ಬೆಂಗಳೂರು: ಶಾಲಾ ಶುಲ್ಕದ ಗೊಂದಲ ಪರಿಹರಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದೆ.

ಖಾಸಗಿ ಶಾಲೆಗಳು ಪಡೆಯುತ್ತಿರುವ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಮಧ್ಯಂತರ ಅರ್ಜಿಯನ್ನು(ಐ.ಎ) ಸರ್ಕಾರ ಸಲ್ಲಿಸಿದೆ.

ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ, ಆಕ್ಷೇಪಣೆ ಸಲ್ಲಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಗಳನ್ನು ಪ್ರತಿನಿಧಿಸುವ ಸಂಘಗಳಿಗೆ ಸಮಯಾವಕಾಶ ನೀಡಿದೆ. ವಿಚಾರಣೆಯನ್ನು ಜೂ.29ಕ್ಕೆ ಮುಂದೂಡಿದೆ.

‘ಪೋಷಕರು, ಆಡಳಿತ ಮಂಡಳಿಯವರು ಸೇರಿ ಎಲ್ಲಾ ಸಹಭಾಗಿದಾರರ ಅಭಿಪ್ರಾಯ ಪಡೆದು ಶುಲ್ಕ ನಿಗದಿ ಬಗ್ಗೆ ಶಿಫಾರಸುಗಳನ್ನು ಸಮಿತಿ ಸರ್ಕಾರಕ್ಕೆ ಸಲ್ಲಿಸುತ್ತದೆ. 2007ರಲ್ಲಿ ಸುಪ್ರೀಂ ಕೋರ್ಟ್ ಕೂಡ ಶಾಲಾ ಶುಲ್ಕದ ನಿಗದಿ ಬಗ್ಗೆ ಸಮಿತಿ ರಚಿಸಲು ಆದೇಶ ಹೊರಡಿಸಿತ್ತು’ ಎಂದು ಸರ್ಕಾರ ಮಧ್ಯಂತರ ಅರ್ಜಿಯಲ್ಲಿ ದಾಖಲಿಸಿದೆ.

‘ಕೋವಿಡ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಶುಲ್ಕ ಕಡಿತ ನಿರ್ಧಾರವನ್ನು 2021–22ನೇ ಸಾಲಿಗೂ ವಿಸ್ತರಿಸುವಂತೆ ಪೋಷಕರ ಸಂಘಗಳು ಮನವಿಗಳನ್ನು ಸಲ್ಲಿಸಿವೆ’ ಎಂದೂ ಸರ್ಕಾರ ವಿವರಿಸಿದೆ.

‘ಕಳೆದ ವರ್ಷ ನಿಗದಿಪಡಿಸಿದ್ದ ಶೇ 70ರಷ್ಟು ಶುಲ್ಕವನ್ನೇ ಪೋಷಕರು ಪಾವತಿಸಿಲ್ಲ. ಕೋವಿಡ್ ಪರಿಸ್ಥಿತಿ ಉಲ್ಲೇಖಿಸಿ ಬೋಧನಾ ಶುಲ್ಕ ಕಡಿಮೆ ಮಾಡಲು ರಾಜ್ಯ ಸರ್ಕಾರಕ್ಕೆ ಹಕ್ಕಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕೆಎಎಂಎಸ್) ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.