updated : 14 ಜುಲೈ 2025, 23:38 IST
ಫಾಲೋ ಮಾಡಿ
Comments
ಸರೋಜಮ್ಮ ಆ ಕಾಲದಲ್ಲೇ ರಾಜ್ಯಗಳನ್ನು ಸುತ್ತಾಡಿ, ವಿವಿಧ ಭಾಷೆಗಳಲ್ಲಿ ನಟಿಸಿದ ಮಹಾನಟಿ. ತುಂಬಾ ಚೈತನ್ಯ ತುಂಬಿದ ವ್ಯಕ್ತಿತ್ವ. ಯಾರು ಚಟುವಟಿಕೆಯಿಂದ ಕೆಲಸ ಮಾಡಿ ಸಮಾಜಕ್ಕೆ ನೆನಪನ್ನು ಬಿಟ್ಟು ಹೋಗುತ್ತಾರೋ ಅವರದ್ದು ವಿದಾಯವಲ್ಲ, ಚಿರಸ್ಮರಣೆ. ಸರೋಜಾದೇವಿ ಅವರದ್ದು ಸಾವಲ್ಲ, ಹುಟ್ಟುಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದರು. ಸದಭಿರುಚಿಯ ಚಿತ್ರಗಳ‌ ಮೂಲಕ ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ
ಸಿದ್ದರಾಮಯ್ಯ, ಮುಖ್ಯಮಂತ್ರಿ
ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಶ್ರೇಷ್ಠ ನಟಿ ಸರೋಜಾದೇವಿ, ಇನ್ನು ನಮ್ಮೊಂದಿಗೆ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ
ರಜನೀಕಾಂತ್‌, ನಟ
ಸರೋಜಾದೇವಿ ಅವರು ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದರು. ನನಗೆ ಬಾಲ್ಯದಿಂದಲೂ ಅವರೊಂದಿಗೆ ಒಡನಾಟವಿತ್ತು. ಒಂದು ರೀತಿ ತಾಯಿಯ ಸ್ಥಾನ ತುಂಬಿದ್ದರು. ಅವರು ಭಾರತೀಯ ಸಿನಿಮಾ ರಂಗದ ಆಸ್ತಿ. ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರಿಲ್ಲ ಎಂಬುದನ್ನು ನೆನಸಿಕೊಳ್ಳುವಾಗ ದುಃಖವಾಗುತ್ತದೆ
ಶಿವರಾಜ್‌ಕುಮಾರ್, ನಟ
ಸರೋಜಮ್ಮ ಅವರು ಭಾರತೀಯ ಚಲನಚಿತ್ರರಂಗದಲ್ಲಿ ಬೆಳಗಿದ ಮೊದಲ ಕನ್ನಡತಿ. ಆ ಕಾಲದಲ್ಲೇ ಪ್ಯಾನ್ ಇಂಡಿಯಾ ನಟಿಯಾಗಿದ್ದರು. ಜೀವನವನ್ನು ತುಂಬಾ ಸಕಾರಾತ್ಮಕವಾಗಿ ಅನುಭವಿಸಿದ ಕಲಾವಿದೆ. ಹೀರೊಗೆ ಸಮಾನರಾಗಿ ಬದುಕಿದ ಹೀರೋಯಿನ್ ಅವರು. ಅವರೊಂದಿಗೆ ನನ್ನದು ತಾಯಿ–ಮಗಳ ಬಾಂಧವ್ಯ. ಅವರು ಈಗ ದೈಹಿಕವಾಗಿಲ್ಲ. ಆದರೆ ಸದಾ ನಮ್ಮೊಂದಿಗಿರುತ್ತಾರೆ
ತಾರಾ, ನಟಿ
ಸರೋಜಮ್ಮ ಆ ಕಾಲದಲ್ಲೇ ರಾಜ್ಯಗಳನ್ನು ಸುತ್ತಾಡಿ, ವಿವಿಧ ಭಾಷೆಗಳಲ್ಲಿ ನಟಿಸಿದ ಮಹಾನಟಿ. ತುಂಬಾ ಚೈತನ್ಯ ತುಂಬಿದ ವ್ಯಕ್ತಿತ್ವ. ಯಾರು ಚಟುವಟಿಕೆಯಿಂದ ಕೆಲಸ ಮಾಡಿ ಸಮಾಜಕ್ಕೆ ನೆನಪನ್ನು ಬಿಟ್ಟು ಹೋಗುತ್ತಾರೋ ಅವರದ್ದು ವಿದಾಯವಲ್ಲ, ಚಿರಸ್ಮರಣೆ. ಸರೋಜಾದೇವಿ ಅವರದ್ದು ಸಾವಲ್ಲ, ಹುಟ್ಟು
ಯೋಗರಾಜ ಭಟ್, ನಿರ್ದೇಶಕ
ನನ್ನ ‘ಎ’ ಸಿನಿಮಾ ಇನ್ನೂ ಸೆನ್ಸಾರ್‌ ಆಗಿರಲಿಲ್ಲ. ಅದು ರಿವೈಸಿಂಗ್ ಕಮಿಟಿಗೆ ಹೋಗಿತ್ತು. ಆ ಕಮಿಟಿಯ ಅಧ್ಯಕ್ಷರಾಗಿದ್ದವರು ಸರೋಜಾದೇವಿ ಅವರು. ಎಲ್ಲರೂ ನನ್ನ ಚಿತ್ರ ನೋಡಿ ಬೈಯುತ್ತಿದ್ದರೆ, ಅವರು ಸಿನಿಮಾ ನೋಡಿ ಮೆಚ್ಚಿದ್ದರು. ಸೆನ್ಸಾರ್ ಮಾಡಿಸಿ, ಸಿನಿಮಾ ಬಿಡುಗಡೆಗೆ ನೆರವಾದರು. ಒಂದು ರೀತಿಯಲ್ಲಿ ಇವತ್ತು ಹೀರೊ ಆಗುವುದಕ್ಕೆ ಕಾರಣರಾದವರು ಅವರು. ಅವರೊಬ್ಬ ಪರಿಪೂರ್ಣ ಕಲಾವಿದೆ
