‘ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ. ನಾನು ಯಾರನ್ನೂ ಪ್ರಚೋದಿಸುತ್ತಿಲ್ಲ. ಕಾಂಗ್ರೆಸ್‌ನವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು. ದೇಶದ 130 ಕೋಟಿ ಜನರೂ ಸುರಕ್ಷಿತವಾಗಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾ ದೇಶ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಸಿಖ್, ಹಿಂದೂ, ಪಾರ್ಸಿ, ಜೈನರ ಸಲುವಾಗಿ ಕಾನೂನು ಮಾಡಿದ್ದೇವೆ. ಅವರು ಗೌರವದಿಂದ ಇರಬೇಕೋ ಬೇಡವೋ? ಆ ಮೂರು ರಾಷ್ಟ್ರಗಳೂ ಇಸ್ಲಾಂ ರಾಷ್ಟ್ರವೆಂದು ಘೋಷಿಸಿಕೊಂಡಿವೆ. ಅಲ್ಲಿರುವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ’ ಎಂದು ದೂರಿದರು.