ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 01 ಸೆಪ್ಟೆಂಬರ್‌ 2023

Published 1 ಸೆಪ್ಟೆಂಬರ್ 2023, 11:34 IST
Last Updated 1 ಸೆಪ್ಟೆಂಬರ್ 2023, 11:34 IST
ಅಕ್ಷರ ಗಾತ್ರ
Introduction

ಸೂರ್ಯಯಾನಕ್ಕೆ ಕ್ಷಣಗಣನೆ, ಇಂಡಿಯಾ ಮೈತ್ರಿಕೂಟ 13 ಸದಸ್ಯರ ಸಮನ್ವಯ ಸಮಿತಿ ರಚನೆ, ಸರ್ಕಾರಿ ವಿಮಾನಯಾನ ಕಂಪನಿ ಆರಂಭಕ್ಕೆ ಪ್ರಸ್ತಾವ, ದಸರೆಗೆ ಮುನ್ನುಡಿ ಬರೆದ ಗಜ‍ಪಯಣ, ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಮೃತದೇಹ ಪತ್ತೆ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.

1

ಸೂರ್ಯಯಾನಕ್ಕೆ ಕ್ಷಣಗಣನೆ: ನಾಳೆ ಆದಿತ್ಯ ಎಲ್‌–1 ಉಪಗ್ರಹ ಉಡ್ಡಯನ

ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್ ಅವರು ಶುಕ್ರವಾರ ತಿರುಪತಿ ಜಿಲ್ಲೆಯ ಪ್ರಸಿದ್ಧ ಸುಲ್ಲುರಪೇಟೆಯ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್ ಅವರು ಶುಕ್ರವಾರ ತಿರುಪತಿ ಜಿಲ್ಲೆಯ ಪ್ರಸಿದ್ಧ ಸುಲ್ಲುರಪೇಟೆಯ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪಿಟಿಐ ಚಿತ್ರ

ಸೂರ್ಯನ ಅಧ್ಯಯನಕ್ಕಾಗಿ ಇಸ್ರೊ ಕೈಗೊಳ್ಳುತ್ತಿರುವ ಮಹತ್ವಕಾಂಕ್ಷೆಯ ಸೂರ್ಯಯಾನ ಯೋಜನೆಗೆ ಕ್ಷಣಗಣನೆ ಆರಂಭವಾಗಿದೆ. ಏತನ್ಮಧ್ಯೆ ಇಸ್ರೊ ಮುಖ್ಯಸ್ಥ ಎಸ್‌. ಸೋಮನಾಥ್ ಅವರು ತಿರುಪತಿ ಜಿಲ್ಲೆಯ ಪ್ರಸಿದ್ಧ ಸುಲ್ಲುರಪೇಟೆಯ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಸೆ.2 ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಆದಿತ್ಯ ಎಲ್‌–1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆ. 

ಇದನ್ನು ಪೂರ್ತಿ ಓದಿ: ಸೂರ್ಯಯಾನಕ್ಕೆ ಕ್ಷಣಗಣನೆ: ನಾಳೆ ಆದಿತ್ಯ ಎಲ್‌–1 ಉಪಗ್ರಹ ಉಡ್ಡಯನ

2

ಇಂಡಿಯಾ ಮೈತ್ರಿಕೂಟ: 13 ಸದಸ್ಯರ ಸಮನ್ವಯ ಸಮಿತಿ ರಚನೆ

ವಿರೋಧ ಪಕ್ಷಗಳ ಮೈತ್ರಿಕೂಟ ನಾಯಕರು

ವಿರೋಧ ಪಕ್ಷಗಳ ಮೈತ್ರಿಕೂಟ ನಾಯಕರು

ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ರಚನೆಯಾಗಿರುವ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ‘ 13 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ಶುಕ್ರವಾರ ರಚಿಸಿದೆ. ಈ ಸಮಿತಿಗೆ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ. ಸೆಪ್ಟೆಂಬರ್ 30ರೊಳಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು ಎಂದು ಇಂಡಿಯಾದ ಮೂಲಗಳು ತಿಳಿಸಿವೆ. 

