ಬೆಂಗಳೂರು: ವಿಶ್ವದಲ್ಲಿರುವ ಅದ್ಭುತ ಐತಿಹಾಸಿಕ, ಸ್ಮಾರಕ ಹಾಗೂ ನೈಸರ್ಗಿಕ ತಾಣಗಳನ್ನು ‘ವಿಶ್ವ ಪಾರಂಪರಿಕ ತಾಣ‘ಗಳು ಎಂದು ಗುರುತಿಸಲಾಗುತ್ತದೆ. ರಾಜ್ಯದಲ್ಲೂ ಇಂತಹ ಹತ್ತಾರು ಪಾರಂಪರಿಕ ತಾಣಗಳಿದ್ದು ಇವು ಕನ್ನಡ ನಾಡಿನ ಗತವೈಭವನ್ನು ಸಾರುತ್ತವೆ.

ಇಂತಹ ಸ್ಮಾರಕ, ದೇವಾಲಯಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುದಾನ ನೀಡಿ ಸಂರಕ್ಷಣೆ ಮಾಡುತ್ತವೆ. ಇದರ ಜೊತೆಗೆ ಯುನೆಸ್ಕೊ (ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್, ಅಂಡ್ ಕಲ್ಚರಲ್ ಆರ್ಗನೈಸೇಷನ್) ಸಂಸ್ಥೆ ಕೂಡ ನೆರವು ನೀಡುವ ಮೂಲಕ ಜಾಗತಿ ಮಟ್ಟದಲ್ಲಿ ಗುರುತಿಸುತ್ತದೆ.

ಇಂತಹ ತಾಣಗಳಿಗೆ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಈ ಮೂಲಕ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕವಾಗಿ ಪಸರಿಸಲಾಗುತ್ತದೆ.

ಯುನೆಸ್ಕೊ ಸಂಸ್ಥೆಯು ವಿಶ್ವದಲ್ಲಿರುವ ಅದ್ಭುತ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ‘ವಿಶ್ವ ಪಾರಂಪರಿಕ ತಾಣ’ ಎಂದು ಘೋಷಣೆ ಮಾಡುತ್ತದೆ. ನಂತರ ಸ್ಮಾರಕಗಳ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುತ್ತದೆ. ಅಪಾರ ಪ್ರಮಾಣದ ಆರ್ಥಿಕ ಸಹಾಯ ಹರಿದು ಬರುತ್ತದೆ.

ದೇಶದಲ್ಲಿ ಇಲ್ಲಿಯವರೆಗೆ 44 ಪ್ರವಾಸಿತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಲಾಗಿದೆ. ರಾಜ್ಯದಲ್ಲಿ ಹಂಪಿ, ಪಟ್ಟದಕಲ್ಲು, ಹೊಯ್ಸಳ ದೇವಾಲಯಗಳು (ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ), ಪಶ್ಚಿಮ ಘಟ್ಟಗಳು ಪಾರಂಪರಿಕ ತಾಣಗಳಾಗಿ ಗುರುತಿಸಿಕೊಂಡಿವೆ. ಪಾರಂಪರಿಕ ತಾಣದ ಪಟ್ಟಿ ಸೇರ್ಪಡೆಗೆ ಯುನೆಸ್ಕೊ ಹಲವು ಅಂಶಗಳ ಪಟ್ಟಿ ಸಿದ್ಧಪಡಿಸಿದ್ದು ಅವುಗಳ ಅರ್ಹತೆ ಪಡೆದಿರಬೇಕಾದ ಅವಶ್ಯಕತೆ ಇದೆ.

ಹಂಪಿ ಸ್ಮಾರಕಗಳು...

200 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆ ರಾಜ್ಯದ ಹೆಗ್ಗುರುತುಗಳಲ್ಲಿ ಒಂದಾಗಿದೆ. ಹಂಪಿಯಲ್ಲಿರುವ ಸ್ಮಾರಕಗಳ ಗುಂಪನ್ನು ‘ವಿಶ್ವ ಪರಂಪರೆಯ ತಾಣಗಳು’ ಎಂದು ಕರೆಯಲಾಗುತ್ತದೆ.

ವಿಠ್ಠಲ ದೇವಾಲಯ, ಹೇಮಕೂಟ ಬೆಟ್ಟದ ದೇವಾಲಯಗಳು, ಹಜಾರ ರಾಮ, ಲಕ್ಷ್ಮಿ ನರಸಿಂಹ ದೇವಾಲಯ, ರಾಣಿಯ ಸ್ನಾನಗೃಹ, ಆನೆ ಲಾಯ, ಕಮಲ ಮಹಲ್, ಮೆಟ್ಟಿಲು ತೊಟ್ಟಿ, ನದಿ ತೀರದ ಅವಶೇಷಗಳು, ಹಂಪಿ ಬಜಾರ್, ಪುರಾತತ್ವ ವಸ್ತುಸಂಗ್ರಹಾಲಯ ಸೇರಿದಂತೆ ಇನ್ನು ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.

