ಬೆಂಗಳೂರು: ‘ಏಳ್ರಿ ಎಲ್ಲ ಎದ್ದು ಗಲಾಟೆ ಮಾಡ್ರಿ... ಏಯ್ ರಾಯರಡ್ಡಿ ಯಾಕೆ ಕೂತಿದ್ದೀಯಾ ಏಳು....’

ಹೀಗೆಂದು ಅವುಡುಗಚ್ಚಿ ತಮ್ಮ ಪಕ್ಷದ ಸದಸ್ಯರನ್ನು ಎಬ್ಬಿಸಿ, ವಿರೋಧ ಪಕ್ಷಗಳ ವಿರುದ್ಧ ಛೂಬಿಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.

ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯ ಮಂಡಿಸುವ ವೇಳೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದರಿಂದ ಸಿದ್ದರಾಮಯ್ಯ ರೊಚ್ಚಿಗೆದ್ದಿದ್ದರು.

ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತ ಚರ್ಚೆ ಆರಂಭವಾಗುವ ವೇಳೆ ಸದನದಲ್ಲಿ ಇದ್ದ ಸಿದ್ದರಾಮಯ್ಯ ಹೊರ ಹೋಗಿ ವಾಪಸ್ ಬರುವ ವೇಳೆಗೆ ಇನ್ನೂ ಅಶೋಕ ಮಾತನಾಡುತ್ತಿದ್ದದ್ದು ಅವರ ಸಿಟ್ಟಿಗೆ ಕಾರಣವಾಯಿತು. ಬಳಿಕ ಜೆಡಿಎಸ್ನ ಸಮೃದ್ಧಿ ಮಂಜುನಾಥ್ ಅವರಿಗೆ ಅವಕಾಶ ನೀಡಲು ಸಭಾಧ್ಯಕ್ಷರು ಮುಂದಾದಾಗ ಈ ಬಗ್ಗೆ ಸಿದ್ದರಾಮಯ್ಯ ಅವರು ಆಕ್ಷೇಪ ಎತ್ತಿದರು.

‘ನಿಮ್ಮ ಚೇಂಬರ್ನಲ್ಲಿ ಹೇಳಿದ್ದೇನು? ಕಲಾಪ ಅಜೆಂಡಾ ಪ್ರಕಾರ ನಡೆಯಲಿ. ನರೇಗಾ ಬಗ್ಗೆ ಚರ್ಚೆ ಆಗಲಿ ಎಂದೇ ಸದನ ಮೂರು ದಿನಗಳ ವಿಸ್ತರಣೆ ಮಾಡಿದ್ದು? ಅಶೋಕ, ಸುನಿಲ್ ಅವರೂ ಇದ್ದರಲ್ವಾ’ ಎಂದು ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಮಧ್ಯ ಪ್ರವೇಶಿಸಿದ ಬಿಜೆಪಿ ವಿ.ಸುನಿಲ್ಕುಮಾರ್, ‘ನರೇಗಾ ಬಗ್ಗೆ ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಅಬಕಾರಿ ಇಲಾಖೆ ಭ್ರಷ್ಟಾಚಾರದ ಕುರಿತು ಚರ್ಚೆ ನಡೆಸಲು ನೀವು ಸಿದ್ಧರಿಲ್ಲ. ನರೇಗಾದಲ್ಲಿ ಲೂಟಿ ಹೊಡೆಯಲು ಆಗುವುದಿಲ್ಲ ಎಂಬುದೇ ನಿಮ್ಮ ಸಂಕಟ. ರಾತ್ರಿ 12 ಗಂಟೆಯವರೆಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ. ತಾಳ್ಮೆ ಕಳೆದುಕೊಳ್ಳಬೇಡಿ’ ಎಂದು ಕಾಲೆಳೆದರು.

ನಿರ್ಣಯ ಓದುವಾಗ ಬಿಜೆಪಿ ಸದಸ್ಯರು ಪದೇ ಪದೇ ಅಡ್ಡಿಪಡಿಸಿದ್ದರಿಂದ, ‘ಮಾತು ಕೇಳದವರನ್ನು ಹೊರಗೆ ಹಾಕ್ರಿ’ ಎಂದು ಸಿದ್ದರಾಮಯ್ಯ ಗುಡುಗಿದರು.

ಬಿಜೆಪಿ– ಜೆಡಿಎಸ್ ಸದಸ್ಯರ ಘೋಷಣೆ ಮತ್ತೆ ಹೆಚ್ಚಾದಾಗ, ‘ಇನ್ನು ನೀವು (ಸಭಾಧ್ಯಕ್ಷರು) ಕರೆದರೆ ನಾವು ಸಭೆಗೆ ಬರುವುದಿಲ್ಲ. ಸಭೆಯಲ್ಲಿ ಬಿಜೆಪಿ ನಾಯಕರು ಕೊಟ್ಟ ಮಾತೇನು? ಒಂದು ಗಂಟೆ ಮಾತಾಡ್ತೇವೆ ಎಂದು ಅಶೋಕನೇ ಎರಡು ಗಂಟೆ ಮಾತಾಡಿದ್ದಾರೆ. ಅವರಿಗೆ (ಬಿಜೆಪಿ) ಮಾನ ಮಾರ್ಯಾದೆ ಇಲ್ಲ’ ಎಂದು ಕಿಡಿಕಾರಿದರು. ಈ ಮಧ್ಯೆ ನರೇಗಾದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸಿಎಜಿ ವರದಿಯನ್ನು ಅರವಿಂದ ಬೆಲ್ಲದ ಗಟ್ಟಿಯಾಗಿ ಓದಿದರು. ವಿರೋಧ ಪಕ್ಷಗಳ ಸದಸ್ಯರ ಒಂದೇ ಸಮನೆ ಧಿಕ್ಕಾರ ಕೂಗುತ್ತಿದ್ದರು.

ಆ ವೇಳೆಗಾಗಲೇ ಸಿದ್ದರಾಮಯ್ಯ ಅವರ ತಾಳ್ಮೆಯ ಕಟ್ಟೆ ಒಡೆದಿತ್ತು. ತಮ್ಮ ಪಕ್ಷದ ಸದಸ್ಯರೂ ಸುಮ್ಮನೆ ಕೂತಿದ್ದನ್ನು ಕಂಡು ಮತ್ತಷ್ಟು ಕೆರಳಿದರು. ಎಲ್ಲರತ್ತ ಕೈ ಮಾಡಿ ‘ಏಳ್ರಿ ಗಲಾಟೆ ಮಾಡ್ರಿ... ನಿಮಗೆ ಮಾತ್ರ ಅಲ್ಲ, ನಮಗೂ ಗಲಾಟೆ ಮಾಡಲು ಬರಲ್ವಾ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು. ಆಗ ಕಾಂಗ್ರೆಸ್ನ ಎಲ್ಲ ಸದಸ್ಯರೂ ಎದ್ದು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಸಿದ್ದರಾಮಯ್ಯ ಅವರೂ ಮುಷ್ಟಿ ಕಟ್ಟಿ ಕೈ ಮೇಲೆತ್ತಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ವಿರೋಧ ಪಕ್ಷಗಳ ಸದಸ್ಯರು ‘ಕಾಂಗ್ರೆಸ್ ಲೂಟಿ ಲೂಟಿ’ ಎಂದು ಕೂಗಿದರೆ, ಆಡಳಿತ ಸದಸ್ಯರು ಬಿಜೆಪಿ ಲೂಟಿ ಲೂಟಿ’ ಎಂದು ಘೋಷಣೆ ಕೂಗುತ್ತಲೇ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.