ಸಿಂದಗಿ (ವಿಜಯಪುರ): ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯನವರು ಮುರಿದು ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿನ್ನೆಲೆಯಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ತಾಲ್ಲೂಕು ಕುರುಬರ ಸಂಘದ ನೇತೃತ್ವದಲ್ಲಿ ಅಭಿಮಾನಿಗಳು ಸಂಭ್ರಮಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, 100 ನಾಟಿಕೋಳಿ ಸಾರು ಮಾಡಿ, ಸಾಮೂಹಿಕ ಭೋಜನ ಸವಿದರು.

ಸಿದ್ದರಾಮಯ್ಯನವರ ಕಟೌಟ್ಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಮುಖಂಡ ಅರವಿಂದ ಮನಗೂಳಿ, ಸಿದ್ದರಾಮಯ್ಯನವರು ನಾಡು ಕಂಡ ಅದ್ವಿತೀಯ ಮುಖ್ಯಮಂತ್ರಿಯಾಗಿದ್ದಾರೆ. ಅತೀ ಹೆಚ್ಚು ಬಜೆಟ್ಗಳನ್ನು ಮಂಡಿಸುವ ಮೂಲಕ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹಿತ ಕಾಪಾಡಿದ್ದಾರೆ. ಬಾಬಾಸಾಹೇಬ ಅಂಬೇಡ್ಕರ್ ಚಿಂತನೆ, ಬಸವೇಶ್ವರರ ದಾಸೋಹ ತತ್ವಗಳನ್ನು ಇಂದಿರಾ ಕ್ಯಾಂಟಿನ್ ಮುಖಾಂತರ ಪಾಲಿಸಿದ್ದಾರೆ ಎಂದು ಗುಣಗಾನ ಮಾಡಿದರು.
.Karnataka CM: ದೇವರಾಜ ಅರಸು ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ.ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ, ಇನ್ನು ಹೈಕಮಾಂಡ್ ತೀರ್ಮಾನ: ಸಿದ್ದರಾಮಯ್ಯ .
ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಅತ್ಯುತ್ತಮ ಆಡಳಿತ ನೀಡುವುದರ ಜೊತೆಗೆ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಬಡವರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಹೇಳಿದರು.

ಸಿಂದಗಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ, ಹೆಗ್ಗೇರೇಶ್ವರ ದೇವಸ್ಥಾನ ಸಮಿತಿಯ ಮಾಳಪ್ಪ ಪೂಜಾರಿ, ಶಿವಾನಂದ ಗಣಿಹಾರ, ಕೆಂಚಪ್ಪ ಪೂಜಾರಿ, ನಿಂಗಪ್ಪ ಬಿಸನಾಳ, ಸಿದ್ದೂ ಬೀರಗೊಂಡ, ಸಂತೋಷ ಗುಡ್ಯಾಳ, ಲಕ್ಕಪ್ಪ ಜೇವರಗಿ, ಸಂತೂ ಪೂಜಾರಿ, ಅನೀಲ ಕಡಕೋಳ, ಭಾಗಣ್ಣ ಬೀರಗೊಂಡ, ಲಕ್ಕಪ್ಪ ಬಿಸನಾಳ, ಶರಣಪ್ಪ ಮಲಗೊಂಡ, ಬೂತಾಳಿ ಗಣಿಹಾರ, ತಿಪ್ಪಣ್ಣ ಬೀರಗೊಂಡ, ನಿಂಗಪ್ಪ ರಾಂಪೂರ, ಈರಗಂಟೆಪ್ಪ ಪೂಜಾರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.