ಬೆಂಗಳೂರು:15 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು ಎಲ್ಲಾ ಕ್ಷೇತ್ರಗಳಲ್ಲೂ ಸಖಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು ಈ ಮತಗಟ್ಟೆಗಳಲ್ಲಿ ಮತದಾನ ಬಿರುಸುಗೊಂಡಿದೆ.

ಈ ಮತಗಟ್ಟೆಯಲ್ಲಿನ ಎಲ್ಲ ಅಧಿಕಾರಿಗಳು ಮಹಿಳೆಯರೇ ಇರುವುದು ವಿಶೇಷ. ಮಹಿಳಾ ಮತದಾರರು ಹೆಚ್ಚಿರುವ ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ರೂಪಿಸಲಾಗಿದೆ.

ಇಲ್ಲಿ ಮತದಾರರ ಗುರುತಿನ ಚೀಟಿಯ ಕ್ರಮಸಂಖ್ಯೆ, ಹೆಸರು, ಭಾವಚಿತ್ರ, ವಿಳಾಸವನ್ನು ಪರಿಶೀಲಿಸುವ, ಎಡಗೈನ ತೋರು ಬೆರಳಿಗೆ ಶಾಹಿ ಹಚ್ಚುವ ಮತ್ತು ಮತದಾನದ ಇವಿಎಂ ಮತ್ತು ವಿವಿಪ್ಯಾಡ್ಗಳನ್ನು ನಿರ್ವಹಿಸುವ ಮತಗಟ್ಟೆಯ ಅಧಿಕಾರಿಗಳೆಲ್ಲ ಮಹಿಳೆಯರೇ ಆಗಿರುತ್ತಾರೆ.

ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಅವರು ಮತದಾನದೆಡೆಗೆ ಆಕರ್ಷಿಸಲು, ತುಂಬಾ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸಖಿ ಮತಗಟ್ಟೆಗಳನ್ನು ರೂಪಿಸಲಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 700ಕ್ಕೂ ಹೆಚ್ಚು ಸಖಿ ಮತಗಟ್ಟೆಗಳನ್ನು ರೂಪಿಸಲಾಗಿತ್ತು.

15 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಖಿ ಮತಗಟ್ಟೆಗಳನ್ನು ರೂಪಿಸಲಾಗಿದೆ.ಹುಣಸೂರಿನಲ್ಲಿ ಸಖಿ ಜನಸ್ನೇಹಿ ಮತದಾನ ಕೇಂದ್ರವನ್ನು ರೂಪಿಸಲಾಗಿದೆ.ಕೆ.ಆರ್.ಪೇಟೆಯಕಿಕ್ಕೇರಿಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ.ಅಥಣಿಯ ಅಬ್ದುಲ್ ಕಲಾಂ ಪ್ರೌಢಶಾಲೆಯಲ್ಲಿ ಸಖಿ ಮತಗಟ್ಟೆ ನಿರ್ಮಾಣ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.