ಬೆಂಗಳೂರು: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು (ಯುವಿಸಿಇ) ಐಐಟಿ ಮಾದರಿಯ ಜಾಗತಿಕ ಮಟ್ಟದ ಪಠ್ಯಕ್ರಮವನ್ನು ಈ ವರ್ಷದಿಂದ ಜಾರಿಗೊಳಿಸಿದೆ. ಇದರಿಂದ ಉದ್ಯೋಗಾವಕಾಶಗಳನ್ನು ಪಡೆಯಲು ಮತ್ತು ಉನ್ನತ ಶಿಕ್ಷಣಕ್ಕಾಗಿ ಹೊರ ದೇಶಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಯುವಿಸಿಇಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರತ್ಯೇಕಗೊಳಿಸಿ, 2023ರಲ್ಲಿ ಸ್ವಾಯತ್ತ ಸಂಸ್ಥೆಯನ್ನಾಗಿ ಘೋಷಿಸಿದ ಬಳಿಕ ಪಠ್ಯಕ್ರಮ ಪರಿಷ್ಕರಣೆಗೆ ಸಮಿತಿ ರಚಿಸಲಾಗಿತ್ತು. ಸಮಿತಿಯು ವಿವಿಧ ಐಐಟಿಗಳು ಹಾಗೂ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿ ಉದ್ಯೋಗಕ್ಕೆ ಪೂರಕವಾದ ಪಠ್ಯಕ್ರಮ ಸಿದ್ಧಪಡಿಸಿದ್ದು, ಅದನ್ನು ಈ ವರ್ಷ ಬಿ.ಟೆಕ್ನ ಮೊದಲ ಸೆಮಿಸ್ಟರ್ನಲ್ಲಿ ಅಳವಡಿಸಲಾಗಿದೆ.

‘ಕೃತಕಬುದ್ಧಿಮತ್ತೆಗೆ (ಎಐ) ಈಗ ಹೆಚ್ಚಿನ ಬೇಡಿಕೆ ಇರುವ ಕಾರಣ, ಎಲ್ಲ ವಿಭಾಗಗಳ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಒಂದು ವಿಷಯವಾಗಿ ಎಐ ಅನ್ನು ಬೋಧಿಸಲಾಗುತ್ತಿದೆ. ಮಾರುಕಟ್ಟೆ ಯಲ್ಲಿನ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿ ಗಳನ್ನು ಸಜ್ಜುಗೊಳಿಸಬೇಕು ಎಂಬ ಉದ್ದೇಶದಿಂದ ಕೃತಕಬುದ್ಧಿಮತ್ತೆಗೂ ಒತ್ತು ನೀಡಲಾಗಿದೆ’ ಎಂದು ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಅಧ್ಯಕ್ಷ

ಪ್ರೊ. ಎಚ್.ಆರ್.ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಯುವಿಸಿಇಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ನ ವಿಭಾಗವಿದೆ. ಈ ವಿಭಾಗಕ್ಕೆ ಸೇರದ ವಿದ್ಯಾರ್ಥಿ ಗಳಿಗೂ ಕೃತಕ ಬುದ್ಧಿಮತ್ತೆಯ ಜ್ಞಾನ ಇರಬೇಕು ಎಂಬ ಉದ್ದೇಶದಿಂದಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳಿಗೂ ಕೃತಕ ಬುದ್ಧಿಮತ್ತೆಯನ್ನು ಒಂದು ವಿಷಯವಾಗಿ ಈ ವರ್ಷದಿಂದ ಕಲಿಸಲಾಗುತ್ತಿದೆ.

‘ಧಾರವಾಡ ಮತ್ತು ಖರಗ್ಪುರ ಐಐಟಿಗೆ ಭೇಟಿ ನೀಡಿ ಅಲ್ಲಿನ ಪ್ರಾಧ್ಯಾಪಕರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ. ಇದಲ್ಲದೆ ಕಂಪನಿಗಳು ಮತ್ತು ಕೈಗಾರಿಕೆಗಳು ಏನನ್ನು ನಿರೀಕ್ಷೆ ಮಾಡುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಲಾಗಿದೆ. ಇದರಿಂದ ಉದ್ಯೋಗ ಪಡೆಯಲು, ಸಂಶೋಧನೆಯಲ್ಲಿ ತೊಡಗಲು ಅನುಕೂಲವಾಗಲಿದೆ’ ಎಂದು ಪ್ರೊ.ಎಸ್.ಎಂ.ದಿಲೀಪ್ ಕುಮಾರ್ ವಿವರಿಸಿದರು.