ವಿಜಯನಗರ ಕಾಲದ ಅವಶೇಷಗಳನ್ನು ಹೊಂದಿರುವ ಈ ತಾಣಗಳು ಇತಿಹಾಸಕಾರರನ್ನು, ಸಂದರ್ಶಕರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಟ್ಟದಕಲ್ಲು, ಬಾದಾಮಿ, ಐಹೊಳೆ ಸ್ಮಾರಕಗಳು

ಚಾಲುಕ್ಯರು ಮತ್ತು ರಾಷ್ಟ್ರಕೂಟರ ವೈಭವವನ್ನು ಸಾರುವ ಪಟ್ಟದಕಲ್ಲು, ಬಾದಾಮಿ, ಐಹೊಳೆ ದೇವಾಲಯಗಳು ‘ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿವೆ.

ಪಟ್ಟದಕಲ್ಲಿನಲ್ಲಿ ಶಿವನಿಗೆ ಸಮರ್ಪಿತವಾದ 9 ಹಿಂದೂ ದೇವಾಲಯಗಳು ಹಾಗೂ ಪಟ್ಟದಕಲ್ಲಿನ ಸ್ಮಾರಕಗಳ ಸಮೂಹಕ್ಕೆ ಯುನೆಸ್ಕೊ ಮಾನ್ಯತೆ ನೀಡಿದೆ.

ದ್ರಾವಿಡ ಮತ್ತು ಇಂಡೋ ಆರ್ಯನ್ ವಿನ್ಯಾಸಗಳಲ್ಲಿ ರಚನೆಯಾದ ಜೈನ ಆಲಯಗಳು ಇಲ್ಲಿವೆ. ಜನಪ್ರಿಯ ವಿರೂಪಾಕ್ಷ, ಸಂಗಮೇಶ್ವರ, ಚಂದ್ರಶೇಖರ್, ಮಲ್ಲಿಕಾರ್ಜುನ, ಪಾಪನಾಥ, ಕಾಶಿವಿಶ್ವನಾಥ ಮತ್ತು ಗಳಗನಾಥ ದೇವಾಲಯಗಳನ್ನು ವೀಕ್ಷಣೆ ಮಾಡಬಹುದು.

ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳು

ಕರ್ನಾಟಕದ ಬೇಲೂರು, ಹಳೇಬೀಡು ಭೂಮಿಯ ಮೇಲಿರುವ ಐತಿಹಾಸಿಕ ಸ್ವರ್ಗ ತಾಣಗಳೆಂದೇ ಕರೆಯಲಾಗುತ್ತದೆ.

ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಹೊಯ್ಸಳರ ದೊರೆ ವಿಷ್ಣುವರ್ಷನ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡಿವೆ. ಸೋಮನಾಥಪುರದ ಚನ್ನಕೇಶವ ದೇವಾಲಯವು ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ನಿರ್ಮಾಣವಾಗಿದೆ.

ಈ ಸ್ಮಾರಕಗಳು ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಮತ್ತು ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಇಲ್ಲಿಗೆ ಜಗತ್ತಿನಾದ್ಯಂತ ಲಕ್ಷಾಂತರ ಪ್ರವಾಸಿಗರ ಪ್ರತಿ ವರ್ಷ ಭೇಟಿ ನೀಡುತ್ತಾರೆ. ಹೊಯ್ಸಳ ಕಾಲದ ಚಿತ್ರ ಶೈಲಿ, ವಿನ್ಯಾಸ ಮತ್ತು ಕಲೆ ಜಾಗತಿಕ ಮನ್ನಣೆ ಪಡೆದಿದೆ.

ಪಶ್ಚಿಮ ಘಟ್ಟ...

ಪಶ್ಚಿಮ ಘಟ್ಟವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಹರಡಿಕೊಂಡಿದೆ. ಸುಮಾರು 62 ಸಾವಿರ ಚದರ ಮೈಲಿ ವಿಸ್ತಾರ ಹೊಂದಿದೆ. ಇಲ್ಲಿ ಕಾವೇರಿ, ಕೃಷ್ಣ, ಗೋದಾವರಿ ಸೇರಿ ಹತ್ತಾರು ನದಿಗಳು ಹುಟ್ಟುತ್ತವೆ. ಈ ಪರ್ವತದ ಸರಾಸರಿ ಎತ್ತರ 1,200 ಮೀಟರ್(3,900 ಅಡಿ).

ಪಶ್ಚಿಮ ಘಟ್ಟ ಸಾವಿರಾರು ತಳಿಯ ಸಸ್ಯ ಹಾಗೂ ಪ್ರಾಣಿ ಸಂಕುಲಗಳಿಗೆ ನೆಲೆಯಾಗಿದ್ದು, ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ 325 ತಳಿಯ ಪ್ರಾಣಿಗಳು ಇಲ್ಲಿವೆ. ಈ ಹಿನ್ನೆಲೆಯಲ್ಲಿ ಯುನೆಸ್ಕೊ ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.