ಬೆಂಗಳೂರು: ’ಸ್ಟಾರ್ ಸುವರ್ಣ’ ಚಾನೆಲ್ನಲ್ಲಿ ನಟ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಇದೇ 25ರಿಂದ ‘ಕನ್ನಡ ಕೋಟ್ಯಧಿಪತಿ’ ಕಾರ್ಯಕ್ರಮ ಪ್ರಸಾರವಾಗಲಿದೆ.

‘ಸೋಮವಾರದಿಂದ – ಶುಕ್ರವಾರದವರೆಗೆ ರಾತ್ರಿ 8ರಿಂದ 9 ಗಂಟೆವರೆಗೆ ಪ್ರಸಾರವಾಗಲಿರುವ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರಿಗೆ ಕೋಟ್ಯಧಿಪತಿಯಾಗುವ ಸುವರ್ಣಾವಕಾಶ ಸಿಗಲಿದೆ. ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಎರಡು ಸುತ್ತಿನ ಆಡಿಷನ್ ಮಾಡಿ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಅದೃಷ್ಟವಂತ, ಬುದ್ಧಿವಂತ ವೀಕ್ಷಕರು ಹಾಟ್ ಸೀಟ್ನಲ್ಲಿ ಕುಳಿತುಕೊಳ್ಳುವ ಅವಕಾಶ ಗಳಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

‘ಮೊದಲ ಸುತ್ತು ಫಾಸ್ಟೆಸ್ಟ್ ಫಿಂಗರ್ ಫರ್ಸ್ಟ್. ಈ ಸುತ್ತಿನಲ್ಲಿ ಆಯ್ಕೆಯಾಗುವ ಒಬ್ಬ ಸ್ಪರ್ಧಿ ರಮೇಶ್ ಅರವಿಂದ್ ಅವರ ಎದುರು ಹಾಟ್ ಸೀಟ್ ನಲ್ಲಿ ಕುಳಿತು ₹1 ಕೋಟಿಗೆ ಆಟ ಆಡಲಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದೆ’ ಎಂದು ತಿಳಿಸಿದೆ.

‘ಇದೊಂದು ಊಹೆಗೆ ನಿಲುಕದ ಗೇಮ್ ಷೋ. ಈ ಕಾರ್ಯಕ್ರಮ ಹೃದಯ ಮತ್ತು ಮೆದುಳಿಗೂ ಹತ್ತಿರವಾದ ಗೇಮ್ ಷೋ’ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.