ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕಾಂಗ್ರೆಸ್‌ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಚಿತ್ರ

Last Updated 6 ಅಕ್ಟೋಬರ್ 2022, 16:27 IST
ಅಕ್ಷರ ಗಾತ್ರ

ಮಂಡ್ಯ: ಭಾರತ್‌ ಜೋಡೊ ಪಾದಯಾತ್ರೆ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್‌ ಮುಖಂಡರ ಜೊತೆ ವೀರ ಸಾವರ್ಕರ್‌ ಭಾವಚಿತ್ರ ಗುರುವಾರ ಕಾಣಿಸಿಕೊಂಡಿತು. ತಪ್ಪಿನ ಅರಿವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದನ್ನು ತೆರವುಗೊಳಿಸಿದರು.

ನಾಗಮಂಗಲ ತಾಲ್ಲೂಕು ಚೀಣ್ಯ ಗ್ರಾಮದ ಬಳಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಬೆಂಗಳೂರು ಶಾಂತಿನಗರ ಶಾಸಕ ಹ್ಯಾರಿಸ್‌ ಕಡೆಯವರು ಹಾಕಿಸಿದ್ದ ಫ್ಲೆಕ್ಸ್‌ನಲ್ಲಿ ಸಾವರ್ಕರ್‌ ಭಾವಚಿತ್ರ ಇತ್ತು. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್‌ ಸಣ್ಣ ಭಾವಚಿತ್ರಗಳಿದ್ದವು. ನಡುವೆ ದೊಡ್ಡದಾಗಿ ವಿ.ಡಿ.ಸಾರ್ವರ್ಕರ್‌ ಭಾವಚಿತ್ರ ಇತ್ತು. ಜೊತೆಗೆ ರಾಹುಲ್‌ ಗಾಂಧಿ ನಿಂತಿರುವ ಚಿತ್ರವಿತ್ತು. ಕಾಂಗ್ರೆಸ್‌ ಕಾರ್ಯಕರ್ತರಿಗೆ ತಪ್ಪಿನ ಅರಿವಾಗಿ ಫ್ಲೆಕ್ಸ್‌ ತೆರವುಗೊಳಿಸುವ ವೇಳೆಗಾಗಲೇ ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಕೆಲ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ಫ್ಲೆಕ್ಸ್ ಮಾಡಿಸಲಾಗಿದೆ. ಗೂಗಲ್‌ ಹುಡುಕಾಟದಲ್ಲಿ ಸಿಕ್ಕವರ ಚಿತ್ರಗಳನ್ನು ಬಳಸಲಾಗಿದೆ. ಫ್ಲೆಕ್ಸ್‌ ಮಾಡಿಸಿದವರಿಗೆ ತಿಳಿಯದೇ ಸಾವರ್ಕರ್‌ ಚಿತ್ರವನ್ನೂ ಫ್ಲೆಕ್ಸ್‌ ಮಾಡಿಸಿದ್ದಾರೆ. ಈಗ ಅದನ್ನು ತೆಗೆಯಲಾಗಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT