ಬೆಂಗಳೂರು: ‘ವಾಲ್ಮೀಕಿ ಸಮುದಾಯದ ಇಬ್ಬರನ್ನು ಸಂಪುಟದಿಂದ ಕೈ ಬಿಡಲಾಗಿದೆ. ವಾಲ್ಮೀಕಿ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸುವಂತೆ ಒತ್ತಾಯಿಸಲು ನಾವು ದೆಹಲಿಗೆ ಹೋಗುತ್ತೇವೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸಮುದಾಯದ ಶಾಸಕರು, ಕಾಂಗ್ರೆಸ್ ನಾಯಕರು ಸಭೆ ಬುಧವಾರ ನಡೆಯಿತು.

ಸಭೆಯಲ್ಲಿ ಕೆ.ಎನ್. ರಾಜಣ್ಣ, ಶಾಸಕರಾದ ಟಿ. ರಘು ಮೂರ್ತಿ, ಬಸನಗೌಡ ದದ್ದಲ್, ಬಸನಗೌಡ ತುರುವೀಹಾಳ, ಅನಿಲ್ ಚಿಕ್ಕಮಾದು, ಬಸವಂತಪ್ಪ, ವೆಂಕಟೇಶ್, ಎಚ್.ಎಂ. ಗಣೇಶ ಪ್ರಸಾದ್, ಕೆ. ಹರೀಶ್ ಗೌಡ, ರವಿಶಂಕರ್, ಮಾಜಿ ಸಚಿವ ವೆಂಕರಮಣಪ್ಪ ಮತ್ತಿತರರು ಇದ್ದರು.

ಸಭೆಯ ಬಳಿಕ ಮಾತನಾಡಿದ ಸತೀಶ ಜಾರಕಿಹೊಳಿ, ‘ಕೆ.ಎನ್. ರಾಜಣ್ಣ ಅವರಿಗೆ ಧೈರ್ಯ ಹೇಳಿದ್ದೇವೆ. ಬೇಸರ ಏನೂ ಇಲ್ಲ. ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗುತ್ತೇನೆಂದು ಅವರು ಹೇಳಿದ್ದಾರೆ. ದೆಹಲಿಗೆ ನಿಯೋಗ ಹೋಗುವುದು ಬೇರೆ, ಅವರು ಹೋಗುವುದು ಬೇರೆ. ನನ್ನನ್ನು ವಜಾ ಮಾಡಿರುವುದರ ಇದೆ ಷಡ್ಯಂತ್ರ ಇದೆ, ಸಮಯ ಬಂದಾಗ ಹೇಳುತ್ತೇನೆಂದು ಅವರು ಹೇಳಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ’ ಎಂದರು.

‘ಸಮುದಾಯದ ಹೋರಾಟ ಬೇರೆ, ಪಕ್ಷ ಬೇರೆ. ಷಡ್ಯಂತ್ರದ ಬಗ್ಗೆ ಅವರು ಯಾವಾಗ ಹೇಳುತ್ತಾರೆ ಎನ್ನುವುದನ್ನು ಕಾದು ನೋಡೋಣ’ ಎಂದೂ ಹೇಳಿದರು.

‘ಸಂಪುಟದಿಂದ ಕೈಬಿಟ್ಟ ಇಬ್ಬರು ನಾಯಕರೂ (ನಾಗೇಂದ್ರ ಮತ್ತು ರಾಜಣ್ಣ) ವಾಲ್ಮೀಕಿ ಸಮುದಾಯದವರೇ ಆಗಿದ್ದಾರೆ. ಆ ಮೂಲಕ ಸಮುದಾಯಕ್ಕೆ ಮೇಲಿಂದ ಮೇಲೆ ಗದಾಪ್ರಹಾರ ಆಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವಾಲ್ಮೀಕಿ ಸಮುದಾಯದ ಪಾತ್ರವೂ ದೊಡ್ಡದಿದೆ. ಅದನ್ನು ಪರಿಗಣಿಸಿ ತೆರವಾದ ಎರಡೂ ಸಚಿವ ಸ್ಥಾನಗಳಿಗೆ ವಾಲ್ಮೀಕಿ ಸಮುದಾಯವರನ್ನೇ ನೇಮಿಸಬೇಕೆಂದು ಸಭೆಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸುವುದು ಒಂದು ಕಡೆಯಾದರೆ, ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ಮನವೊಲಿಸಲು ನಿರ್ಧರಿಸಲಾಗಿದೆ’ ಎಂದು ಶಾಸಕರೊಬ್ಬರು ತಿಳಿಸಿದರು.
.K.N Rajanna: ಸಚಿವ ಸಂಪುಟದಿಂದ ಕೆ.ಎನ್ ರಾಜಣ್ಣ ವಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.