ಇದನ್ನು ಪೂರ್ತಿ ಓದಿ: ಇಂಡಿಯಾ ಮೈತ್ರಿಕೂಟ: 13 ಸದಸ್ಯರ ಸಮನ್ವಯ ಸಮಿತಿ ರಚನೆ

3

ಸರ್ಕಾರಿ ವಿಮಾನಯಾನ ಕಂಪನಿ ಆರಂಭಕ್ಕೆ ಪ್ರಸ್ತಾವ: ಎಂ.ಬಿ. ಪಾಟೀಲ

ಎಂ.ಬಿ. ಪಾಟೀಲ

ಎಂ.ಬಿ. ಪಾಟೀಲ

ರಾಜ್ಯ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಆರಂಭಿಸುವ ಪ್ರಸ್ತಾವವಿದೆ. ಶೀಘ್ರದಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಇದನ್ನು ಪೂರ್ತಿ ಓದಿ: ಸರ್ಕಾರಿ ವಿಮಾನಯಾನ ಕಂಪನಿ ಆರಂಭಕ್ಕೆ ಪ್ರಸ್ತಾವ: ಎಂ.ಬಿ. ಪಾಟೀಲ

4

ಶಕ್ತಿ ಯೋಜನೆಗೆ ವಿರೋಧ: ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಬಂದ್

ಖಾಸಗಿ ಸಾರಿಗೆ

ಖಾಸಗಿ ಸಾರಿಗೆ

ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮಾತಿಗೆ ತಪ್ಪಿದ ಸರ್ಕಾರದ ನಡೆಯನ್ನು ಖಂಡಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.11ರಂದು ಬೆಂಗಳೂರಿನಲ್ಲಿ ಸಾರಿಗೆ ಬಂದ್‌ ಮಾಡಲು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ನಿರ್ಧರಿಸಿದೆ.

ಇದನ್ನು ಪೂರ್ತಿ ಓದಿ: ಶಕ್ತಿ ಯೋಜನೆಗೆ ವಿರೋಧ: ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಬಂದ್

5

ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

ಗಜ‍ಪಯಣ

ಗಜ‍ಪಯಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಶುಕ್ರವಾರ ದಸರೆಯ ಸಂಭ್ರಮಕ್ಕೆ ‘ಗಜ ಪಯಣ’ವು ಮುನ್ನುಡಿ ಬರೆಯಿತು. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಿದರು.

ಇದನ್ನು ಪೂರ್ತಿ ಓದಿ: ಮೈಸೂರು: ದಸರೆಗೆ ಮುನ್ನುಡಿ ಬರೆದ ಗಜ‍ಪಯಣ

6

ಸಿಂಗಪುರ ಅಧ್ಯಕ್ಷೀಯ ಚುನಾವಣೆ: ಮತದಾನ ಆರಂಭ– ರೇಸ್‌ನಲ್ಲಿ ಭಾರತೀಯ ಸಂಜಾತ ಥರ್ಮನ್

ಥರ್ಮನ್

ಥರ್ಮನ್

ಸಿಂಗಪುರದ ಅಧ್ಯಕ್ಷೀಯ ಚುನಾವಣೆಯ ಮತದಾನ ಆರಂಭವಾಗಿದ್ದು, ತ್ರಿಕೋನ ಸ್ಪರ್ಧೆಯಲ್ಲಿ ಮಾಜಿ ಸಚಿವ, ಭಾರತೀಯ ಸಂಜಾತ ಥರ್ಮನ್ ಷಣ್ಮುಗರತ್ನಂ ಸಹ ಇದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದ್ದು, 27 ಲಕ್ಷ ಮತದಾರರು ಮತ ಚಲಾಯಿಸುವ ನಿರೀಕ್ಷೆಯ ಇದೆ. ರಾತ್ರಿ 8 ಗಂಟೆವರೆಗೂ ಮತದಾನ ಕೇಂದ್ರಗಳು ತೆರೆದಿರುತ್ತವೆ. ನಂತರ ಮತಗಳ ಎಣಿಕೆ ಪ್ರಾರಂಭವಾಗುತ್ತದೆ. ಮಧ್ಯರಾತ್ರಿಯ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

 ಇದನ್ನು ಪೂರ್ತಿ ಓದಿ: ಸಿಂಗಪುರ ಅಧ್ಯಕ್ಷೀಯ ಚುನಾವಣೆ: ಮತದಾನ ಆರಂಭ– ರೇಸ್‌ನಲ್ಲಿ ಭಾರತೀಯ ಸಂಜಾತ ಥರ್ಮನ್

