ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ದಿ ನ್ಯೂಸ್ ಮಿನಿಟ್’ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ

Published : 28 ಆಗಸ್ಟ್ 2024, 15:55 IST
Last Updated : 28 ಆಗಸ್ಟ್ 2024, 15:55 IST
ಫಾಲೋ ಮಾಡಿ
Comments

ಬೆಂಗಳೂರು: ‘ಕೋವಿಡ್ ಲಸಿಕೆ ಪಡೆಯಲು ಬಸವನಗುಡಿಯ ಬಿಜೆಪಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಅವರಿಗೆ ಲಂಚ ನೀಡಬೇಕು’ ಎಂಬ ವೈರಲ್ ಆಗಿದ್ದ ಆಡಿಯೊ ಸಂಭಾಷಣೆ ಆಧರಿಸಿ ಸುದ್ದಿ ಪ್ರಕಟಿಸಿದ್ದ ಆನ್‌ಲೈನ್‌ ಮಾಧ್ಯಮ, ʼದಿ ನ್ಯೂಸ್ ಮಿನಿಟ್ʼ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ, ‘ದಿ ನ್ಯೂಸ್ ಮಿನಿಟ್‘ ಮಾತೃ ಸಂಸ್ಥೆ, ‘ಸ್ಪುಂಕ್ಲೇನ್‌ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ‘ ಸಲ್ಲಿಸಿರುವ ಸಿವಿಲ್ ರಿವಿಷನ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಪ್ರಕರಣವೇನು?

ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರು ಬಸವನಗುಡಿಯ ಅನುಗ್ರಹ ವಿಠ್ಠಲ ಆಸ್ಪತ್ರೆ ಸಿಬ್ಬಂದಿ ಜೊತೆ ಮಾತನಾಡುತ್ತಿದ್ದಾರೆ’ ಎನ್ನಲಾದ ಆಡಿಯೊದಲ್ಲಿ, ಸಿಬ್ಬಂದಿಯು, ‘ಕೋವಿಡ್ ಲಸಿಕೆಯೊಂದಕ್ಕೆ ₹900 ವೆಚ್ಚವಾಗುತ್ತದೆ. ಇದರಲ್ಲಿ ₹700 ಅನ್ನು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಬೇಕು. ಆಸ್ಪತ್ರೆಗೆ ₹200 ಮಾತ್ರ ಉಳಿಯಲಿದೆ’ ಎಂಬ ಸಂಭಾಷಣೆ ವೈರಲ್ ಆಗಿತ್ತು.

ತದನಂತರ ವೆಂಕಟೇಶ್, ‘ಕೋವಿಡ್ ಲಸಿಕೆಯನ್ನು ಲಾಭ ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದ್ದರು. ಇದನ್ನು ಆಧರಿಸಿ ‘ದಿ ನ್ಯೂಸ್ ಮಿನಿಟ್’, ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’, ‘ದಿ ಕಾಗ್ನೇಟ್’ ಸೇರಿದಂತೆ ಇತರೆ ಮಾಧ್ಯಮಗಳು ಈ ಸಂಭಾಷಣೆಯನ್ನು ಬಿತ್ತರಿಸಿದ್ದವು.

ಈ ಹಿನ್ನೆಲೆಯಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಅವರು, ಎಚ್.ಎಂ.ವೆಂಕಟೇಶ್, ಅನುಗ್ರಹ ವಿಠ್ಠಲ ಆಸ್ಪತ್ರೆ, ಆಪ್ನಾ ದೆಹಲಿ ಘಟಕ ಮತ್ತು ಆಪ್ ನಾಯಕಿ ಆತಿಷಿ ಮರ್ಲೇನಾ ವಿರುದ್ಧ ₹3 ಕೋಟಿ ಪರಿಹಾರ ಕೋರಿ ಮಾನಹಾನಿ ಪ್ರಕರಣ ಹೂಡಿದ್ದರು. ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ, ‘ದಿ ನ್ಯೂಸ್ ಮಿನಿಟ್’ 2023ರ ನವೆಂಬರ್ 23ರಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT