ಬೆಂಗಳೂರು:ವೈಯಕ್ತಿಕ ಅಧಿಕಾರಕ್ಕಾಗಿ, ಜಾತಿ ಗುರುತನ್ನು ಬಳಸಿಕೊಳ್ಳುವ ಸ್ವ–ಸೇವಕ ರಾಜಕಾರಣಿಗಳು ಕನಕದಾಸರನ್ನು ಹೈಜಾಕ್ ಮಾಡಲು ಬಿಡಬಾರದು ಎಂದು ನಟ ‘ಆ ದಿನಗಳು’ ಚೇತನ್ ಸೋಮವಾರ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದ ಚೇತನ್, ಅದರ ಬೆನ್ನಿಗೇ ಕನಕದಾಸರ ವಿಷಯ ಪ್ರಸ್ತಾಪಿಸಿ ಗೂಢಾರ್ಥದಲ್ಲಿ ಮಾತಾಡಿದ್ದಾರೆ.
Kanakadasa in 16th c dreamt of & sang of a casteless & classless society
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) September 6, 2021
We must not let Kanaka be hijacked by self-serving politicians who use caste identity for personal power
Kanaka belongs to all of us— irrespective of caste/religion/gender— who fight for equality & justice pic.twitter.com/QlYyBdfPBy
‘ಕನಕದಾಸರು 16 ನೇ ಶತಮಾನದಲ್ಲಿ ಜಾತಿರಹಿತ ಮತ್ತು ವರ್ಗರಹಿತ ಸಮಾಜದ ಕನಸು ಕಂಡರು.ವೈಯಕ್ತಿಕ ಅಧಿಕಾರಕ್ಕಾಗಿ ಜಾತಿ ಗುರುತನ್ನು ಬಳಸುವ ಸ್ವ–ಸೇವಕ ರಾಜಕಾರಣಿಗಳು ಕನಕನನ್ನು ಹೈಜಾಕ್ ಮಾಡಲು ಬಿಡಬಾರದು.ಸಮಾನತೆ ಮತ್ತು ನ್ಯಾಯಕ್ಕಾಗಿ ಹೋರಾಡಿದ ಕನಕದಾಸರು ಜಾತಿ, ಧರ್ಮ, ಲಿಂಗವನ್ನು ಮೀರಿ ನಮ್ಮೆಲ್ಲರಿಗೂ ಸೇರಿದವರು,‘ ಎಂದು ಅವರು ಹೇಳಿದ್ದಾರೆ.
ಚೇತನ್ ತಮ್ಮ ಈ ಮಾತುಗಳನ್ನು ಯಾರನ್ನು ಉದ್ದೇಶಿಸಿ ಆಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು
ಕಳೆದ ಶನಿವಾರ ಟ್ವೀಟ್ ಮಾಡಿದ್ದ ಚೇತನ್ ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದಿದ್ದರು. ‘ಸಿದ್ದರಾಮಯ್ಯ ಕರ್ನಾಟಕ ಮತ್ತು ಕಾಂಗ್ರೆಸ್‌ನ ಪ್ರಬಲ ನಾಯಕ. ಆದರೆ, ಬ್ರಾಹ್ಮಣ್ಯವನ್ನು ಆಳವಾಗಿ ಬೇರೂರಿಸಿಕೊಂಡಿರುವ ಜಾತಿವಾದಿ ನಾಯಕ’ ಎಂದು ಹೇಳಿದ್ದರು.
‘ನಿಜವಾದ ಬದಲಾವಣೆಗೆ ಕರ್ನಾಟಕ ಮತ್ತು ಭಾರತಕ್ಕೆ ಜಾತಿ ವಿರೋಧಿ ನಾಯಕತ್ವ ಬೇಕಾಗಿದೆ. ಸಿದ್ದರಾಮಯ್ಯನವರ ಸೇವೆ ಅವರು ಹುಟ್ಟಿದ ಜಾತಿಗೆ ಮಾತ್ರ ಸೀಮಿತವಾಗಿದ್ದು, ಇತರ ಬಹು ಜನರಿಂದ ಸಿಗುವ ಮತಗಳಿಗಾಗಿ ಮಾತ್ರ ಬಣ್ಣದ ಮಾತನಾಡುತ್ತಾರೆ’ ಎಂದು ಟೀಕಿಸಿದ್ದರು.
ಇದಕ್ಕೂ ಹಿಂದೆ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನೂ ಟ್ವೀಟ್ ಮೂಲಕ ಟೀಕೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.