ಉಪೇಂದ್ರ, ನಟ
ಅಭಿನೇತ್ರಿ ಬಿ.ಸರೋಜಾದೇವಿ ಅವರು ಕನ್ನಡವೂ ಸೇರಿದಂತೆ ಪಂಚಭಾಷೆಗಳ ನೂರಾರು ಸಿನಿಮಾಗಳಲ್ಲಿ, ಮೇರು ನಟರೊಂದಿಗೆ ಅಭಿನಯಿಸಿ, ಜನಪ್ರಿಯತೆ ಗಳಿಸಿದ್ದರು. ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರು ನೀಡಿದ ಅನುಪಮ ಕೊಡುಗೆಯನ್ನು ಗುರುತಿಸಿ ಶ್ರೀಮಠವು 2009ರಲ್ಲಿ ’ಚುಂಚಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಭಿನಯ ಮತ್ತು ವ್ಯಕ್ತಿತ್ವದಿಂದ ಜನಮನದಲ್ಲಿ ನೆಲಸಿದ್ದ ಸರೋಜಾದೇವಿ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ
ನಿರ್ಮಲಾನಂದನಾಥ ಸ್ವಾಮೀಜಿ, ‍ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ನನಗೆ ಎಷ್ಟೇ ವಯಸ್ಸಾಗಿರಲಿ, ಅವರು ನನ್ನ ನೋಡಿದಾಗಲೆಲ್ಲಾ ಗಲ್ಲವನ್ನು ಹಿಡಿದು ‘ಮಗನೇ’ ಎಂದು ಕರೆಯುತ್ತಿದ್ದರು. ಸರೋಜಾದೇವಿ ಅವರು ನನಗೆ ಮತ್ತೊಬ್ಬ ತಾಯಿಯೇ ಆಗಿದ್ದರು. ಅವರು ಭಾಷೆ ಮತ್ತು ಪ್ರಾಂತ್ಯದ ಎಲ್ಲೆಗಳನ್ನು ಮೀರಿ ಬದುಕಿದ್ದ ಕಲಾವಿದೆ. ನನ್ನ ಎರಡನೇ ಚಿತ್ರ ‘ಪಾರ್ಥಲ್‌ ಪಾಸಿ ತೀರಂ’ನ ಚಿತ್ರೀಕರಣದಿಂದ ಹಿಡಿದು ಇಲ್ಲಿಯವರೆಗೂ ಅವರೊಂದಿಗಿನ ಎಣಿಸಲು ಸಾಧ್ಯವಿಲ್ಲದ ಮರೆಯಲಾಗದ ನೆನಪುಗಳು ನನ್ನ ಹೃದಯದಲ್ಲಿ ಅಲೆಗಳನ್ನು ಎಬ್ಬಿಸುತ್ತಿವೆ. ನನ್ನ ಕಂಗಳು ತುಂಬಿವೆ. ಅವರ ಹೃದಯವು, ನಾನು ಯಾವಾಗಲೂ ಮೊದಲಿಗನಾಗಿರಬೇಕು ಎಂದು ಹಾರೈಸುತ್ತಿತ್ತು. ಅವರಿಗೆ ತಲೆಬಾಗುವೆ
ಕಮಲ್‌ ಹಾಸನ್‌, ನಟ
ಸಿನಿಮಾದ ಸುವರ್ಣಯುಗವೊಂದು ಅಂತ್ಯವಾಗಿದೆ. ಸರೋಜಾದೇವಿ ಅಮ್ಮ ಅವರು ಎಲ್ಲ ಸಾರ್ವಕಾಲಿಕ ಶ್ರೇಷ್ಠ ನಟಿಯಾಗಿದ್ದರು. ದಕ್ಷಿಣ ಭಾರತದಲ್ಲಿ ಅವರಷ್ಟು ಹೆಸರು ಗಳಿಸಿದ, ಜನಪ್ರಿಯತೆ ಗಳಿಸಿದ್ದ ಬೇರೆ ನಟಿ ಇಲ್ಲ. ನಾನು ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ. ನಾನು ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿಯಾಗದೆ ನನ್ನ ಪ್ರವಾಸ ಕೊನೆಯಾಗುತ್ತಿರಲಿಲ್ಲ. ಚೆನ್ನೈನಲ್ಲಿ ಇದ್ದಾಗಲೆಲ್ಲ ಅವರು ಕರೆ ಮಾಡುತ್ತಿದ್ದರು. ಅವರ ಅಗಲಿಕೆ ನನಗೆ ತುಂಬಾ ನಷ್ಟವುಂಟುಮಾಡಿದೆ
ಖುಷ್ಬೂ, ನಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT