ಬೆಂಗಳೂರು: 2020–21ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 99.99ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ರಾಜ್ಯದ ವಿವಿಧ ಶಾಲೆಗಳ ಒಟ್ಟು 157 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ.

2019–20ನೇ ಸಾಲಿನಲ್ಲಿ ಶೇ 71.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆರು ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕ ಗಳಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಸಭಾಂಗಣದಲ್ಲಿ ಸೋಮವಾರ ಫಲಿತಾಂಶ ಪ್ರಕಟಿಸಿದರು.

‘ಕೋವಿಡ್ ಸಂದಿಗ್ಧತೆ ಮತ್ತು ಪರೀಕ್ಷೆ ನಡೆಸುವ ಬಗ್ಗೆ ವ್ಯಕ್ತವಾದ ಪರ–ವಿರೋಧಗಳ ನಡುವೆಯೂ ಸರಳೀಕೃತ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ಎಲ್ಲರನ್ನೂ ಪಾಸ್ ಮಾಡಲಾಗಿದೆ. ಪರೀಕ್ಷೆ ಫಲಿತಾಂಶವನ್ನು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ರವಾನಿಸಲಾಗುವುದು. ತಾತ್ಕಾಲಿಕ ಅಂಕ ಪಟ್ಟಿಯನ್ನು ಶಾಲಾ ಹಂತದಲ್ಲಿಯೇ ಮುದ್ರಿಸಿಕೊಳ್ಳಲು ಅವಕಾಶ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಈ ಬಾರಿ ಆರು ದಿನಗಳ ಬದಲಿಗೆ ಎರಡು ದಿನ ಪರೀಕ್ಷೆ ನಡೆಸಲಾಗಿತ್ತು. ಜುಲೈ 19ರಂದು ಕೋರ್ ವಿಷಯಗಳು, 22ರಂದು ಭಾಷಾ ವಿಷಯಗಳಿಗೆ ಬಹು ಆಯ್ಕೆಯ ಪ್ರಶ್ನೆಗಳು, ಒಎಂಆರ್ ಶೀಟ್ನಲ್ಲಿ ಪ್ರತಿ ವಿಷಯಕ್ಕೆ 40 ಅಂಕಗಳಿಗೆ ತಲಾ ಒಂದು ಗಂಟೆಯಂತೆ ಒಟ್ಟು 120 ಅಂಕಗಳಿಗೆ 3 ಗಂಟೆ ಎರಡೂ ದಿನ ಪರೀಕ್ಷೆ ನಡೆಸಲಾಗಿತ್ತು.

ಅಂಕ ಆಧಾರಿತ ಗ್ರೇಡ್: ಈ ಬಾರಿ ವಿದ್ಯಾರ್ಥಿಗಳಿಗೆ ಅಂಕ ಆಧಾರಿತ ಗ್ರೇಡ್ ನೀಡಲಾಗಿದೆ. ಎ+, ಎ, ಬಿ, ಸಿ ಗ್ರೇಡ್ ಘೋಷಿಸಲಾಗಿದೆ.

ಒಟ್ಟು 1,28,931 (ಶೇ 16.52) ವಿದ್ಯಾರ್ಥಿಗಳು 90ರಿಂದ 100 ಅಂಕ ಗಳಿಸಿ ‘ಎ+’ ಗ್ರೇಡ್, 2,50,317 (ಶೇ 32.07) ವಿದ್ಯಾರ್ಥಿಗಳು 80ರಿಂದ 89 ಅಂಕ ಗಳಿಸಿ ‘ಎ’ ಗ್ರೇಡ್, 2,87,684 (ಶೇ 36.86) ವಿದ್ಯಾರ್ಥಿಗಳು 60ರಿಂದ 79 ಅಂಕ ಪಡೆದು ‘ಬಿ’ ಗ್ರೇಡ್. ಉಳಿದ (ಶೇ 14.55) ವಿದ್ಯಾರ್ಥಿಗಳು 35ರಿಂದ 59 ಅಂಕ ಪಡೆದು ‘ಸಿ’ ಗ್ರೇಡ್ ಪಡೆದಿದ್ದಾರೆ.

ಕೃಪಾಂಕ: 35ಕ್ಕಿಂತ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳಿಗೆ ಕೃಪಾಂಕ (ಗ್ರೇಸ್ ಮಾರ್ಕ್) ನೀಡಿ ಪಾಸ್ ಮಾಡಲಾಗಿದೆ. ಒಟ್ಟು ಶೇ 9 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. 13 ವಿದ್ಯಾರ್ಥಿಗಳಿಗೆ ಗರಿಷ್ಠ 28 ಅಂಕ ಕೃಪಾಂಕ (ಗ್ರೇಸ್ ಮಾರ್ಕ್) ನೀಡಿ ಉತ್ತೀರ್ಣಗೊಳಿಸಲಾಗಿದೆ.

ಎಲ್ಲ ಜಿಲ್ಲೆಗಳಿಗೆ ‘ಎ’ ಗ್ರೇಡ್: ಪ್ರತಿ ಬಾರಿ ಆಯಾ ಜಿಲ್ಲೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಪ್ರಮಾಣ ಆಧರಿಸಿ ಜಿಲ್ಲೆಗಳಿಗೆ ರ್ಯಾಂಕ್ ನೀಡಲಾಗುತ್ತಿತ್ತು. ಈ ಬಾರಿ ಎಲ್ಲ ಜಿಲ್ಲೆಗಳಲ್ಲೂ ಶೇ 100 ಉತ್ತೀರ್ಣ ದಾಖಲಾಗಿದ್ದು, ಎಲ್ಲ ಜಿಲ್ಲೆಗಳು ‘ಎ’ ಗ್ರೇಡ್ ಪಡೆದಿವೆ.

ಒಬ್ಬಳು ಫೇಲ್: ಪರೀಕ್ಷೆಗೆ ಹಾಜರಾದ ವರೆಲ್ಲ ಪಾಸ್ ಎಂದು ಶಿಕ್ಷಣ ಇಲಾಖೆ ಹೇಳಿದ್ದರೂ ಖಾಸಗಿಯಾಗಿ ನೋಂದಾ ಯಿಸಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಫೇಲ್ ಮಾಡಲಾಗಿದೆ. ಆಕೆ ತಾನು ಪರೀಕ್ಷೆ ಬರೆಯದೆ, ಬೇರೊಬ್ಬಳನ್ನು ಕಳುಹಿಸಿ ಸಿಕ್ಕಿ ಬಿದ್ದಿದ್ದು, ಡಿಬಾರ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.