ಪ್ರಜಾವಾಣಿ ವಾರ್ತೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೊ) ಇದೇ 15 ರಂದು ಭೂವೀಕ್ಷಣೆ ಕಿರುಉಪಗ್ರಹ ಇಒಎಸ್–08 ಅನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಿದೆ.

ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್‌ಎಸ್‌ಎಲ್‌ವಿ–ಡಿ3 ರಾಕೆಟ್ ಮೂಲಕ ಈ ಪುಟ್ಟ ಉಪಗ್ರಹವನ್ನು ಅಂದು ಬೆಳಿಗ್ಗೆ 9.17ಕ್ಕೆ ಉಡಾವಣೆ ಮಾಡಲಿದೆ. ನ್ಯೂಸ್ಪೇಸ್ ಇಂಡಿಯಾ ಇಸ್ರೊದ ವಾಣಿಜ್ಯ ಅಂಗವಾಗಿದೆ.

ಇಒಎಸ್–08 ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ಭವಿಷ್ಯದ ಉಪಗ್ರಹಗಳ ಕಾರ್ಯಾಚರಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. 175.5 ಕೆ.ಜಿ ತೂಕದ ಉಪಗ್ರಹವು ಮೂರು ಪೇಲೊಡ್‌ಗಳನ್ನು ಒಳಗೊಂಡಿದೆ. ಮಣ್ಣಿನ ತೇವಾಂಶದ ಮಾಲ್ಯಮಾಪನದಿಂದ ಪ್ರಾಕೃತಿಕ ನಿರ್ವಹಣೆವರೆಗಿನ ಕಾರ್ಯನಿರ್ವಹಿಸುತ್ತದೆ. ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯಲ್ಲಿ ವೃತ್ತಾಕಾರದಲ್ಲಿ ಪರಿಭ್ರಮಣೆ ನಡೆಸಲಿದೆ. ಸುಮಾರು ಒಂದು ವರ್ಷ ಕಾರ್ಯ ನಿರ್ವಹಿಸಲಿದೆ.

ಎಸ್‌ಎಸ್‌ಎಲ್‌ವಿ ಮೂರು ಹಂತಗಳ, ಕಡಿಮೆ ವೆಚ್ಚದ ಉಡ್ಡಯನ ವಾಹನವಾಗಿದ್ದು, ಸುಮಾರು 500 ಕೆ.ಜಿ ತೂಕದವರೆಗಿನ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.