ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಗೆ ‘ಭಾರತ ರತ್ನ’ ಕೊಡುವಂತೆ ಬಿಜೆಪಿ ಮಾಡಿದ ಪ್ರಸ್ತಾಪ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವಿನ ವೈಯಕ್ತಿಕ ಟೀಕೆಗೆ ಕಾರಣವಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಪರ– ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ

‘ವೀರ ಸಾವರ್ಕರ್ ಅವರ ಹೆಸರು ಬಳಸುವುದಕ್ಕೂ ಸಿದ್ದರಾಮಯ್ಯಗೆ ಯೋಗ್ಯತೆ ಇಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಸಲುವಾಗಿ ಸಾವರ್ಕರ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಇತಿಹಾಸ ಗೊತ್ತಿಲ್ಲದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಚ್ಚು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಬೇರೆಬೇರೆ ಕಾರಣಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಕನಿಷ್ಠ ಪಕ್ಷ ಸಿದ್ದರಾಮಯ್ಯ ಅಂಡಮಾನ್ ಜೈಲನ್ನಾದರೂ ನೋಡಿಕೊಂಡು ಬರಬೇಕು. ಏಕೆಂದರೆ ಸಾವರ್ಕರ್ ಅವರನ್ನು ಬ್ರಿಟಿಷರು ಅಂಡಮಾನ್ ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಸೋನಿಯಾ ಗಾಂಧಿಯನ್ನು ಮೆಚ್ಚಿಸಿದರೆ ಮತ್ತೆ ಏನಾದರೊಂದು ಹುದ್ದೆ ಗಿಟ್ಟಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಅವರು ಇದ್ದಂತಿದೆ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ತಾವೊಬ್ಬ ವಿರೋಧ ಪಕ್ಷದ ನಾಯಕ ಎಂದು ತೋರಿಸಿಕೊಳ್ಳುವ ಸಲುವಾಗಿ ದಿನಕ್ಕೊಂದು ಈ ರೀತಿ ಬೇಡವಾದ ಹೇಳಿಕೆ ನೀಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ದಿಢೀರ್ ಪ್ರೀತಿ ಹುಟ್ಟಲು ಏನು ಕಾರಣ?

‘ಬ್ರಿಟಿಷರಿಗೆ 6 ಬಾರಿ ಶರಣಾಗತಿಯ ಪತ್ರ ಬರೆದ ವಿನಾಯಕ ದಾಮೋದರ ಸಾವರ್ಕರ್ ಸ್ವಾತಂತ್ರ ಯೋಧರಾಗಲು ಹೇಗೆ ಸಾಧ್ಯ? ಅವರಿಗೆ ಭಾರತ ರತ್ನ ಏಕೆ ಕೊಡಬೇಕು ?’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು

‘ಸಾವರ್ಕರ್ ಜೈಲು ಸೇರಿದ ಎರಡು ವಾರದಲ್ಲಿ ಆರು ಬಾರಿ ಶರಣಾಗತಿ ಪತ್ರವನ್ನು ನೀಡಿದ್ದಾರೆ. ಅಂತಹ ಸಾವರ್ಕರ್ ಬಗ್ಗೆ ಬಿಜೆಪಿಗೆ ದಿಢೀರ್ ಪ್ರೀತಿ ಹುಟ್ಟಲು ಕಾರಣವೇನು? ದೇಶ ವಿಭಜನೆಗೆ ಮೊದಲ ಮೊಳೆ ಹೊಡೆದ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೋ, ಬೇಡವೋ ಎಂಬ ಬಗ್ಗೆ ಚರ್ಚೆಯಾಗಲಿ. ಕಾಂಗ್ರೆಸ್ ಚರ್ಚೆಗೆ ಸಿದ್ಧವಿದೆ’ ಎಂದರು.

ಕ್ಷಮಿಸಿಬಿಡು ಏಸು ತಂದೆಯೇ...

