ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರಿಗೆ ನೌಕರರ ಮುಷ್ಕರ: ರಾಜ್ಯದಾದ್ಯಂತ ಪ್ರಯಾಣಿಕರ ಪರದಾಟ

ಬೇಡಿಕೆಗೆ ಸ್ಪಂದಿಸದ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಟನೆ
Last Updated 11 ಡಿಸೆಂಬರ್ 2020, 4:12 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸದ ಸರ್ಕಾರದ ಕ್ರಮ ವಿರೋಧಿಸಿ ನಾಲ್ಕು ನಿಗಮಗಳ ಸಾರಿಗೆ ನೌಕರರು ಬಸ್‌ಗಳ ಸಂಚಾರ ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದ್ದಾರೆ. ನಗರದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.‌

ಮೆಜೆಸ್ಟಿಕ್‌ನ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ನಿಲ್ದಾಣಗಳಲ್ಲಿ ಬಸ್‌ಗಳು ಅಲ್ಲಲ್ಲೇ ನಿಂತಿವೆ. ಡಿಪೋಗಳಲ್ಲಿದ್ದ ಬಿಎಂಟಿಸಿ ಬಸ್‌ಗಳನ್ನು ನೌಕರರು ಹೊರಕ್ಕೆ ತೆಗೆಯದೆ ಮುಷ್ಕರ ನಡೆಸುತ್ತಿದ್ದಾರೆ. ರಾತ್ರಿ ಬೇರೆ ನಿಲ್ದಾಣಗಳಲ್ಲಿ ತಂಗಿದ್ದ ಬಸ್‌ಗಳನ್ನು ಅಲ್ಲಲ್ಲೇ ನಿಲ್ಲಿಸಲಾಗಿದೆ. ಬಸ್‌ ಸಂಚಾರ ಇಲ್ಲದ ವಿವಿಧೆಡೆ ಕೆಲಸಕ್ಕೆ ಹೋಗಬೇದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ವಿಧಾನಸೌಧ ಚಲೋ ನಡೆಸಿದ ನೌಕರರ ಸಂಘದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದು ನೌಕರರ ಸಿಟ್ಟಿಗೆ ಕಾರಣವಾಗಿವೆ. ಸಾರಿಗೆ ನೌಕರರನ್ನಾಗಿ ಮಾಡಬೇಕು ಎಂಬ ಬೇಡಿಕೆ ಈಡೇರಿಸಬೇಕು. ರಾತ್ರಿ ಬೇರೆ ಬೇರೆ ನಿಲ್ದಾಣಗಳಲ್ಲಿ ತಂಗಿರುವ ಬಸ್‌ಗಳು 12 ಗಂಟೆಯ ಒಳಗೆ ಡಿಪೋ ಸೇರಬೇಕಿದೆ. ಡಿಪೋ ಸೇರಿದ ನಂತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ನೌಕರರು ತಿಳಿಸಿದ್ದಾರೆ.

‘ಹೋರಾಟದ ಸಮಯದಲ್ಲಿ ಬಂಧಿಸಿದ ನೌಕರರನ್ನು ಪೊಲೀಸರು ರಾತ್ರಿ 9 ಗಂಟೆ ವೇಳೆಗೆ ಬಿಡುಗಡೆ ಮಾಡಿದ್ದಾರೆ. ನಮ್ಮ ಬೇಡಿಗೆಗೆ ಸರ್ಕಾರ ಸ್ಪಂದಿಸುವ ತನಕ ಈ ಹೋರಾಟ ಮುಂದುವರಿಯಲಿದೆ. ಅಲ್ಲಿಯ ತನಕ ಬಸ್ ಸಂಚಾರ ಆರಂಭ ಆಗುವುದಿಲ್ಲ’ ಎಂದು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT