ಬೆಂಗಳೂರು: ದೆಹಲಿಯಲ್ಲಿ ದಟ್ವವಾಗಿ ಮಂಜು ಆವರಿಸಿದ್ದ ಕಾರಣ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಣಿಸಬೇಕಿದ್ದ ವಾಯುಪಡೆ ವಿಮಾನ ಟೇಕ್ ಆಫ್ ವಿಳಂಬವಾಗಿದೆ.

ಬೆಳಿಗ್ಗೆ 9 ಗಂಟೆ ಬದಲು 11.40ಕ್ಕೆ ವಿಮಾನ ಟೇಕ್ ಆಫ್ ಆಗಿದೆ. ಹೀಗಾಗಿ ಅಮಿತ್ ಶಾ ಬೆಂಗಳೂರು ತಲುಪುವುದು ಎರಡೂವರೆ ಗಂಟೆ ತಡವಾಗಲಿದ್ದು, ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.10ಕ್ಕೆ ತಲುಪಲಿದೆ.

ವಿಮಾನ ವಿಳಂಬ ಆಗಿರುವ ಕಾರಣ ವಿಕ್ಟೋರಿಯಾ ಆಸ್ಪತ್ರೆ ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಗೆ ಮರಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಿಂದ ನೇರವಾಗಿ ಎಚ್ಎಎಲ್ಗೆ ತೆರಳಿ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಸ್ವಾಗತಿಸಬೇಕಿತ್ತು.

ಅಮಿತ್ ಶಾ ವಿಳಂಬವಾಗಿ ಬರುವ ಕಾರಣ ಭದ್ರಾವತಿಯಲ್ಲಿ ನಡೆಯಲಿರುವ ರ‌್ಯಾಪಿಡ್ ಆಕ್ಷನ್ ಫೋರ್ಸ್ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಮತ್ತು ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮ ಮತ್ತು ಖಾಸಗಿ ಹೋಟೆಲ್‌ನಲ್ಲಿ ನಡೆಯಲಿರುವ ಬಿಜೆಪಿ ಪ್ರಮುಖರ ಸಭೆ ಕೂಡ ನಿಗದಿತ ಸಮಯಕ್ಕಿಂತ ವಿಳಂಬವಾಗಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.