‘ಸಾವರ್ಕರ್ ಹಿಂದೂ ಮಹಾಸಭಾದಲ್ಲಿ ಇದ್ದರು ಎಂಬ ಕಾರಣಕ್ಕೆ ಭಾರತ ರತ್ನಕ್ಕೆ ಬಿಜೆಪಿಯವರು ಒತ್ತಾಯಿಸಿದ್ದಾರೆ. ಗಾಂಧೀಜಿ ಹತ್ಯೆ ಆರೋಪಿಗಳಿಗೆ ಭಾರತ ರತ್ನ ಬೇಡ ಅಂತ ಹೇಳಿದ್ದೇನೆ. ಹಿಂದೂಗಳಿಗೆ ಕೊಡಬಾರದು ಎಂದು ಹೇಳಿಲ್ಲ. ಗಾಂಧಿ ಸಹ ಹಿಂದೂ. ನಾನು ಕೂಡ ಹಿಂದೂ’ ಎಂದು ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕ್ಷಮಿಸಿಬಿಡು ಏಸುವೇ: ‘ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ. ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

‘ಕುಡಿದ ಮತ್ತಿನಲ್ಲಿ ಅಪಘಾತಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ ಸಚಿವ ಸಿ.ಟಿ.ರವಿ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನಾನು ಒಳ್ಳೆಯ ವಕೀಲನಾಗಿರುವ ಕಾರಣಕ್ಕಾಗಿಯೇ ಆರೋಪಿ ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಕ ಅರಿವಿರಲಿ. ನೀವು ಆ ಖಾತೆಯ ಸಚಿವರು’ ಎಂದು ಅವರು ಟೀಕಿಸಿದ್ದಾರೆ.

ವೋಟ್ ಬ್ಯಾಂಕ್ ರಾಜಕಾರಣ

ಸಾವರ್ಕರ್ ಬಗ್ಗೆ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ತಮ್ಮ ಗೌರವವನ್ನು ತಾವೇ ಕಳೆದು
ಕೊಂಡಿದ್ದಾರೆ. ಮೊದಲು ವೋಟ್ ಬ್ಯಾಂಕ್ ರಾಜಕಾರಣ ನಿಲ್ಲಿಸಬೇಕು’ ಎಂದು ಉಪಮುಖ್ಯಮಂತ್ರಿ
ಡಾ.ಸಿ.ಎನ್. ಅಶ್ವತ್ಥನಾರಾಯಣ ಒತ್ತಾಯಿಸಿದರು.

‘ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಿದರೆ ಇಡೀ ನಾಡಿಗೆ ಗೌರವ ಸಲ್ಲುತ್ತದೆ. ಅವರಿಗೆ ಆ ಗೌರವ ಸಲ್ಲಿಸಬೇಕು ಎಂದು ನಾನೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದರು,

‘ಮಹಾತ್ಮ ಗಾಂಧಿ ಅವರ ಹತ್ಯೆಯ ಸಂಚು ರೂಪಿಸುವಲ್ಲಿ ಸಾವರ್ಕರ್ ಕೂಡಾ ಇದ್ದರು. ಇಂಥ ವ್ಯಕ್ತಿಗೆ ಭಾರತರತ್ನ ಕೊಡಬೇಕೆ’ ಎಂದು ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಪ್ರಶ್ನಿಸಿದ್ದರು. ಅದೇ ಹೇಳಿಕೆಯನ್ನು ಮೈಸೂರಿನಲ್ಲೂ ಸಮರ್ಥಿಸಿದ ಅವರು, ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯವಿಲ್ಲವೆಂದು ಅವರು ಖುಲಾಸೆಗೊಂಡಿರಬಹುದು. ಅಂಥವರಿಗೆ ಭಾರತ ರತ್ನ ಕೊಡಬಾರದು ಎಂದಷ್ಟೇ ಹೇಳಿದ್ದೆ. ‘ರಾಜಕೀಯ ಪ್ರೇರಿತವಾಗಿ ಹೇಳಿಕೆ ಕೊಡುವುದನ್ನು ಇನ್ನಾದರೂ ನಿಲ್ಲಿಸಬೇಕು’ ಎಂದು ಅವರು ಸಲಹೆ ನೀಡಿದರು.

