ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಯುದ್ಧ ಬೇಡ ಎಂದು ಹೇಳಿಕೆ ನೀಡಿ ಪಾಕಿಸ್ತಾನಿಗಳ ಹೀರೊ ಆಗಿದ್ದರು. ಜನರು ಉಗಿದ ಮೇಲೆ ಹೇಳಿಕೆ ಬದಲಾಯಿಸಿದರು. ಈ ಹಣೆಗೆ ಸಿಂಧೂರ ಇಟ್ಟುಕೊಂಡು ಸಿಂಧೂರರಾಮಯ್ಯ ಆಗಿದ್ದಾರೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಹಿಂದೂಗಳು ಒಟ್ಟಾಗಿದ್ದಾರೆ. ರಾಜಕಾರಣಿಗಳು ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಮುಖ್ಯಮಂತ್ರಿಯ ಸಿಂಧೂರವೇ ಸಾಕ್ಷಿ’ ಎಂದರು.

‘ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ ಎಂಬ ಜೈಕಾರ ಹಾಕಿಕೊಂಡು ಎಲ್ಲಾ ಬಿಜೆಪಿ ಕಾರ್ಯಕರ್ತರೂ ಬೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿ ಮಾತಿಗೆ ಆ ಜಯಘೋಷ ಹಾಕಲಿಲ್ಲ. ಈಗ ಆಪರೇಷನ್ ಸಿಂಧೂರ ಮಾಡಿ ಅದನ್ನು ನಿಜವಾಗಿಸಿದ್ದಾರೆ. ನ್ಯೂಕ್ಲಿಯರ್ ಟೆಸ್ಟ್ ಮಾಡಿದ ವಾಜಪೇಯಿ ನಮ್ಮ ಹೆಮ್ಮೆ. ಈಗ ಪಾಕ್ ವಿರುದ್ಧ ಯುದ್ಧ ಮಾಡಿಸಿದ ಮೋದಿ ಕೂಡ ಹೆಮ್ಮೆ’ ಎಂದು ಹೇಳಿದರು.
.‘ಆಪರೇಷನ್ ಸಿಂಧೂರ’ ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ: ಸಿಎಂ ಸಿದ್ದರಾಮಯ್ಯ .Operation Sindoor: ನಮ್ಮ ಸೇನೆ ನಮ್ಮ ಹೆಮ್ಮೆ-ಸಚಿವ ಜಮೀರ್ ಅಹಮದ್ ಖಾನ್ .
‘ಕಾಂಗ್ರೆಸ್ ಶಾಂತಿ ಮಂತ್ರದ ‘ಎಕ್ಸ್’ ಮಾಡಿತ್ತು. ಜನ ತಿರುಗಿ ಬಿದ್ದ ಮೇಲೆ ಆ ಪೋಸ್ಟ್ ಡಿಲೀಟ್ ಮಾಡಿದೆ. ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಬಂದಿತಾ? ಗಾಂಧೀಜಿಯವರ ಶಾಂತಿ ಮಂತ್ರದಿಂದ ಮಾತ್ರವೇ ಸ್ವಾತಂತ್ರ್ಯ ಬರಲಿಲ್ಲ. ಭಗತ್ ಸಿಂಗ್, ಸಾರ್ವಕರ್, ಸುಭಾಷ್ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿಗಳ ಕೊಡುಗೆಯೂ ಮುಖ್ಯ ಆಗಿತ್ತು. ಯುದ್ದ ಗೆದ್ದ ಮೇಲೆ ಶಾಂತಿ ಸ್ಥಾಪನೆ ಮಾಡುತ್ತೇವೆ. ಶಾಂತಿ ಸ್ಥಾಪನೆಗಾಗಿಯೇ ಈಗ ಯುದ್ಧ ನಡೆಸುತ್ತಿರುವುದು’ ಎಂದರು.

‘ಪಾಕಿಸ್ತಾನದ ಪಿತಾಮಹನೇ ಕಾಂಗ್ರೆಸ್. ಹೀಗಾಗಿ ಆ ದೇಶದ ಮೇಲೆ ಯುದ್ಧವೆಂದರೆ ಕಾಂಗ್ರೆಸ್ಗೆ ಹಿಂಸೆ ಎನಿಸುತ್ತದೆ. ಆ ಪಕ್ಷದ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರ ಒಳಗೂ ನೋವು ಬಂದು ಶಾಂತಿಯ ಮಂತ್ರ ಜಪಿಸಿದ್ದರು’ ಎಂದು ಆರೋಪಿಸಿದರು.
.Operation Sindoor: ಸೇನಾ ದಾಳಿಯಲ್ಲಿ ಮುರಿಡ್ಕೆ ಪ್ರಮುಖ ಗುರಿಯಾಗಿದ್ದು ಏಕೆ.?.Pahalgam Attack | ಮಾಸ್ಟರ್ಮೈಂಡ್ ಸಜಾದ್ ಗುಲ್; ಬೆಂಗಳೂರಿಗೇಕೆ ಬಂದಿದ್ದ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.