ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ಧಕ್ಕೆ | ಮಾಧ್ಯಮಗಳಿಗೆ ದೇಣಿಗೆ ಸ್ಥಗಿತ: ಐಐಎಂಬಿ ಪ್ರಾಧ್ಯಾಪಕರ ಪತ್ರ

Published 8 ಆಗಸ್ಟ್ 2023, 23:20 IST
Last Updated 8 ಆಗಸ್ಟ್ 2023, 23:20 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ, ದ್ವೇಷ ಭಾಷಣ ಬಿತ್ತರಿಸುವ, ತಪ್ಪು ಮಾಹಿತಿ ರವಾನಿಸುವ ಮಾಧ್ಯಮ ಸಂಸ್ಥೆಗಳಿಗೆ ಹಣ ನೀಡಬಾರದು ಎಂದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಹಾಲಿ ಹಾಗೂ ನಿವೃತ್ತ ಪ್ರಾಧ್ಯಾಪಕರು ಕಾರ್ಪೋರೇಟ್‌ ಕಂಪನಿಗಳಿಗೆ ಪತ್ರ ಬರೆದಿದ್ದಾರೆ.

ಕೆಲವು ವರ್ಷಗಳಿಂದ ಟಿ.ವಿ, ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷಮಯ ಭಾಷಣಗಳು, ಸುದ್ದಿಗಳು ಬಿತ್ತರವಾಗುತ್ತಿವೆ. ಭಾಷೆಯ ಬಳಕೆ ಪ್ರಚೋದನಕಾರಿಯಾಗಿರುತ್ತವೆ. ಹಿಂಸಾತ್ಮಕ, ಅಪರಾಧ ಕೃತ್ಯಗಳನ್ನು ವೈಭವೀಕರಿಸಲಾಗುತ್ತಿದೆ ಎಂದು ಹೇಮಾ ಸ್ವಾಮಿನಾಥನ್, ಅನುಭಾ ಧಸ್ಮನಾ, ಅರ್ಪಿತಾ ಚಟರ್ಜಿ, ಬಿ.ಕೆ.ಚಂದ್ರಶೇಖರ್, ದೀಪಕ್ ಮಲ್ಘನ್, ಕೃಷ್ಣ ಟಿ. ಕುಮಾರ್, ಮಲಯ್ ಭಟ್ಟಾಚಾರ್ಯ ಸೇರಿದಂತೆ 17 ಪ್ರಾಧ್ಯಾಪಕರು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದ ಕೋಮು ಗಲಭೆಗಳ ಸಮಯದಲ್ಲಿ ಪೊಲೀಸರು, ಭದ್ರತಾ ಪಡೆಗಳ ನಿಷ್ಕ್ರಿಯತೆ, ಅತ್ಯಾಚಾರ, ಸಾಮೂಹಿಕ ಹತ್ಯೆಯಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಖುಲಾಸೆಗೊಳಿಸುವುದು ನಡೆದಿದೆ. ಅಧಿಕಾರಸ್ಥರ ಮೌನ ಅಪರಾಧಿಗಳಿಗೆ ಸಮ್ಮತಿಯಂತಾಗಿದೆ ಎಂದಿದ್ದಾರೆ.

ಕಾರ್ಪೋರೇಟ್‌ ಕಂಪನಿಗಳು ಸುಳ್ಳು ಹಾಗೂ ಪ್ರಚೋದನಾಕಾರಿ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮ ಸಂಸ್ಥೆಗಳಿಗೆ ನೀಡುವ ದೇಣಿಗೆ ಸ್ಥಗಿತಗೊಳಿಸದಿದ್ದರೆ ದೇಶದ ಸಾಮಾಜಿಕ ರಚನೆ, ಆರ್ಥಿಕತೆಗೂ ಧಕ್ಕೆಯಾಗುತ್ತದೆ. ಭಾರತದ ಸಹಿಷ್ಣುತೆ, ಭವಿಷ್ಯದ ಮೇಲೆ ಕರಾಳ ಛಾಯೆ ಆವರಿಸುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT