ಸಾಹಿತಿ ಚಂದ್ರಕಾಂತ ಪೋಕಳೆ ಮೇಲಿನ ಮಾತನ್ನು ಅನುಮೋದಿಸುತ್ತಲೇ, ‘ಮೂಲ ಭಾಷೆಯಲ್ಲಿರುವ ಸೊಗಡು, ಶಕ್ತಿಯನ್ನು ಉದ್ದೇಶಿತ ಭಾಷೆಗೂ ತೆಗೆದುಕೊಂಡು ಹೋಗುವುದು ದೊಡ್ಡ ಸವಾಲು. ಕುಸುಮಬಾಲೆಯನ್ನು ಮರಾಠಿಗೆ ಅನುವಾದಿಸುವಾಗ ಗ್ರಾಂಥಿಕ ಭಾಷೆ ಬಳಸಬೇಕಾಯಿತು. ಅನುವಾದದಲ್ಲಿನ ಇಂತಹ ಸವಾಲುಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ’ ಎಂದರು.