7

ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಮೃತದೇಹ ಪತ್ತೆ

ಅಪರ್ಣಾ ನಾಯರ್‌

ಅಪರ್ಣಾ ನಾಯರ್‌

ಮಲಯಾಳಂ ನಟಿ ಅಪರ್ಣಾ ನಾಯರ್‌ (33) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದ ಅಪರ್ಣಾ ತಿರುವನಂತಪುರದ ಕರಮನ ಪ್ರದೇಶದಲ್ಲಿ ಪತಿ ಮತ್ತು ಮಕ್ಕಳೊಂದಿಗೆ ವಾಸವಿದ್ದರು. ಗುರುವಾರ ರಾತ್ರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಪೂರ್ತಿ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಮೃತದೇಹ ಪತ್ತೆ

8

ಬೈಲಹೊಂಗಲ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಅವಘಡ– ತಂದೆ, ಮಗ ಸಾವು

ತಂದೆ, ಮಗ ಸಾವು

ತಂದೆ, ಮಗ ಸಾವು

ಬೈಲಹೊಂಗಲ ತಾಲ್ಲೂಕಿನ‌ ಉಡಿಕೇರಿ ಗ್ರಾಮದಲ್ಲಿ ಶುಕ್ರವಾರ ಮನೆ ಮುಂದಿನ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ಸಾವಿಗೀಡಾಗಿದ್ದಾರೆ. ಕೃಷಿಕರಾದ ಪ್ರಭು ಹುಂಬಿ (68) ಹಾಗೂ ಇವರ ಪುತ್ರ ಮಂಜುನಾಥ (29) ಮೃತಪಟ್ಟವರು.

ಇದನ್ನು ಪೂರ್ತಿ ಓದಿ: ಬೈಲಹೊಂಗಲ: ಹುಲ್ಲು ತೆಗೆಯುವ ವೇಳೆ ವಿದ್ಯುತ್ ಅವಘಡ– ತಂದೆ, ಮಗ ಸಾವು

9

ಜೋಡಿ ಕೊಲೆ ಪ್ರಕರಣ: ಬಿಹಾರದ ಮಾಜಿ ಸಂಸದ ಪ್ರಭುನಾಥ್ ಸಿಂಗ್‌ಗೆ ಜೀವಾವಧಿ ಶಿಕ್ಷೆ

ಜೀವಾವಧಿ ಶಿಕ್ಷೆ

ಜೀವಾವಧಿ ಶಿಕ್ಷೆ

1995ರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಮಾಜಿ ಸದಸ್ಯ, ಬಿಹಾರದ ಪ್ರಭುನಾಥ್ ಸಿಂಗ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದನ್ನು ಪೂರ್ತಿ ಓದಿ: ಜೋಡಿ ಕೊಲೆ ಪ್ರಕರಣ: ಬಿಹಾರದ ಮಾಜಿ ಸಂಸದ ಪ್ರಭುನಾಥ್ ಸಿಂಗ್‌ಗೆ ಜೀವಾವಧಿ ಶಿಕ್ಷೆ

10

Asia Cup 2023: ಪಾಕ್ ಬೌಲರ್‌ಗಳನ್ನು ಹಗುರವಾಗಿ ಪರಿಗಣಿಸದಂತೆ ವಿರಾಟ್ ಎಚ್ಚರಿಕೆ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

(ಪಿಟಿಐ ಚಿತ್ರ)

ಪಾಕಿಸ್ತಾನದಂತಹ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಲು ಅತ್ಯುತ್ತಮ ಪ್ರದರ್ಶನವನ್ನೇ ನೀಡಬೇಕಾಗುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಬಲ ಆ ತಂಡದ ಬೌಲಿಂಗ್ ಪಡೆಯಾಗಿದೆ. ಯಾವುದೇ ಹಂತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಬಲ್ಲ ಪ್ರಭಾವಶಾಲಿ ಬೌಲರ್‌ಗಳನ್ನು ಹೊಂದಿದೆ. ಹಾಗಾಗಿ ಪಾಕ್ ತಂಡದ ಬೌಲರ್‌ಗಳನ್ನು ಎದುರಿಸಲು ಸಂಪೂರ್ಣ ಸಮರ್ಥರಾಗಿರಬೇಕು ಎಂದು ವಿರಾಟ್ ಎಚ್ಚರಿಸಿದ್ದಾರೆ

ಇದನ್ನು ಪೂರ್ತಿ ಓದಿ: Asia Cup 2023: ಪಾಕ್ ಬೌಲರ್‌ಗಳನ್ನು ಹಗುರವಾಗಿ ಪರಿಗಣಿಸದಂತೆ ವಿರಾಟ್ ಎಚ್ಚರಿಕೆ