ವಿರೋಧ ಸರಿಯಲ್ಲ: ಪೇಜಾವರ ಶ್ರೀ

ವಿವಾದಾಸ್ಪದ ಕೆಲಸಗಳನ್ನು ಮಾಡಿದ ಟಿಪ್ಪು ಸುಲ್ತಾನ್‌ಗೆ ಸಿದ್ದರಾಮಯ್ಯ ಗೌರವ ಕೊಡುತ್ತಾರೆ. ವೀರ ಸಾವರ್ಕರ್‌ಗೆ ಭಾರತ ರತ್ನ ಕೊಡುವುದಕ್ಕೆ ವಿರೋಧಿಸುತ್ತಾರೆ. ಅದು ಸರಿಯಲ್ಲ’ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವೀರಸಾವರ್ಕರ್ ಅಪರಾಧಿ ಎಂದು ಅಂದಿನ ಸರ್ಕಾರವಾಗಲಿ,
ನ್ಯಾಯಾಲಯವಾಗಲಿ ಎಲ್ಲಿಯೂ ಹೇಳಿಲ್ಲ. ಹತ್ಯೆ ಮಾಡಿದ್ದರೆ ನ್ಯಾಯಾಲಯ ಶಿಕ್ಷೆ ನೀಡಬೇಕಿತ್ತು. ಆರ್‌ಎಸ್‌ಎಸ್, ಸಾವರ್ಕರ್ ಕೈವಾಡ ಇತ್ತು ಎಂದು ಹೇಳುವುದು ಸರಿಯಲ್ಲ’ ಎಂದಿದ್ದಾರೆ.

‘ಬೌದ್ಧಿಕ ದಿವಾಳಿತನ’

‘ಸಾವರ್ಕರ್ ಅವರನ್ನು ಕೇವಲ ಹಿಂದೂ ಧರ್ಮಕ್ಕೆ ಹೋಲಿಕೆ ಮಾಡುತ್ತಿರುವುದು ಸಿದ್ದರಾಮಯ್ಯ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಸಾವರ್ಕರ್‌ಗೆ ಸಂಬಂಧಿಸಿದ ‘ಆತ್ಮಾಹುತಿ’ ಪುಸ್ತಕ ಓದಿದರೆ ಸತ್ಯ ತಿಳಿಯುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಟೀಕಿಸಿದರು.

ವೈಚಾರಿಕ ಭೇದ ಇದ್ದ ಮಾತ್ರಕ್ಕೆ ಸಾವರ್ಕರ್ ದೇಶಪ್ರೇಮವನ್ನು ಯಾರೂ ಸಂಶಯದಿಂದ ನೋಡಬಾರದು. ಅವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿತ್ತು ಎಂದು ಅವರು ಹೇಳಿದರು.

ಹೇಳಿಕೆ ವಾಪಸ್‌ಗೆ ಆಗ್ರಹ

ಸಿದ್ದರಾಮಯ್ಯ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಸಾವರ್ಕರ್ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನುಭವಿಯಾದ ಸಿದ್ದರಾಮಯ್ಯ ಇತಿಹಾಸ ತಿಳಿದು ಕೊಳ್ಳಬೇಕುಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

‘ಕಾಲಾಪಾನಿ ಶಿಕ್ಷೆ ಅನುಭವಿಸಲಿ’

‘ವೀರ ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಕಾಲಾಪಾನಿ (ಕರಿ ನೀರಿನ) ಕಠಿಣ ಶಿಕ್ಷೆ ಅನುಭವಿಸಿದ್ದರು. ಆ ಶಿಕ್ಷೆಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಒಂದು ತಿಂಗಳು ಅನುಭವಿಸಲಿ. ಆಗ ಸಾವರ್ಕರ್ ದೇಶಭಕ್ತರೋ ಅಥವಾ ದೇಶದ್ರೋಹಿಯೋ ಎಂಬುದು ಗೊತ್ತಾಗುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಮೊದಲು ಸಿದ್ದಗಂಗಾ ಶ್ರೀಗೆ ಕೊಡಿ

ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟ ಸಾವರ್ಕರ್‌ಗೆ ಭಾರತ ರತ್ನ ಕೊಡುವ ಮುನ್ನ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಬದುಕು ರೂಪಿಸಿದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯನ್ನು ಪ್ರಶಸ್ತಿಗೆ ಪರಿಗಣಿಸಲಿ’ ಎಂದುವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.