‘ಯುವಿಸಿಇಯಲ್ಲಿ ಹಳೆಯ ಪಠ್ಯಕ್ರಮವಿದ್ದು, ಇದನ್ನು ಕಲಿತವರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಎಂಬ ಮಾತುಗಳು ಇದ್ದವು. ಇದನ್ನು ಗಮನ ದಲ್ಲಿಟ್ಟುಕೊಂಡು ನಿರ್ದೇಶಕರಾದ ಸುಭಾಶಿಷ್ ತ್ರಿಪಾಠಿ ಅವರು ಪಠ್ಯಕ್ರಮ ಬದಲಾವಣೆಗೆ ಸಮಿತಿ ರಚಿಸಿದ್ದರು. ಈಗ ಮೊದಲ ಸೆಮಿಸ್ಟರ್ ಪಠ್ಯ ಬದಲಾಗಿದ್ದು, ಹಂತ ಹಂತವಾಗಿ ಎಲ್ಲ ಸೆಮಿಸ್ಟರ್ಗಳ ಪಠ್ಯ ಬದಲಾಗಲಿದೆ. ನಾಲ್ಕು ವರ್ಷಗಳಲ್ಲಿ ಐಐಟಿ ಹಂತಕ್ಕೆ ಯುವಿಸಿಇ ತಲುಪಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಂ.ಟೆಕ್ ಪಠ್ಯಪರಿಷ್ಕರಣೆ ಕೆಲಸವೂ ಆರಂಭವಾಗಿದೆ. ಈ ವರ್ಷ ಇಲ್ಲವೆ ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ. ಕ್ವಾಂಟಮ್ ಭೌತವಿಜ್ಞಾನ ಪಠ್ಯದಲ್ಲಿ ಸೇರಿದೆ. ಈ ಕ್ಷೇತ್ರದಲ್ಲಿ 10 ಸಾವಿರ ಉದ್ಯೋಗಾವಕಾಶ ಸೃಷ್ಟಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ಇದಕ್ಕೆ ಪೂರಕವಾಗಿ ಪಠ್ಯಕ್ರಮ ಅಳವಡಿಸಲಾಗಿದೆ ಎಂದು ವಿವರಿಸಿದರು.

ಕ್ರಿಯೇಟಿವಿಟಿ ಲ್ಯಾಬ್ ಮಂಜೂರು

ವಿದ್ಯಾರ್ಥಿಗಳಲ್ಲಿನ ಆಸಕ್ತಿ, ಕೌಶಲಕ್ಕೆ ತಕ್ಕಂತೆ ಹೊಸ ಹೊಸ ಚಟುವಟಿಕೆಗಳಲ್ಲಿ ತೊಡಗಲು ಕ್ರಿಯೇಟಿವಿಟಿ ಲ್ಯಾಬ್ ಆರಂಭಿಸಲಾಗುತ್ತದೆ. ವಿದ್ಯಾರ್ಥಿಯು ತನ್ನಲ್ಲಿರುವ ಕೌಶಲವನ್ನು ಬಳಸಿ ಹೊಸದಾಗಿ ಯಾವುದಾದರೂ ವಸ್ತುವನ್ನು ತಯಾರಿಸಬಹುದು. ಅದೇ ಕ್ಷೇತ್ರದಲ್ಲಿ ಕೋರ್ಸ್ ಮುಗಿಯುವವರೆಗೂ ಕಾರ್ಯನಿರ್ವಹಿಸಬಹುದು. ಇದಕ್ಕೆ ಅಂಕಗಳನ್ನೂ ನೀಡಲಾಗುತ್ತದೆ. ಸಂಶೋಧನೆಗೆ ಉತ್ತೇಜನ ನೀಡುವುದು ಇದರ ಮುಖ್ಯ ಉದ್ದೇಶ.

ಇದಕ್ಕೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮೋದನೆ ನೀಡಿದ್ದು, ಒಂದು ತಿಂಗಳಲ್ಲಿ ಶುರುವಾಗಲಿದೆ. ಇದಕ್ಕಾಗಿ ಹೊಸ ಕಟ್ಟಡವೂ ಸಿದ್ಧವಿದೆ ಎಂದು ದಿಲೀಪ್ ಕುಮಾರ್ ತಿಳಿಸಿದರು.

ಶೇ 87ರಷ್ಟು ಉದ್ಯೋಗಾವಕಾಶ

ಪ್ರಸಕ್ತ ಸಾಲಿನಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಶೇ 87ರಷ್ಟು ಮಂದಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಕಂಪನಿಗಳು ಕ್ಯಾಂಪಸ್ಗೆ ಭೇಟಿ ನೀಡುತ್ತಿದ್ದು, ಅವರಿಗೆ ಸಂದರ್ಶನ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರತ್ಯೇಕ ಸಭಾಂಗಣ ಸಿದ್ಧವಾಗುತ್ತಿದೆ. ಒಂದು ತಿಂಗಳಲ್ಲಿ ಇದರ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ.

ಯುವಿಸಿಇ ಆವರಣದಲ್ಲಿ ₹ 85 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಇದಲ್ಲದೆ ಜ್ಞಾನ ಭಾರತಿ ಆವರಣದಲ್ಲಿ ಹೊಸ ಕ್ಯಾಂಪಸ್ ನಿರ್ಮಾಣಕ್ಕೆ 52 ಎಕರೆ ಜಾಗ ಮಂಜೂರಾಗಿದೆ. ಅಲ್ಲಿಯೂ ಕಟ್ಟಡ ನಿರ್ಮಾಣವಾದರೆ, ಯುವಿಸಿಇಗೆ ಪೂರ್ಣ ಪ್ರಮಾಣದಲ್ಲಿ ಮೂಲ ಸೌಲಭ್ಯಗಳು ದೊರೆತಂತೆ ಆಗಲಿದೆ ಎಂದು ದಿಲೀಪ್ ಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.