ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯಲ್ಲಿ ಮತದಾನಕ್ಕೆ ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಬದಲು ಮತಪತ್ರ (ಬ್ಯಾಲೆಟ್ ಪೇಪರ್) ಬಳಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.
.ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ: ಇವಿಎಂ ಬದಲು ಮತಪತ್ರ.
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನ ಮುಂದುವರೆದಿದ್ದು, ಸೋಮವಾರ ನವಶಿಲಾಯುಗದ ಕೈಕೊಡಲಿ ಮತ್ತು ಕಂಬದ ಬೋಧಿಗೆ ಪ್ರಾಚ್ಯ ಅವಶೇಷ ಸಿಕ್ಕಿದೆ.
.ಲಕ್ಕುಂಡಿಯಲ್ಲಿ ಉತ್ಖನನ: ಕೈಕೊಡಲಿ, ಕಂಬದ ಬೋಧಿಗೆ ಪತ್ತೆ.
ಚಾಮುಂಡಿಬೆಟ್ಟದಲ್ಲಿ ಸೋಮವಾರ ಬೆಟ್ಟದ ನಿವಾಸಿಗಳು, ಶ್ರೀರಂಗಪಟ್ಟಣ ಹನುಮ ಮಾಲದಾರಿಗಳ ಸಮಿತಿ ಸದಸ್ಯರ ಪ್ರತಿಭಟನೆ ನಡುವೆಯೇ ‘ಪ್ರಸಾದ್ ಯೋಜನೆ’ಯಡಿ ವಿವಿಧ ಅಭಿವೃದ್ಧಿ ಕಾರ್ಯಗಳು ಪೊಲೀಸ್ ಭದ್ರತೆಯಲ್ಲಿ ಪುನರಾರಂಭಗೊಂಡವು.
.ಮೈಸೂರು: ಚಾಮುಂಡಿಬೆಟ್ಟದಲ್ಲಿ ‘ಪ್ರಸಾದ’ ಯೋಜನೆಗೆ ವಿರೋಧ.
ಚನ್ನಪಟ್ಟಣ ತಾಲ್ಲೂಕಿನ ಪ್ರಾದೇಶಿಕ ಅರಣ್ಯ ವಲಯದ ಅಬ್ಬೂರು ಸೆಕ್ಷನ್ ಅರಣ್ಯ, ಅಬ್ಬೂರು ಗುಡ್ಡೆಯ ಪಟ್ಲು ಹಾಗೂ ಕೋಮನಹಳ್ಳಿ ಭಾಗದಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಬೆಂಕಿಯಿಂದಾಗಿ ಸುಮಾರು 30 ಎಕರೆ ಪ್ರದೇಶವು ಸುಟ್ಟು ಭಸ್ಮವಾಗಿದೆ.
.ಬೆಂಗಳೂರು–ಮೈಸೂರು ಹೆದ್ದಾರಿ ಬದಿ ಕಾಳ್ಗಿಚ್ಚು: 30 ಎಕರೆ ಕಾಡು ಭಸ್ಮ.
ಪುರಾಣದಲ್ಲಿ ಮಹಿಳೆಯರು, ಜೆನ್ ಝೀ, ಬ್ರಿಟಿಷ್ ಸಾಮ್ರಾಜ್ಯದ ವಸಾಹಾತುಶಾಹಿ ಸೃಷ್ಟಿಸಿದ ಹಿಂಸೆ... ಮುಂತಾದ ಹಲವು ಗಂಭೀರ ವಿಚಾರಗಳ ಚಿಂತನ ಮಂಥನದೊಂದಿಗೆ ಜೈಪುರ ಸಾಹಿತ್ಯ ಉತ್ಸವದ (ಜೆಎಲ್ಎಫ್) 19ನೇ ಆವೃತ್ತಿಯು ಸೋಮವಾರ ಸಂಪನ್ನಗೊಂಡಿತು.
.ಜೈಪುರ ಸಾಹಿತ್ಯ ಉತ್ಸವಕ್ಕೆ ಸಂಭ್ರಮದ ತೆರೆ: ಸಾಹಿತ್ಯ, ಅಭಿರುಚಿ, ವ್ಯಾಪಾರದ ಉತ್ಸವ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.
.ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ.
ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲಲು ವಿಫಲನಾಗಿರುವುದರಿಂದ ತಾನು ಇನ್ನು ಮುಂದೆ ‘ಶಾಂತಿಯ ಬಗ್ಗೆ ಮಾತ್ರ ಯೋಚಿಸುವ’ ಅಗತ್ಯವಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿಗೆ ತಿಳಿಸಿದ್ದಾರೆ.
.ಅಮೆರಿಕಕ್ಕೆ ಒಳಿತಾಗುವುದರತ್ತ ಗಮನ: ಶಾಂತಿ ಬಗ್ಗೆ ಮಾತ್ರ ಯೋಚಿಸುವುದಿಲ್ಲ; ಟ್ರಂಪ್.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆಯು ₹3 ಲಕ್ಷ ದಾಟಿದೆ. 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ ₹1.50 ಲಕ್ಷಕ್ಕೆ ತಲುಪಿದೆ. ಇದು ಚಿನ್ನ ಹಾಗೂ ಬೆಳ್ಳಿಯ ಈವರೆಗಿನ ದಾಖಲೆಯ ಬೆಲೆಯಾಗಿದೆ.
.10 ಗ್ರಾಂ ಚಿನ್ನಕ್ಕೆ ₹1.50 ಲಕ್ಷ: ₹3 ಲಕ್ಷ ದಾಟಿದ ಬೆಳ್ಳಿ ದರ.
ಗೌತಮಿ ನಾಯಕ್ ಅವರ ಸೊಗಸಾದ ಅರ್ಧಶತಕ ಹಾಗೂ ಬೌಲರ್ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 61 ರನ್ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು. ಅದರೊಂದಿಗೆ ಟೂರ್ನಿಯಲ್ಲಿ ಸತತ ಐದು ಗೆಲುವಿನೊಂದಿಗೆ ನಾಕೌಟ್ಗೆ ಪ್ರವೇಶ ಪಡೆಯಿತು.
.WPL RCBW vs GGW | ಆರ್ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್ಗೆ ಮಂದಾನ ಬಳಗ.
ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿ ಇದೇ 21ರ ಒಳಗೆ ನಿರ್ಧಾರಕ್ಕೆ ಬರಬೇಕು. ಇಲ್ಲದೇ ಹೋದರೆ ಬದಲಿಯಾಗಿ ಬೇರೆ ತಂಡದ ಆಯ್ಕೆಗೆ ಸಿದ್ಧವಾಗಿರಿ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಸೂಚಿಸಿದೆ.
.ಟಿ20 ವಿಶ್ವಕಪ್| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.