ತಿಪಟೂರು: ‘ಈ ಹಿಂದೆ ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ಆಗಿದ್ದ ನನ್ನನ್ನು ಕುತಂತ್ರ ಮಾಡಿ ದೂರ ತಳ್ಳಿದರು. ಆದರೆ, ಆ ಮಠಕ್ಕೆ ನಾನು ಒಂದಲ್ಲಾ ಒಂದು ದಿನ ಮಠಾಧೀಶನಾಗುವುದು ನಿಶ್ಚಿತ’ ಎಂದು ಇಲ್ಲಿನ ಷಡಕ್ಷರ ಮಠದ ಡಾ.ರುದ್ರಮುನಿ ಸ್ವಾಮೀಜಿ ಒತ್ತಿ ಹೇಳಿದರು.

ನಗರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ನಿಷ್ಠೆ, ಧಾರ್ಮಿಕ ಶ್ರದ್ಧೆ, ಸೇವಾ ಮನೋಭಾವ ಗುರುತಿಸಿ ಹಿಂದಿನ ಗುರುಗಳಾಗಿದ್ದ ಡಾ.ಗಂಗಾಧರ ರಾಜಯೋಗೀಂದ್ರ ಸ್ವಾಮೀಜಿ ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರು’ ಎಂದರು.

‘ಬಡ ಕುಟುಂಬದಿಂದ ಬಂದಿದ್ದ ನಾನು ಆ ದೊಡ್ಡ ಮಠಕ್ಕೆ ಉತ್ತರಾಧಿಕಾರಿ ಆಗಿದ್ದು ಸೌಭಾಗ್ಯ. ನನ್ನ ಸುಧಾರಣಾ ಕ್ರಮಗಳನ್ನು ಸಹಿಸದ ಕೆಲವರು ಕುತಂತ್ರ ಮಾಡಿ ಮಠದಿಂದ ದೂರ ಮಾಡಿದರು. ಆದರೆ, ನ್ಯಾಯ ಸಮ್ಮತವಾಗಿ ನಾನೇ ಪೀಠಾಧಿಪತಿ ಆಗಬೇಕು. ಇದು ಮುಂದೆ ಸಾಧ್ಯವಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.