ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಬಕವಿ ಬನಹಟ್ಟಿ: ಸೋರುತ್ತಿದ್ದ ಶಾಲೆಗೆ ಸೂರು ನೀಡಿದ ಹಳೆಯ ವಿದ್ಯಾರ್ಥಿಗಳು

₹ 5 ಲಕ್ಷ ವೆಚ್ಚದಲ್ಲಿ ಚಾವಣಿ, ನೆಲಹಾಸು, ಶೌಚಾಲಯ ನಿರ್ಮಾಣ
Published : 5 ಜೂನ್ 2025, 23:30 IST
Last Updated : 5 ಜೂನ್ 2025, 23:30 IST
ಫಾಲೋ ಮಾಡಿ
0
ರಬಕವಿ ಬನಹಟ್ಟಿ: ಸೋರುತ್ತಿದ್ದ ಶಾಲೆಗೆ ಸೂರು ನೀಡಿದ ಹಳೆಯ ವಿದ್ಯಾರ್ಥಿಗಳು
ರಬಕವಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಶ್ರಮಿಸಿದ ಡಾ. ರವಿ ಜಮಖಂಡಿ

ರಬಕವಿ ಬನಹಟ್ಟಿ (ಬಾಗಲಕೋಟೆ ಜಿಲ್ಲೆ): ರಬಕವಿ ನಗರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ 1885ರಲ್ಲಿ ಸ್ಥಾಪನೆಗೊಂಡಿದ್ದು, 143 ವರ್ಷಗಳಷ್ಟು ಹಳೆಯದು. ಶಾಲೆಯ ಇಬ್ಬರು ಹಳೆ ವಿದ್ಯಾರ್ಥಿಗಳು ಸೋರುವ ಸೂರನ್ನು ತೆರವುಗೊಳಿಸಿ, ₹5 ಲಕ್ಷ ವೆಚ್ಚದಲ್ಲಿ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ADVERTISEMENT
ADVERTISEMENT

ಶಾಲೆ ಶತಮಾನಷ್ಟು ಹಳೆಯದಾದರೂ ಇಲ್ಲಿಯ ಗೋಡೆಗಳು ಇನ್ನೂ ಗಟ್ಟಿಯಾಗಿವೆ. ಆದರೆ, ಚಾವಣಿ ಹಂಚುಗಳು ಒಡೆದಿದ್ದರಿಂದ ಮಳೆಗಾಲದಲ್ಲಿ  ಸೋರುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಓದಿಗೆ ಅಡ್ಡಿಯಾಯಿತು. ಇದನ್ನು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ವಿಜಯಕುಮಾರ ಹಲಕುರ್ಕಿ ಅವರು ಶಾಲೆಯ ಹಳೆಯ ವಿದ್ಯಾರ್ಥಿ ರಬಕವಿಯ ಡಾ. ರವಿ ಜಮಖಂಡಿ ಅವರ ಗಮನಕ್ಕೆ ತಂದರು.

ಆಗ ಡಾ. ರವಿ ಜಮಖಂಡಿ ಅವರು ಇನ್ನೊಬ್ಬ ಹಳೆಯ ವಿದ್ಯಾರ್ಥಿಯಾದ ನಿವೃತ್ತ ಟೆಲಿಕಾಮ್ ಎಂಜಿನಿಯರ್ ವಿನೋದ ಮಾಳಗಿ ಜೊತೆ ಸೇರಿ ಶಾಲೆ ಆವರಣ ಪರಿಶೀಲಿಸಿದರು. ಸೋರುತ್ತಿರುವ ಶಾಲೆಯ ಚಾವಣಿಗೆ ಮೊದಲು ಪತ್ರಾಸ್‌ ಅಳವಡಿಸಿದರು. ಶಾಲೆಯ ಎರಡು ಕೋಣೆಗಳ ಒಡೆದಿದ್ದ ನೆಲ ಹಾಸನ್ನು ತೆಗೆಸಿ, ಹೊಸ ನೆಲ ಹಾಸನ್ನು ಹಾಕಿಸಿದರು. ಹೊಸ ಶೌಚಾಲಯಗಳನ್ನು ನಿರ್ಮಿಸಿ, ಅಲ್ಲಿಯೂ ಪತ್ರಾಸ ಚಾವಣಿ ಹಾಕಿಸಿದರು.

ಪರಿಸರ ದಿನಾಚರಣೆ ಪ್ರಯುಕ್ತ ಶಾಲೆಯ ಆವರಣವನ್ನು ಹಸಿರುಮಯ ಆಗಿಸಲು ಡಾ. ರವಿ ಜಮಖಂಡಿ ಅವರು ಬೆಳಗಾವಿಯ ಹಿಡಕಲ್‌ನಿಂದ ₹ 40 ಸಾವಿರ ವೆಚ್ಚದಲ್ಲಿ 20ಕ್ಕೂ ಹೆಚ್ಚು ಬೃಹತ್ ಸಸಿಗಳನ್ನು ತರಿಸಿ ಪರಿಸರ ದಿನದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನೆಡೆಸಿದ್ದಾರೆ.  

ADVERTISEMENT
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಬೇಕು. ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಹಾಯ ನೀಡಬೇಕು
-ಡಾ. ರವಿ ಜಮಖಂಡಿ, ಹಳೆಯ ವಿದ್ಯಾರ್ಥಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ
ಶಾಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಇನ್ನಷ್ಟು ಹಳೆಯ ವಿದ್ಯಾರ್ಥಿಗಳು ನೆರವಾದರೆ ಶಾಲೆಯನ್ನು ಅಭಿವೃದ್ಧಿ ಪಡಿಸಲು ಅನುಕೂಲವಾಗುತ್ತದೆ.
-ವಿಜಯಕುಮಾರ ಹಲಕುರ್ಕಿ, ಮುಖ್ಯ ಶಿಕ್ಷಕ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0